ಬೀದರ್/ ಬಸವಕಲ್ಯಾಣ : ಪ್ರತಿ ವರ್ಷದಂತೆ ಪವಿತ್ರ ಶ್ರಾವಣ ಮಾಸ ನಿಮಿತ್ಯ ದಿನಾಂಕ 24.07.2025 ಗುರುವಾರ ಸಾಯಂಕಾಲ 05:00 ಗಂಟೆಗೆ ನಗರದ ಇತಿಹಾಸ ಪ್ರಸಿದ್ಧ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಪೂಜ್ಯಶ್ರೀ ಷ. ಬ್ರ. ಡಾll ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ದಿವ್ಯಸಾನಿಧ್ಯದಲ್ಲಿ ವೀರಶೈವ ಲಿಂಗಾಯತ ಧರ್ಮ ಗ್ರಂಥವಾದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದ ಉದ್ಘಾಟನೆ ಆಯೋಜಿಸಲಾಗಿದೆ. ಆದ ಕಾರಣ ಸಮಸ್ತ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುಗಳ ದರ್ಶನ- ಆಶೀರ್ವಾದ ಪಡೆದು,ಪ್ರಸಾದ ಸ್ವೀಕರಿಸಿ ಪುನೀತರಾಗಲು ಪ್ರಕಟಣೆಯಲ್ಲಿ ಕೋರಲಾಗಿದೆ.
ವರದಿ ಶ್ರೀನಿವಾಸ ಬಿರಾದಾರ



















