ದೇಹವ ತೊಳೆಯುವುದು ನೀರಿನಿಂದ,
ಮನವ ತೊಳೆಯುವುದು ಯೋಗಭ್ಯಾಸದಿಂದ.
ಆರೋಗ್ಯವೇ ಭಾಗ್ಯ, ನೆಮ್ಮದಿ ನೀಡುವ ಯೋಗ,
ಜೀವನವ ಸಾಕ್ಷಾತ್ಕಾರಗೊಳಿಸುವ ಮಾರ್ಗ.
ಎಲ್ಲರೂ ಮಾಡೋಣ ಯೋಗ
ಇದರಿಂದ ಮಾಯವಾಗುತ್ತೆ ರೋಗ
ಇದರಿಂದ ಸಿಗುತ್ತೆ ಆರೋಗ್ಯವೇ ಮಹಾಭಾಗ್ಯ
ಸ್ವಸ್ಥ ಸೌಂದರ್ಯಕ್ಕೆ ಬೇಕು ಯೋಗ
ಎಲ್ಲರೂ ಮಾಡೋಣವೇ ಯೋಗ
ನಮಗೆಲ್ಲರಿಗೂ ಸಿಗುವುದು ಆರೋಗ್ಯದ ಸುಯೋಗ
ಪ್ರತಿದಿನ ಯೋಗದ ಸೂರ್ಯ ನಮಸ್ಕಾರ
ಇದುವೇ ನಮ್ಮ ಭಾರತೀಯ ಹೆಮ್ಮೆಯ ಸಂಸ್ಕಾರ
ಸರ್ವಂಗಸನಕ್ಕೂ ಬೇಕು ಯೋಗ
ದೇಹ ಬಂಗಾರವಾಗಲು ವಜ್ರಾಸನ ಯೋಗ
ಉಸಿರಾಟದ ಪ್ರಾಣಯಾಮ ಯೋಗ
ತನು ಮನಗಳ ಸಂಯೋಜನೆಯೇ ಯೋಗ
ಸರ್ವಜನರ ಆರೋಗ್ಯದ ಕೀಲಿ ಕೈ
ರೋಗಗಳಿಗೆ ಬಿತ್ತು ಯೋಗದ ಜೈ
ಜಾಗೃತಿಯಲ್ಲಿ ಆರೋಗ್ಯದ ಮೇಲೆ
ಪ್ರತಿದಿನವೂ ನಡೆಯರಿ ಯೋಗದ ಮೇಲೆ
ಜೀವನವಾಗುವುದು ಬಂಗಾರದ ಓಲೆ
ಬನ್ನಿ ಪ್ರತಿದಿನ ಆಚರಿಸೋಣ ಯೋಗದ ದಿನಾಚರಣೆ
✍️ ಜಿಲಾನಸಾಬ್ ಬಡಿಗೇರ




















