ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗಾಗಿ 4,078 ದಿನಗಳಕಾಲ ಪ್ರಧಾನಿಯಾಗಿ ನಿರಂತರ ಸೇವೆ ಮಾಡುವುದರೊಂದಿಗೆ, ಮಾಜಿ ಪ್ರಧಾನಿ
ಮಂತ್ರಿ ಇಂದಿರಾ ಗಾಂಧಿಯವರ ಸೇವಾವಧಿಯನ್ನು ಹಿಂದಿಕ್ಕಿದ್ದಾರೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಇತಿಹಾಸದಲ್ಲಿ ಎರಡನೇ ಅತಿ ದೀರ್ಘಾವಧಿಯ ಪ್ರಧಾನಮಂತ್ರಿ, ರಾಜಕೀಯ ರಾಜಕೀಯ ಪಕ್ಷದ ನಾಯಕರಾಗಿ, ಸತತ ಆರು ಸಲ ವಿಜಯಗಳಿಸಿ ಸಾಂವಿಧಾನಿಕ ಹುದ್ದೆಯ ಜವಾಬ್ದಾರಿ ನಿರ್ವಹಿಸಿರುವ ಹೆಗ್ಗಳಿಕೆ, ನೆಹರೂ ಹೊರತಾಗಿ ಸತತ ಮೂರು ಭಾರಿ ಪ್ರಧಾನಿ ಹುದ್ದೆಯ ಜವಾಬ್ದಾರಿ ಹಾಗೂ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಕೀರ್ತಿಯೂ ಪ್ರಧಾನಿಗಳದ್ದಾಗಿದೆ ಎಂದು ತಿಳಿಸಿದರು. ಪ್ರಧಾನಿ ಮೋದಿ ಅವರು ಸಿಎಂ ಮತ್ತು ಪ್ರಧಾನಿಯಾಗಿ ಸುಮಾರು 24 ವರ್ಗಗಳ ಸುದೀರ್ಘ ಆಡಳಿತದೊಂದಿಗೆ, ರಾಷ್ಟ್ರದ ಪ್ರಗತಿಗೆ ದೃಢ ಸಂಕಲ್ಪ, ತ್ಯಾಗ ಮತ್ತು ಅವಿರತ ಬದ್ಧತೆಯ ಸಂಕೇತವಾಗಿ ಉಳಿದಿದ್ದಾರೆ. ಇದು ಮೋದಿಜೀಯವರು ನಿರ್ಮಿಸಿದ ಮೈಲಿಗಲ್ಲಿನ ಸಂಭ್ರಮಾಚರಣೆ ಮಾತ್ರವಲ್ಲ, ಪರಿವರ್ತನೆಯ ಯುಗ ಮತ್ತು ನಿರ್ಣಾಯಕ, ದೂರದೃಷ್ಟಿಯ ನಾಯಕತ್ವವನ್ನು ಆಚರಿಸುವ ಸಂಭ್ರಮದ ಕ್ಷಣವಾಗಿದೆ ಎಂದರು.
- ಕರುನಾಡ ಕಂದ




















