ಬಳ್ಳಾರಿ / ಕಂಪ್ಲಿ : ಸ್ಥಳೀಯ ವಿರುಪಣ್ಣ ತಾತ ಮಠದ ಆವರಣದಲ್ಲಿ ಕಂಪ್ಲಿ ತಾಲೂಕು ಪೇಂಟರ್ ಕಾರ್ಮಿಕರ ಸಂಘ ರಚಿಸುವ ಜತೆಗೆ ನೂತನ ಪದಾಧಿಕಾರಿಗಳನ್ನು ಭಾನುವಾರ ನೇಮಕ ಮಾಡಲಾಯಿತು.
ಈ ಸಂಘಕ್ಕೆ ಎಂ.ಮಾರುತಿ (ಅಧ್ಯಕ್ಷ), ಕೆ.ವಿರೂಪಾಕ್ಷಿ, ಬಿ.ಮೌನೇಶ (ಗೌರವಾಧ್ಯಕ್ಷ), ಎಸ್.ಬೆಟ್ಟರಾಜ್, ಬಿ.ಬಸವರಾಜ (ಉಪಾಧ್ಯಕ್ಷ), ಕೆ.ನೀಲಪ್ಪ (ಪ್ರಧಾನ ಕಾರ್ಯದರ್ಶಿ), ಎನ್.ರಮೇಶ, ಗೌರಿಪ್ರಿಯ, ಸುದರ್ಶನ, ಯಲ್ಲಪ್ಪ, ಕೃಷ್ಣ, ಸಿ.ನಾಗರಾಜ(ಜಂಟಿ ಕಾರ್ಯದರ್ಶಿ), ಚಿತ್ರಗಾರ ರವಿ(ಖಜಾಂಚಿ), ಎಸ್.ಬಾಷಾ (ಸಹ ಖಜಾಂಚಿ), ಗಾಳೆಪ್ಪ, ಉಸ್ಮಾನ್, ವಿರುಪಣ್ಣ, ಬಿ.ಎಂ. ಮಂಜು, ಚಿತ್ರಗಾರ ರಾಮು, ಕಾಸಿಂ, ಎ.ಜಗದೀಶ, ಕೆ.ರಾಘವೇಂದ್ರ, ಕೆ.ಮಹೇಶ, ಎಲ್.ಸಿದ್ದಪ್ಪ, ಎಸ್.ಮಂಜು, ಚಿತ್ರಗಾರ ನಾಗರಾಜ, ದುರುಗಪ್ಪ (ಸಂಘಟನಾ ಸಂಚಾಲಕರು) ಇವರು ಸರ್ವಾನುಮತದಿಂದ ಆಯ್ಕೆಗೊಂಡದರು.
ನಂತರ ನೂತನ ಪದಾಧಿಕಾರಿಗಳಿಗೆ ಮಾಲಾರ್ಪಣೆಯೊಂದಿಗೆ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪೇಂಟರ್ ಕಾರ್ಮಿಕರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















