ಶಿಗ್ಗಾಂವ್: ಹುಟ್ಟು ಜೀವನ ೧೯೭೨-೭೩ರಲ್ಲಿ ತಂದೆಯವರ ವೃತ್ತಿ ಜೀವನವಾದ ವಕೀಲ ವೃತ್ತಿಯನ್ನು ಮಾಡುತ್ತಾ ಅಂದಿನ ಹುಬ್ಬಳ್ಳಿ ಗ್ರಾಮಕ್ಕೆ ಬಂದಿರುತ್ತಾರೆ. ಮೂಲತಃ ಕುದಗೋಳ ತಾಲೂಕ ಕಮಡೊಳ್ಳಿ ಗ್ರಾಮದವರಾದ ಮಾಜಿ ಮುಖ್ಯಮಂತ್ರಿಗಳು ಎಸ್ ಆರ್ ಬೊಮ್ಮಾಯಿ ಹಾಗೂ ಪತ್ನಿ ಗಂಗಮ್ಮ ಎಸ್ ಬೊಮ್ಮಾಯಿಯವರ ೩ನೇ ಮಗನಾಗಿ ಶ್ರೀ ಬಸವರಾಜ ಎಸ್.ಬೊಮ್ಮಾಯಿಯವರು ೧೯೬೦ ಜನೇವರಿ ೨೮ರಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ಜನಿಸಿ ಶಿಕ್ಷಣವನ್ನು ಹುಬ್ಬಳ್ಳಿಯಲ್ಲಿ ಮುಗಿಸಿದ್ದು ಉನ್ನತ ಶಿಕ್ಷಣವಾದ ಬ್ಯಾಚ್ಯುಲರ್ ಆಫ್ ಇಂಜೀನಿಯರ ಶಿಕ್ಷಣವನ್ನು ಬಿ.ವ್ಹಿ ಬೋಮರೆಡ್ಡಿ ಕಾಲೇಜ್ ಹುಬ್ಬಳ್ಳಿಯಲ್ಲಿ ಮುಗಿಸಿದ್ದು ಮೆಕ್ಯಾನಿಕಲ್ ಇಂಜಿನೀಯರ್ ಪಧವಿದರರಾಗಿದ್ದಾರೆ ಪುಣೆಯಲ್ಲಿ ಟಾಟಾ ಮೋಟಾರ್ಸ ಕಂಪನಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದು ೧೯೯೩ರಲ್ಲಿ ಚೆನ್ನಮ್ಮ ಅವರನ್ನು ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ ವೃತ್ತಿಯಲ್ಲಿ ಕೃಷಿ ಹಾಗೂ ಕೈಗಾರಿಕೋ ದ್ಯಮಿಯಾಗಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ.
ರಾಜಕೀಯ ಜೀವನ: ಬೊಮ್ಮಾಯಿಯವರು ಧಾರವಾಡ ಸ್ಥಳೀಯ ಕ್ಷೇತ್ರದಿಂದ ೧೯೯೮ ರಿಂದ ೨೦೦೪ರ ವರೆಗೆ ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಹಾಗೂ ಮಾಜಿ ಮುಖ್ಯಮಂತ್ರಿಗಳು ದಿವಂಗತ ಜೆ.ಎಚ್.ಪಟೇಲ ಅವರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾ ಸಂಯುಕ್ತ ಜನತಾದಳ ಪಕ್ಷಕ್ಕೆ ಸೇರಿದರು ನಂತರ ೨೦೦೮ ಪೆಬ್ರುವರಿಯಲ್ಲಿ ಬಿಜೆಪಿಯ ಅಂದಿನ ರಾಜಕೀಯದ ಪ್ರಬಲ ಆಕಾಂಕ್ಷಿಯಾದ ಬಿ.ಎಸ್ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಬಿ.ಜೆ.ಪಿ ಪಕ್ಷಕ್ಕೆ ಸೇರಿದ ನಂತರ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ ಕ್ಷೇತ್ರದಿಂದ ಸ್ಪರ್ದಿಸಿ ಬಹುಮತದಿಂದ ಆಯ್ಕೆಗೊಂಡು ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಜಗದೀಶ ಶೆಟ್ಟರ್ ಹಾಗೂ ಸದಾನಂದ ಗೌಡ ಇವರ ಅಡಿಯಲ್ಲಿ ಬೃಹತ್ ಮತ್ತು ಮಧ್ಯಮ ಜಲ ಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದರು ನಂತರ ೨೦೧೩ರ ಚುನಾವಣೆಯಲ್ಲಿಯೂ ಸಹ ಈ ಕ್ಷೇತ್ರದಿಂದ ಆಯ್ಕೆಯಾಗಿ ಶಾಸಕರಾಗಿ ನಂತರ ೨೦೧೮ರ ಚುನಾವಣೆಯಲ್ಲಿ ಆಯ್ಕೆಯಾಗಿ ಬಿ.ಎಸ್ ಯಡಿಯೂರಪ್ಪನರ ಅಡಿಯಲ್ಲಿ ೨೦೧೯ರಲ್ಲಿ ಗೃಹ ಮಂತ್ರಿಗಳಾಗಿ ದಿನಾಂಕ ೨೭ ಜುಲೈ ೨೦೨೧ರಂದು ಕ್ಷೇತ್ರದಿಂದ ೨ನೇ ಮುಖ್ಯಮಂತ್ರಿಯಾಗಿ ಹಾಗೂ ಕರ್ನಾಟಕ ರಾಜ್ಯದ ೨೩ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ಹಾಗೂ ಸತತ ೩ ಬಾರಿ ಒಂದೇ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಗೆಲುವನ್ನು ಕಂಡಿದ್ದು ಈ ಕ್ಷೇತ್ರದ ಜನರಿಗೆ ತುಂಬಾ ಸಂತಸ ತಂದಿದೆ ಮತ್ತು ಶಿಗ್ಗಾಂವ ಕ್ಷೇತ್ರಕ್ಕೆ ಅಪಾರ ಕೊಡುಗೆ ಹಾಗೂ ಅಭಿವೃದ್ದಿಗೆ ಶ್ರಮಿಸುತ್ತಿದ್ದು ಈ ಕ್ಷೇತ್ರದ ಜನರಿಗೆ ದುಡಿಯಲು ಅನುಕೂಲವಾಗುವಂತೆ ಜವಳಿ ಪಾರ್ಕ್, ಗಾರ್ಮೆಂಟ್ಸ ಹಾಗೂ ಇನ್ನೀತರ ಹಲವಾರು ಉದ್ಯೋಗಗಳನ್ನು ಸೃಷ್ಟಿಸಿ ಸತತ ೩ಬಾರಿ ಹ್ಯಾಟ್ರಿಕ್ ಗೆಲುವನ್ನು ಬಾರಿಸಿ ಜಯಶಾಲಿಯಾಗಿ ಕರ್ನಾಟಕ ರಾಜ್ಯದ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ಆದ ಕಾರಣ ಈ ಕ್ಷೇತ್ರದಲ್ಲಿ ೬೩ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಜಾತ್ರೆಯ ರೂಪದಲ್ಲಿ ಆಚರಿಸುತ್ತಿದ್ದು ದಿನಾಂಕ:೨೮-೦೧-೨೦೨೩ ಶನಿವಾರ ಬೆಳಿಗ್ಗೆ ನಾಡದೊರೆ ನಡೆದು ಬಂದ ದಾರಿ ಭಾಷಣ ಸ್ಪರ್ಧೆ, ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಸಂಜೆ ೪ ಗಂಟೆಗೆ ಖ್ಯಾತ ಜೀ ಕನ್ನಡ ವಾಹಿನಿಯ ಆ್ಯಂಕರ್ ಮಂಗಳೂರಿನ ಅನುಶ್ರೀಯ ಮಾತಿನೊಂದಿಗೆ ಖ್ಯಾತ ಗಾಯಕರಾದ ಶ್ರೀವಿಜಯ ಪ್ರಕಾಶ ಹಾಗೂ ತಂಡದವರಿಂದ ಸಂಗೀತ ಹಾಗೂ ರಸಮಂಜರಿ ಕಾರ್ಯಕ್ರಮ ಮತ್ತು ಎಸ್ ಎಸ್ ಎಲ್ ಸಿ ಹಾಗೂ ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನಲ್ಲಿ ಹಮ್ಮಿಕೊಂಡಿರುತ್ತಾರೆ.
ವರದಿಗಾರರು:ಪ್ರವೀಣ.ಎಸ್.ಬಡಿಗೇರ