ಏನು ಈ ಪ್ರಕರಣ? ಯಾರು ಈ ನಿವೇದಿತಾ! ಕೋರ್ಟ್ ಹೊರoಗಣದಲ್ಲಿ ನಡೆದ ಕೃತ್ಯಕ್ಕೆ ಶಿಕ್ಷೆ ಇಲ್ಲವೇ? ಈ ಎಲ್ಲಾ ವಿಚಾರಕ್ಕೂ ಸಂಪೂರ್ಣ ಮಾಹಿತಿ ಇಲ್ಲಿದೆ..
” ಯದ ಯದ ಹಿ ಧರ್ಮಸ್ಯ ” ಎಂಬ ಭಗವತ್ ಗೀತೆಯ ಸಾಲುಗಳಿಂದ ಆರಂಭವಾಗುವ ಸಿಂಪಲ್ ಇಂಟ್ರೋ, ಹತ್ತು ನಿಮಿಷಗಳ ಕಾಲ ನಾಯಕನ ಸೌಜನ್ಯ, ಸೌಮ್ಯತೆ ತೋರುತ್ತದೆ. ಹೊಡೆದಾಟವಿಲ್ಲದ ಮಾಸ್ ಡೈಲಾಗುಗಳಿಲ್ಲದ ಸಿಂಪಲ್ ರಿಯಸ್ಟಿಕ್ ಕಥೆ. ಚಿತ್ರ ನುಣುಚಿದಷ್ಟು ಕಬ್ಬಿನ ಜಲ್ಲೆಯಂತೆ ಸಿಹಿ ಭರಿಸುತ್ತಾ ಸಾಗುತ್ತದೆ.
ಸುಳ್ಳಲ್ಲ, ಅಜಯ್ ರಾವ್ ಅವರ ನಿರ್ಮಾಣದ ಮೊದಲ ಚಿತ್ರವಾದರೂ ಕಥೆ ಡಬ್ಬಿ ಆಯ್ಕೆಯಲ್ಲಿ ಪರಿಣಿತರಂತೆ ಕಾಣುತ್ತಾರೆ.
ಭರತ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅಜಯ್ ರಾವ್ ಈಗ ತಾನೆ ಕಾನೂನು ಪದವಿ ಪಡೆದು ಹೊರ ಹೊಮ್ಮಿರುತ್ತಾರೆ.
ಮಿಡಿಲ್ ಕ್ಲಾಸ್ ಹುಡುಗ, ಬ್ಯಾಚುಲರ್ ರೂಮ್, ಕೊಳಕು ಕಛೇರಿ, ಬಾಟಲ್ ಆಧಾರಿತ ಸ್ನಾನದ ಶವರ್, ನಡುವೆ ಒಂದಿಷ್ಟು ಪ್ರೀತಿ ಪ್ರೇಮ ಇದೆಲ್ಲಾ ಕಥೆಯ ಸೈಡ್ ಎಲಿಮೆಂಟ್.
ಕೆಲಸದಲ್ಲಿ ಅನುಭವವಿರದ ಕಾರಣ ಕೈಗೆ ಎಟುಕಿದ ಕೇಸುಗಳಲ್ಲಿ ದಿನ ಖರ್ಚಿಗೆ ಸಾಗಿಸುತ್ತಿರುವ ಭರತ್,
ಕ್ರಿಮಿನಲ್ ಕೇಸ್ ತೆಗೆದುಕೊಳ್ಳಬೇಕು ಎನ್ನುವ ಹಂಬಲವಿರುತ್ತದೆ. ನಂತರ ತಾಯಿ ಪಾತ್ರದಲ್ಲಿ ಬರುವ ಅರ್ಚನಾ ಜೋಯಿಸ್ ಅವರ ಪ್ರಕರಣ ಕಥೆಯ ಆಯಾಮ ಬದಲಿಸುತ್ತದೆ. ಇಲ್ಲಿಂದ ಶುರುವಾಗುವ ಸ್ಟೋರಿ ಕಿಂಚಿತ್ತೂ ಬೇಸರ ಭಾವ ವ್ಯಕ್ತಪಡಿಸುವುದಿಲ್ಲ. ಚಕ್ರವ್ಯೂಹ ಭೇದಿಸುವಂತೆ ಕೇಸ್ ಗಳನ್ನು ಭೇದಿಸುತ್ತಾ ಸಾಗುವ ನಾಯಕ ಪ್ರತಿ ಎಳೆಯಲ್ಲೂ ಕುತೂಹಲಕಾರಿ ಚಿತ್ರಣವನ್ನು ನೇಯುತ್ತಾ ಸಾಗುತ್ತಾನೆ.
ಕೋರ್ಟ್ ಆವರಣದಲ್ಲಿ ಆರಂಭಗೊಳ್ಳುವ ಶೂಟ್ ಔಟ್ ಚಿತ್ರದ ಮೊದಲ ಸನ್ನಿವೇಶ ಕಥೆಯ ಪೂರ್ತಿ ಸ್ವರೂಪವನ್ನು ಹಿಡಿತದಲ್ಲಿ ಇಟ್ಟುಕೊಂಡು ಸಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ಸಾಗುವ ಧೋರಣೆ, ನ್ಯಾಯದ ಕಾಲಮಿತಿ, ಎಂ.ಲ್.ಎ ಅಧಿಕಾರಿಗಳ ದರ್ಪ, ಸ್ತ್ರೀ ಹಾಗೂ ಮಕ್ಕಳ ಮೇಲೆ ಆಗುತ್ತಿರುವ ಅತ್ಯಾಚಾರ ಪಟಾಲುಗಳನ್ನು ಎಳೆ ಎಳೆಯಾಗಿ ಸೂಕ್ಷ್ಮ ರಿವಾಜಿನಲ್ಲಿ ತೋರಿಸಿದ್ದಾರೆ.
ಕಥೆಯ ಮೊದಲಾರ್ಧ ತಕ್ಕಂತೆ ಇದ್ದು ತೀರ ಸಹಜ ಸಂಭಾಷಣೆಯಲ್ಲಿ ಸಾಗುತ್ತದೆ. ದ್ವಿತೀಯ ಅರ್ಧದಲ್ಲಿ ತಿರುಚು ಮರುಚುಗಳು ಹೆಚ್ಚಿವೆ. ಅಂತಿಮದಲ್ಲಿ ಬರುವ ಯಾವ ಡೈಲಾಗ್ ಗಳು ಅಷ್ಟಾಗಿ ಪ್ರಾಯೋಗಿಕ ಸಕರಾತ್ಮಕವಾಗಿ ಒಪ್ಪುವಂತದ್ದು ಅಲ್ಲ, ಆದರೂ ಅಜಯ್ ರಾವ್ ಅವರ ನಟನಾ ಕೌಶಲ್ಯಕ್ಕೆ ಬಿರುದು ಕೊಟ್ಟರು ಸಾಲದು. ಇನ್ನು ಕಥೆಯಲ್ಲಿ ನೋಡುವುದು ಆದರೆ,
ನಿವೇದಿತಾ ಪ್ರಕರಣ ಏನು?
ಶ್ಯಾಮಿಲಿ ಎಂಬ ಪುಟ್ಟ ಬಾಲಕಿಗೆ ನ್ಯಾಯ ಸಿಗುವುದೇ?
ಕೋರ್ಟ್ ನಲ್ಲಿ ಮಗಳ ನ್ಯಾಯಕ್ಕೆ ನಿಂತ ತಾಯಿಯೇ ಸೆರೆಮನೆ ಸೇರುವ ಸಂದಿಗ್ಧ ಪರಿಸ್ಥಿತಿ, ಇದೆಲ್ಲಾ ಕಥೆಯ ಮುಖ್ಯಘಟಕ.
ಸಿನಿಮಾದಲ್ಲಿ ಕ್ಯಾಮೆರಾ ಕಣ್ಣಿನ ಕಾರ್ಯತಂತ್ರ ತೀಕ್ಷ್ಣವಾಗಿ ಕಂಡಿದ್ದು ಕೃತಕ ಬುದ್ದಿ ಮತ್ತೆ ಮತ್ತು ಇನ್ನಿತರ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುವಲ್ಲಿ ತಂಡ ಸಂಪೂರ್ಣವಾಗಿ ಯಶಸ್ವಿಗೊಂಡಿದೆ. ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಪ್ರಕಾಶ್ ಬೆಳವಾಡಿ ನಟನೆ ಅದ್ಬುತವಾಗಿ ಮೂಡಿಬಂದಿದ್ದು, ಇನ್ನು ಚಿತ್ರದಲ್ಲಿ ಪ್ರೀತಿ, ಆಗೊಮ್ಮೆ ಇಗೊಮ್ಮೆ ಕಾಣಸಿಗುವ ಮರುಭೂಮಿಯ ಮರೀಚಿಕೆಯಂತೆ ರೂಪಕವಾಗಿದೆ. ಚಿತ್ರದಲ್ಲಿ ಗುನುಗುವಂತಹ ಹಾಡುಗಾರಿಕೆ ಇಲ್ಲದೆ ಹೋದರೂ ಒಂದು ಎರಡು ಸನ್ನಿವೇಶದಲ್ಲಿ ಬರುವ ಬಿ.ಜಿ. ಎಂ ಗಳು ಚಿತ್ರದ ಹಿಡಿತ ಬಿಟ್ಟಿಲ್ಲ. ಹಾಗೂ ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಪ್ರಕರಣದ ಬಗ್ಗೆ ಮಾಹಿತಿಗಾಗಿ ಚಲನಚಿತ್ರ ನೋಡಲೇ ಬೇಕು. ಪೋಕ್ಸೋ ಕಾಯ್ದೆಯನ್ನು ಚಿತ್ರದಲ್ಲಿ ತಂದಿದ್ದಾರೆ ಚಿತ್ರ ಇನ್ನಷ್ಟು ಉಜ್ವಲಿಸುವಲ್ಲಿ ಬೇರೆ ಮಾತು ಇರಲಿಲ್ಲ. ಒಟ್ಟಾರೆ ಚಲನಚಿತ್ರ ಪೈಸಾ ವಸೂಲ್ ಎಂದರೆ ತಪ್ಪಾಗದು ಹಾಗೂ ಸಮಾಜಕ್ಕೆ ಒಂದೊಳ್ಳೆ ಸಂದೇಶ ಸಾರುವಲ್ಲಿ ಗೆದ್ದಿದೆ.
- ರಕ್ಷಿತ್, ಕುವೆಂಪು ವಿಶ್ವವಿದ್ಯಾಲಯ
ಶಂಕರಘಟ್ಟ
