ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೋಯಿಂಗ್ 787-8 ಪರಿಚಯ

ಬೋಯಿಂಗ್ 787-8 ಮಧ್ಯಮ ಗಾತ್ರದ, ಅವಳಿ ಎಂಜಿನ್ ಇರುವ ಅಗಲ ಗಾತ್ರದ ಜೆಟ್ ವಿಮಾನ. ಹೆಸರೇ ಸೂಚಿಸಿದಂತೆ ಇದನ್ನು ಪ್ರಖ್ಯಾತ ಏರ್ ಲೈನ್ ಕಂಪೆನಿಯಾದ ಬೋಯಿಂಗ್ ತಯಾರಿಸುತ್ತದೆ. ಬೋಯಿಂಗ್ ವಾಣಿಜ್ಯ, ಮಿಲಿಟರಿ ಹಾಗೂ ಹೆಲಿಕ್ಯಾಪ್ಟರ್ ಗಳನ್ನು ಉತ್ಪಾದನೆ ಮಾಡುವುದರಲ್ಲಿ ಪ್ರಾವೀಣ್ಯತೆ, ಪ್ರಾಯೋಗಿಕ ಜ್ಞಾನ ಹಾಗೂ ತಾಂತ್ರಿಕ ಪರಿಣಿತಿ ಹೊಂದಿದೆ

ಇಂಧನ ದಕ್ಷತೆ, ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಹಾಗೂ ಸುಖಕರವಾದ ಪ್ರಯಾಣದ ಅನುಭವ, ದೊಡ್ಡದಾದ ಕಿಟಕಿಗಳು ಹಾಗೂ ಇಲೆಕ್ಟ್ರಾನಿಕ್ ಡಿಮ್ಮಿಂಗ್ (ಸ್ವಿಚ್ ಮೂಲಕ ಎಷ್ಟು ಬೆಳಕು ಬೇಕೋ ಅಷ್ಟು ಬರುವ ಹಾಗೆ ನಿಯಂತ್ರಣ ಮಾಡುವ ತಂತ್ರಜ್ಞಾನ) ಹೊಂದಿದೆ.

ಬೋಯಿಂಗ್ 787-8 ವಿಮಾನದ ಶೇಕಡಾ 50% ರಷ್ಟು ಪ್ರಾಥಮಿಕ ರಚನೆ (primary structure ) ಕಾರ್ಬನ್ ಫೈಬರ್ ಬಲವರ್ಧಿತ ಪಾಲಿಮರ್ (CFRP) ನಿಂದ ಮಾಡಲಾಗಿದೆ, ಇದರಿಂದ ಈ ವಿಮಾನದ ತೂಕ ಕಡಿಮೆಯಾಗಿ ಇಂಧನ ದಕ್ಷತೆ ಹೆಚ್ಚಾಗುತ್ತದೆ.

ಬೋಯಿಂಗ್ 787-8 ವಿಮಾನವನ್ನು – ಅಮೆರಿಕನ್ ಏರ್ ಲೈನ್ಸ್, ಬ್ರಿಟಿಷ್ ಏರ್ ವೇಸ್, ಜಪಾನ್ ಏರ್ ಲೈನ್ಸ್, ಕತಾರ್ ಏರ್ ವೇಸ್, ಏರ್ ಇಂಡಿಯಾ ಹಾಗೂ ಇಥಿಯೋಪಿಯನ್ ಏರ್ ಲೈನ್ಸ್ ಉಪಯೋಗಿಸುತ್ತಾರೆ.

ಬೋಯಿಂಗ್ 787-8 ವಿಮಾನದ ವೆಚ್ಚ $ 200 ಮಿಲಿಯನ್

ಬೋಯಿಂಗ್ 787-8 ಡ್ರೀಮ್ ಲೈನರ್ ನಲ್ಲಿ 2.3 ಮಿಲಿಯನ್ ಬಿಡಿ ಭಾಗಗಳಿವೆ. ವಿಮಾನ ಯಾನ ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿರುವ ವಿಶ್ವದ ಅನೇಕ ಕಂಪನಿಗಳಿಂದ ಇದನ್ನು ಪೂರೈಕೆ ಮಾಡಲಾಗಿದೆ.

ಪ್ರಯಾಣಿಕರಿಲ್ಲದಿರುವಾಗ ಈ ವಿಮಾನ 117,617 ಕೆ.ಜಿ ಯಷ್ಟು ತೂಗುತ್ತದೆ. (ಸುಮಾರು 29 ಆನೆಗಳ ತೂಕ).

ಬೋಯಿಂಗ್ 787-8 ವಿಮಾನದಲ್ಲಿ ಸ್ಮೂತ್ ರೈಡ್ ಟೆಕ್ನಾಲಜಿ ಅಳವಡಿಸಲಾಗಿದೆ. ವಿಮಾನ ಹಾರಾಡುವಾಗ ಯಾವುದೇ ಪ್ರಕ್ಷುಬ್ಧತೆಯಾದರೂ ಅದಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಹಾರುತ್ತದೆ. ಪ್ರಕ್ಷುಬ್ಧತೆ (Turbulence) ಯನ್ನು ಗುರುತಿಸಲು ವಿಮಾನದಲ್ಲಿ ಸೆನ್ಸಾರ್ ಗಳನ್ನು ಅಳವಡಿಸಲಾಗಿದೆ, ಈ ಸೆನ್ಸಾರ್ ಗಳು ಕೋನೀಯ ವೇಗ (Angular Velocity) ಹಾಗೂ ಒತ್ತಡ ಹಂಚುವಿಕೆ (Pressure Distribution) ನಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸುತ್ತದೆ. ಈ ಮಾಹಿತಿಯನ್ನು ಅನುಸರಿಸಿ ಸಾಫ್ಟ್‌ವೇರ್ ಅಲ್ಗಾರಿದಮ್ ಮೂಲಕ ವಿಮಾನ ಹಾರಾಟದಲ್ಲಿ ಯಾವ ರೀತಿಯಾದ ಬದಲಾವಣೆ ಮಾಡಿಕೊಳ್ಳಬೇಕೆಂಬುದನ್ನು ಸೂಚಿಸುತ್ತದೆ.

ವಿಶ್ವದ ಅತ್ಯುತ್ತಮ ವಿಮಾನದಲ್ಲಿ ಒಂದಾದ ಬೋಯಿಂಗ್ 787-8 ನ ವಿಶ್ವಾಸಾರ್ಹತೆ ಇತ್ತೀಚಿನ ದಿನಗಳಲ್ಲಿ ಕುಸಿದಿದೆ. ದೋಷಯುಕ್ತ ಬಿಡಿ ಭಾಗಗಳು, ಸುರಕ್ಷತೆಯ ಕೊರತೆ ಹಾಗೂ ಉತ್ಪಾದನೆಯ ಗುಣಮಟ್ಟ ಕುಸಿದಿರುವ ಬಗ್ಗೆ ವಿಮಾನಯಾನದ ತಜ್ಞರು ಹೇಳಿದ್ದಾರೆ

ಬೋಯಿಂಗ್ ಸಂಸ್ಥೆಯ ವಿಮಾನಗಳು ತೀರಾ ಕಳಪೆಯಾಗಿವೆ ಎಂದು ಡಚ್ ಏರ್ ಲೈನ್ಸ್ ನ ಹೇಳಿತ್ತು. ಇದು ಇಲ್ಲಿಗೆ ನಿಲ್ಲಲಿಲ್ಲ. 787 ಡ್ರೀಮ್ ಲೈನರ್ ನ ಉತ್ಪಾದನೆಗೆ ಬೇಕಾಗುವ ಟೈಟಾನಿಯಂ ಮತ್ತು ಅಲ್ಯೂಮಿನಿಯಂ ಪೂರೈಕೆ ಮಾಡುತ್ತಿದ್ದ ಸರಬರಾಜುದಾರರ ವಿರುದ್ಧ ಇಟಲಿ ದೇಶದಲ್ಲಿ ತನಿಖೆ ನಡೆಸಲಾಯಿತು. ಅತ್ಯಂತ ಕಳಪೆ ಮಟ್ಟದ ಮಿಶ್ರಲೋಹಗಳನ್ನು ಪೂರೈಕೆ ಮಾಡುವ ಮೂಲಕ ವಿಮಾನದ ಸುರಕ್ಷತೆಯನ್ನು ರಾಜಿಮಾಡಿಕೊಳ್ಳಲಾಗಿತ್ತು ಎಂಬ ಆಪಾದನೆಯಿತ್ತು.

ಇನ್ನೊಂದು ಆಶ್ಚರ್ಯದಾಯಕ ಸಂಗತಿ ಏನೆಂದರೆ, ಇದೆ 787-8 ಐವರಿ ಕೋಸ್ಟ್ ನಲ್ಲಿ ಹಾರಾಡುವಾಗ ಹಠಾತ್ತನೆ ಎತ್ತರದ ನಷ್ಟ (loss of altitude) ಆಯಿತು. ಸುಮಾರು 38 ಜನ ಪ್ರಯಾಣಿಕರಿಗೆ ತೀವ್ರತರವಾದ ಗಾಯಗಳಾದವು.
(ನಿನ್ನೆ ನಡೆದ AI-171 ರಲ್ಲೂ ಸಹ ಪೈಲಟ್ ಗೆ ಬೇಕಾದ ಲಿಫ್ಟ್ ಸಿಗದ ಕಾರಣ ದುರಂತ ಸಂಭವಿಸಿತು).

ಏಪ್ರಿಲ್ 2024 ನಲ್ಲಿ ಬೋಯಿಂಗ್ ನ ಗುಣಮಟ್ಟ ವಿಭಾಗದ ಇಂಜಿನಿಯರ್ ಆದ ಸಾಮ್ ಸೋಲೇ ಪುರ್ ಎಂಬುವವರು ಬೋಯಿಂಗ್ ನ ದತ್ತಾಂಶವನ್ನು ಟೆಸ್ಟಿಂಗ್ ಮಾಡಿ ವಿಮಾನದ ಉತ್ಪಾದನೆಯಲ್ಲಿ ನಿಗದಿತ ಗುಣಮಟ್ಟ ಅಳವಡಿಸುತ್ತಿಲ್ಲದ ಕಾರಣದಿಂದ ಸುರಕ್ಷತೆಗೆ ಮಾರಕವಾಗಬಹುದು ಎಂದು ಹೇಳಿದ್ದರು. ಸ್ಯಾಮ್ ಅಮೇರಿಕಾ ಸೆನೆಟ್ ಮುಂದೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.

ಅಮೆರಿಕಾದ ಸೆನೆಟ್ ನ ವಾಣಿಜ್ಯ ಸಮಿತಿಯೊಂದು ತನಿಖೆ ಕೈಗೊಂಡು ಬೋಯಿಂಗ್ ಉತ್ಪಾದನೆಯಲ್ಲಿ ಸಾಕಷ್ಟು ದೋಷಗಳು ಕಂಡುಬಂದಿವೆ ಎಂದು ವರದಿ ನೀಡಿತು.

ಬೋಯಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವ ಗುಣಮಟ್ಟ ನಿಯಂತ್ರಣದ ಇಂಜಿನಿಯರ್ ಜಾನ್ ಬರ್ನೆಟ್ ಎಂಬುವವರು ಸಹ ಅಸೆಂಬ್ಲಿ ಲೈನ್ ನಲ್ಲಿ ದೋಷಯುಕ್ತ ಬಿಡಿ ಭಾಗಗಳನ್ನು ಉಪಯೋಗಿಸುತ್ತಿದ್ದರು, ವಿಮಾನದ ಸುರಕ್ಷತೆಯ ದೃಷ್ಟಿಯಿಂದ ಇದನ್ನು ನಿಲ್ಲಿಸಲು ಸೂಚಿಸಿದ್ದೆ ಎಂದು ಹೇಳಿದ್ದರು. ಇದಲ್ಲದೆ ಏರ್ ಲೈನ್ ನ ಆಮ್ಲಜನಕ ನಿಯಂತ್ರಣ ವ್ಯವಸ್ಥೆಯಲ್ಲೂ ಸಹ ದೋಷಗಳನ್ನು ಜಾನ್ ಪತ್ತೆಮಾಡಿದ್ದರು.

ಬೋಯಿಂಗ್ ನಲ್ಲಿ ಸುರಕ್ಷತೆ ಹಾಗೂ ಕಳಪೆ ಉತ್ಪಾದನಾ ಗುಣಮಟ್ಟವನ್ನು ಪರೀಕ್ಷೆ ಮಾಡಲು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ನಡೆಸಿದ ಆರು ವಾರಗಳ ಆಡಿಟ್ ನಲ್ಲಿ ಸಂಸ್ಥೆಯ ಸುರಕ್ಷತಾ ವಿಭಾಗ ಸೇರಿದಂತೆ, ಅಸೆಂಬ್ಲಿ ಲೈನ್ ನಲ್ಲಿ ಸಾಕಷ್ಟು ದೋಷಗಳನ್ನು ಪತ್ತೆಹಚ್ಚಿತು.

-ಪವನ್.ಎಸ್, ಬೆಂಗಳೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!