ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ ಭಾಗದಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಬಳ್ಳಾರಿ/ಕಂಪ್ಲಿ : ಕಳೆದ ಹಲವಾರು ದಿನಗಳಿಂದ ಕಣ್ಮರೆಯಾಗಿ ಮಳೆರಾಯ ಮತ್ತೆ ಪ್ರತ್ಯಕ್ಷನಾಗಿದ್ದು, ಹಲವು ದಿನಗಳ ಕಾಲ ಕೇವಲ ಹೊಳೆ ಮಾತ್ರ ತುಂಬಿ ಹರಿಯುತ್ತಿತ್ತು ಆದರೆ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೊಳೆ ತುಂಬಿ ಹರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಬಿರುಸಾಗಿ ಸುರಿದ ಮಳೆ ನಂತರ ಜಿಟಿ‌ ಜಿಟಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತು. ಬುಧವಾರ ಮಧ್ಯಾಹ್ನದಲ್ಲಿ ರಭಸವಾಗಿ ಸುರಿಯಲು ಆರಂಭಿಸಿದ ಮಳೆ ಕೆಲವು ಕಾಲ ರಭಸವಾಗಿ ಸುರಿಯಿತು. ನಂತರ ಜಿಟಿ ಜಿಟಿ ಮಳೆಯಾಗಲಾರಂಭಿಸಿತು. ಇದರಿಂದ ವಿದ್ಯುತ್ ಕಡಿತವಾಗಿತ್ತು. ಜೊತೆಗೆ ಸಂಜೆಯೇ ಮಳೆ ಸುರಿಯಲಾರಂಭಿಸಿದ್ದರಿಂದ ಶಾಲಾ ಕಾಲೇಜುಗಳಿಗೆ ತೆರಳಿದ್ದ ವಿದ್ಯಾರ್ಥಿಗಳು, ಕೃಷಿ ಕಾರ್ಮಿಕರು ಸುರಿಯುವ ಮಳೆಯಲ್ಲಿಯೇ ಮನೆಯನ್ನು ಸೇರುವಂತಾಗಿತ್ತು.
ಇನ್ನು ಕಂಪ್ಲಿ ಭಾಗದಲ್ಲಿ ಹಲವು ದಿನಗಳ ಕಾಲ ಮಳೆ ಕಣ್ಮರೆಯಾಗಿದ್ದರೆ, ಈ ಭಾಗದ ಜೀವನನಾಡಿ ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಕಳೆದ ಜಲಾಶಯದ 19ನೇ ಕ್ರೆಸ್ಟ್ಗೇಟ್ ತುಂಡಾಗಿ ಹೋಗಿದ್ದರಿಂದ ಹಾಗೂ ತಾತ್ಕಾಲಿಕ ಕ್ರೆಸ್ಟ್ಗೇಟ್‌ನ್ನು ಕೂಡಿಸಿರುವುದರಿಂದ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಂದರೆ 105.ಟಿಎಂಸಿಯಷ್ಟು ನೀರನ್ನು ಸಂಗ್ರಹಿಸದೇ ಕೇವಲ 80 ಟಿಎಂಸಿ ನೀರನ್ನು ಸಂಗ್ರಹಿಸಲು ತೀರ್ಮಾನ ಮಾಡಿರುವುದರಿಂದ ಜಲಾಶಯದಲ್ಲಿ ಈಗಾಗಲೇ ಸುಮಾರು 76 ಟಿಎಂಸಿ ನೀರು ಸಂಗ್ರಹವಾಗಿರುವುದರಿಂದ ಮತ್ತು ಜಲಾಶಯಕ್ಕೆ ನೀರಿನ ಒಳ ಅರಿವಿನ ಪ್ರಮಾಣ ಅಧಿಕವಾಗಿರುವುದರಿಂದ ಜಲಾಶಯಕ್ಕೆ ಬರುತ್ತಿರುವ ನೀರನ್ನು ನದಿಗೆ ಬಿಡುತ್ತಿರುವುದರಿಂದ ಕಂಪ್ಲಿ ಕೋಟೆಯಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ.ಕಂಪ್ಲಿ ಕೋಟೆಯಲ್ಲಿ ತುಂಗಭದ್ರ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ ಮುಳುಗುವ ಹಂತವನ್ನು ತಲುಪಿದ್ದು, ಕಳೆದ 5 ದಿನಗಳಿಂದ ನದಿ ಮೈದುಂಬಿ ಹರಿಯುತ್ತಿದ್ದು, ನದಿ ತೀರದ ಜಮೀನುಗಳ ಜಲಾವೃತಗೊಂಡಿವೆ.
ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಕೇವಲ ಹೊಳೆ ಮಾತ್ರ ತುಂಬಿ ಹರಿಯುತ್ತಿದ್ದರಿಂದ ತೊಂದರೆಯಿರಲಿಲ್ಲ, ಆದರೆ ಈಗ ಮೇಲೆ ಮಳೆ ಕೆಳಗೆ ಹೊಳೆ ಎನ್ನುವಂತಾಗಿದೆ.

ವರದಿ : ಜಿಲಾನಸಾಬ್ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!