
ಬೆಳಗಾವಿ: ದಿ. 21/06.2025 ರಂದು ಬೆಳಗ್ಗೆ ಅಥಣಿಯ ವಿಕ್ರಂಪೂರದಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ಭಾರತೀಯ ಜನತಾ ಪಾರ್ಟಿ ಅಥಣಿ ಮಂಡಲ ವತಿಯಿಂದ ಅಂತರಾಷ್ಟ್ರೀಯ 11 ನೆಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಈ ಯೋಗಾ ಪರೀಕ್ಷಕರಾಗಿ ವಿವೇಕಾನಂದ ಮೇಕನಮರಡಿ, ಮತ್ತು ಮಹೇಶ್ ಪುಟಾಣಿಯವರು ನಡೆಸಿಕೊಟ್ಟರು. ಈ ಯೋಗ ದಿನಾಚರಣೆಯನ್ನು ಶಿವಪ್ರಸನ್ನ ಹಿರೇಮಠರವರು ಆಯೋಜನೆ ಮಾಡಿದ್ದು
ಈ ಯೋಗಾ ಶಿಬಿರದಲ್ಲಿ ಅಥಣಿಯ ಮಾಜಿ ಶಾಸಕರಾದ ಶಹಜಾನ್ ಡೋಂಗರಗಾವ, ಅಥಣಿಯ ಬಿಜೆಪಿ ಮುಖಂಡರುಗಳಾದ ಅಜಿತ್ ಪವಾರ, ಗಿರೀಶ ಬುಟಾಳಿ, ನಾನಾಸಾಬ್ ಅವತಾಡೆ, ಧರೆಪ್ಪ ಟಕ್ಕಣ್ಣವರ್, ಉತ್ತಮ ಸಂಕ, ಶಂಕರ ದೇಸಾಯಿ, ಮುರುಗೇಶ ಕುಮಟ್ಟಳ್ಳಿ, ಹರೀಶ್ ಶಿರೂರ, ಅಣ್ಣಾಸಾಬ ದರೂರ, ಇನ್ನು ಅನೇಕ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಮುಖಂಡರುಗಳು ಪಾಲ್ಗೊಂಡಿದ್ದರು.
ವರದಿ : ವಿಠ್ಠಲ ಖೋಕಾಟೆ, ಅಥಣಿ



















