ಹನೂರು:ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಪೊನ್ನಾಚಿ ಗ್ರಾಮದ ಮಾರ್ಗದ ತಾಳುಬೆಟ್ಟ ತಿರುವು ಮಧ್ಯ ಅಪಾಯದ ಸ್ಥಿತಿಯಲ್ಲಿ ಇರುವಂಥಹ ಮರಗಳು ಬೀಳುವ ಭೀತಿ ಎದುರಾಗಿದ್ದು,ಮುಂದೆ ಆಗುವ ಅಪಾಯಕ್ಕೂ ಮುನ್ನ ಮರಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿ ಸಿದ್ದರೆ.ಇಲ್ಲಿನ ಮರಗಳು ಈಗಾಗಲೇ ರಸ್ತೆಯತ್ತ ವಾಲಿದೆ,ಕೆಲವು ಮರಗಳು ಕೆಳಗೆ ಬೀಳುವುದನ್ನು ಬಂಡೆ ಕಲ್ಲುಗಳು ತಡೆದಿವೆ.
ಎರಡರಿಂದ ಮೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆಯಲ್ಲಿ ಸಂಚರಿಸುವ ನೂರಾರು ಜನರು ವಿದ್ಯಾರ್ಥಿಗಳು ಮರಗಳು ಬೀಳುವ ಆತಂಕದಲ್ಲಿದ್ದಾರೆ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಇನ್ನೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಆದಷ್ಟು ಬೇಗ ಅಧಿಕಾರಿಗಳು ಎಚ್ಚೆತ್ತು ಈ ಮರಗಳನ್ನು ತೆರವುಗೊಳಿಸಿ ಸಾರ್ವಜನಿಕರ ಆತಂಕ ದೂರ ಮಾಡಬೇಕೆಂದು ಇಲ್ಲಿನ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ.
ವರದಿ-ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
One Response
ತುಂಬಾನೇ ಚನ್ನಾಗಿ ಇದೆ