
ಚಾಮರಾಜನಗರ/ ಹನೂರು : ಸಾರ್ವಜನಿಕರು ಗ್ರಾಮಸ್ಥರು ಮತ್ತು ಅಧಿಕಾರಿಗಳ ಸಹಭಾಗಿತ್ವದಲ್ಲಿ ನರೇಗಾ ಯೋಜನೆ ಕೆಲಸ ಕಾರ್ಯಗಳು ನಿರ್ವಹಣೆ ಆಗಬೇಕು ಎಂದು ತಾಲೂಕು ಸಂಯೋಜಕ ನಾರಾಯಣ್ ತಿಳಿಸಿದರು.
ಹನೂರು ತಾಲೂಕಿನ ಮಿಣ್ಯಂಗ್ರಾಮ ಪಂಚಾಯತಿಯಲ್ಲಿ ಆಯೋಜಿಸಿದ್ದ 2024-25 ನೇ ಸಾಲಿನ ನರೇಗಾ ಮತ್ತು 15ನೇ ಹಣಕಾಸು ಯೋಜನೆ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಈ ಎರಡು ಯೋಜನೆಗಳು ಗ್ರಾಮಾಭಿವೃದ್ಧಿಗೆ ಪೂರಕವಾಗಿದ್ದು ಸಮುದಾಯದತ್ತ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಗ್ರಾಮೀಣ ಭಾಗದ ಜನರು ಮಾಡಿಕೊಳ್ಳುವ ಜೊತೆಗೆ ದಿನ ಒಂದಕ್ಕೆ 379 ರೂ. ಕೂಲಿ ಹಣ ಪಡೆಯಬಹುದು ಈ ಯೋಜನೆಯಡಿ ಕೆಲಸ ನಿರ್ವಹಿಸುವ ಗಂಡು ಹಾಗೂ ಹೆಣ್ಣು ಕಾರ್ಮಿಕರು ಸಮಾನ ವೇತನ ಪಡೆದುಕೊಳ್ಳಬಹುದು. ಹಿರಿಯ ನಾಗರಿಕರು ಅಂಗವಿಕಲರಿಗೆ ಕೆಲಸದಲ್ಲಿ ರಿಯಾಯಿತಿ ಇರುತ್ತದೆ. ಗ್ರಾಮ ಸಭೆಯಲ್ಲಿ ಆಯ್ಕೆಯಾದ ಕಾಮಗಾರಿಗಳನ್ನು ಅನುಮೋದನೆ ಪಡೆದು ಕೆಲಸ ನಿರ್ವಹಿಸಿದ್ದಲ್ಲಿ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ನಡೆದಿರುವ ಕಾಮಗಾರಿಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕೂಲಿ ಕಾರ್ಮಿಕರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ ಮತ್ತು ಎಂ.ಬಿ. ಪುಸ್ತಕ ಚೆಕ್ ಕಡತ ಪರಿಶೀಲಿಸಲಾಗಿದೆ. ಇದರ ಬಗ್ಗೆ ಲೋಪದೋಷ ಇದ್ದಲ್ಲಿ ಸಾರ್ವಜನಿಕರು ಅಕ್ಷೇಪಣೆ ಸಲ್ಲಿಸಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಎಂದರು.
15ನೇ ಹಣಕಾಸು ಯೋಜನೆ ಅನುದಾನದಡಿ ಗ್ರಾಮದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ, ಚರಂಡಿ ಹೂಳು ತೆಗೆಯುವುದು, ಬೀದಿ ದೀಪ ನಿರ್ವಹಣೆ, ತೊಂಬೆಗಳ ಸ್ವಚ್ಛತೆ, ಪ್ಲಾಟ್ ಫಾರಂ ನಿರ್ವಹಣೆ ಸಿಬ್ಬಂದಿಗಳ ವೇತನ ಚರಂಡಿ ಡಕ್ ನಿರ್ಮಾಣ ಕುಡಿಯುವ ನೀರು ಪೈಪ್ ಲೈನ್ ಮೋಟರ್ ರಿಪೇರಿ ಇನ್ನಿತರ ಕೆಲಸಗಳನ್ನು ಮಾಡಬಹುದು ಎಂದರು.
ಪಿಡಿಓ ಗಂಗಧರ್ ಮಾತಾಡಿ ಗ್ರಾಮಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ ಈಗಾಗಲೇ ಕೊಪ್ಪ ಗಾಜನೂರು ನಕ್ಕುಂದಿ ಸುಳ್ಯಕೋಬೆ ಗ್ರಾಮಗಳಲ್ಲಿ ಚರಂಡಿ ಉಗುಳು ತೆಗೆಯುವುದು ಕುಡಿಯುವ ನೀರು ಇನ್ನಿತರ ಸ್ವಚ್ಛತಾ ಕಾರ್ಯಗಳನ್ನು ಮಾಡಲಾಗಿದೆ ಇನ್ನೆರಡು ದಿನಗಳಲ್ಲಿ ಮಿನಿಮಮ್ ಸೇರಿದಂತೆ ಇನ್ನಿತರ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು.
ಸರ್ಕಾರದ ಹಣ ಗ್ರಾಮದ ಅಭಿವೃದ್ಧಿಗೆ ನರೇಗಾದಡಿ ಕೆಲಸ ಬಳಕೆಯಾಗುತ್ತಿದೆ. ನಿರ್ವಹಿಸುವ ಕೂಲಿ ಕಾರ್ಮಿಕರು ಸರ್ಕಾರದ ನಿಯಮನುಸಾರವೇ ಕೆಲಸ ಮಾಡ ಬೇಕಾಗುತ್ತದೆ. ಅದರಲ್ಲಿ ಹಿರಿಯ ನಾಗರಿಕರು ಅಂಗವಿಲಕರಿಗೆ ರಿಯಾಯಿತಿ ಇರುತ್ತದೆ. ಕಳೆದ ವರ್ಷ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಮಂಡನೆ ಮಾಡಲಾಗಿದೆ ತಪ್ಪುಗಳಿದ್ದಲ್ಲಿ ಜನರು ತಿಳಿಸಬಹುದು ಎಂದರು.
ಈ ಸಂದರ್ಭದಲ್ಲಿ ನೋಡೆಲ್ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸುನೀಲ್ ,ಪಿಡಿಓ ಗಂಗಧರ್ ಗ್ರಾ. ಪಂ. ಅಧ್ಯಕ್ಷೆ ಸರೋಜ ,ಉಪಾಧ್ಯಕ್ಷೆ ಶ್ವೇತಾ, ಸದಸ್ಯರಾದ ಬಸವಣ್ಣ ರಾಮಕೃಷ್ಣ ಪ್ರಭುಸ್ವಾಮಿ ಮಹೇಶ್ವರಿ ಮಾಧುರಾಜು ಮಹದೇವು ವಿವಿಧ ಪ್ರಗತಿ ಪರ ಮಹಿಳಾ ಸಂಘಟನೆ ಸದಸ್ಯರು ಸಾರ್ವಜನಿಕರು ಮುಖಂಡರು ಹಾಜರಿದ್ದರು.
ವರದಿ :ಉಸ್ಮಾನ್ ಖಾನ್.



















