ಉತ್ತರ ಪ್ರದೇಶದ / ರಾಂಪುರ : ಮಗ ಮದುವೆಯಾಗಬೇಕಾಗಿದ್ದ ಯುವತಿಯನ್ನು ನೋಡಿದ ಆತನ ಅಪ್ಪನಿಗೆ ಆಕೆಯ ಮೇಲೆ ಲವ್ ಎಟ್ ಫಸ್ಟ್ ಸೈಟ್ ಆಗಿತ್ತು! ತನಗೆ ಸೊಸೆಯಾಗಬೇಕಾದವಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದು ಬಯಸಿದ ಆತ ಆಕೆಯ ಜೊತೆ ಓಡಿಹೋಗಿ ತಾನೇ ಮದುವೆಯಾಗಿದ್ದಾನೆ. ಈ ಮೂಲಕ ಆತ ತನ್ನ ಮಗನಿಗೆ ಶಾಕ್ ನೀಡಿದ್ದಾನೆ. ಉತ್ತರ ಪ್ರದೇಶದ ರಾಂಪುರದಲ್ಲಿ ಈ ಘಟನೆ ನಡೆದಿದೆ.
ತನ್ನ ಸೊಸೆಯಾಗಬೇಕಾದವಳು ಸವತಿಯಾಗಿ ಬಂದಿದ್ದನ್ನು ಕಂಡ ತಾಯಿ ತನ್ನ ಗಂಡ ಮತ್ತು ಆತನ ಹೊಸ ಹೆಂಡತಿಯ ಜೊತೆ ಜಗಳವಾಡಿ, ಅವರಿಬ್ಬರನ್ನೂ ಮನೆಯಿಂದ ಹೊರಗೆ ಹಾಕಿದರು. ಶಕೀಲ್ ಎಂಬ ಯುವಕ ಮದುವೆಯಾಗಬೇಕಿದ್ದ ಯುವತಿಯನ್ನು ಆತನ 55 ವರ್ಷದ ತಂದೆ ಮದುವೆಯಾಗಿದ್ದಾನೆ. ಇದರಿಂದ ಜಗಳ ಹೆಚ್ಚಾಗಿ, ಕೊನೆಗೆ ಆ ಗ್ರಾಮಸ್ಥರು ಅವರಿಬ್ಬರನ್ನೂ ಗಡಿಪಾರು ಮಾಡಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















