ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಸರಕಾರಿ ಪ್ರೌಢ ಶಾಲೆಗೆ ಸ್ವಂತ ಜಮೀನು ಇರುವುದಿಲ್ಲ. ಈಗಿರುವ ಕಟ್ಟಡವು ಹಳೆಯದಾಗಿರುತ್ತದೆ ಬಹಳ ವರ್ಷಗಳಿಂದ ಖಾಸಗಿ ಅವರ ಜಾಗದಲ್ಲಿ ಶಾಲೆ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಠಡಿಗಳು ಬೇಕಾಗುತ್ತವೆ ಮಕ್ಕಳಿಗೆ ಆಟ ಆಡುವುದಕ್ಕೆ ಆಟದ ಮೈದಾನ ಇರುವುದಿಲ್ಲ ಮತ್ತು ಶೌಚಾಲಯ ಕಟ್ಟುವುದಕ್ಕೆ ಜಾಗವು ಬೇಕಾಗುತ್ತದೆ. ಸುತ್ತಮುತ್ತಲಿನ ಊರಿನ ಗ್ರಾಮದ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಶಿಕ್ಷಣ ಪಡೆಯುವುದಕ್ಕೆ ಕೋಡ್ಲಿ ಸರ್ಕಾರಿ ಪ್ರೌಢಶಾಲೆಗೆ ಬರುತ್ತಾರೆ. ಶಾಲೆಯ ಸುತ್ತಮುತ್ತಲೂ ಮನೆಗಳು ನಿರ್ಮಾಣವಾಗಿರುತ್ತದೆ. ಆದ್ದರಿಂದ ಸರ್ಕಾರಿ ಪ್ರೌಢಶಾಲೆ ಕೋಡ್ಲಿ ಶಾಲೆಗೆ ಸರ್ಕಾರ ವತಿಯಿಂದ ಸ್ವಂತ ಜಾಗ ನೀಡಬೇಕೆಂದು ಪೃಥ್ವಿರಾಜ್ ಪಾಟೀಲ್ ತಹಶೀಲ್ದಾರ್ ಕಾಳಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಿ ಕೆ ಪಿ ಎಸ್ ನಿರ್ದೇಶಕರು ಶಿವಲಿಂಗಪ್ಪ ಸುಲೇಪೇಠ, ಖತಲಯ್ಯಗುತ್ತೇದಾರ, ಶಂಕರ ಶಿರೂರ, ದೇವೇಂದ್ರ ನರಬೋಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಲಿಂಗಪ್ಪ ಹಡಪದ ಹಾಜರಿದ್ದರು.
ವರದಿ ಚಂದ್ರಶೇಖರ್ ಪಾಟೀಲ್



















