ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹ್ಯಾಮ್ ರೇಡಿಯೋ ಸ್ಟೇಷನ್ ಸ್ಥಾಪಿಸಲಾಗಿದ್ದು. ದೇಶ ವಿದೇಶಗಳೊಂದಿಗೆ ಸಂವಾದ ಮಾಡಲು ಅನುಕೂಲಕರವಾಗಿದೆ ಮತ್ತು ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀ ಅಂಜನೇಶ್ವರ ಉಪ್ಪಾರ ಮತ್ತು ವಿದ್ಯಾರ್ಥಿ ರೇವಣಸಿದ್ಧ ಪೂಜಾರಿ ಲೈಸನ್ಸ್ ಪಡೆದಿರುತ್ತಾರೆ ಎಂದು ಪ್ರಾಂಶುಪಾಲರಾದ ಶ್ರೀ ಮಲ್ಲಿಕಾರ್ಜುನ್ ಹತ್ತಿ ತಿಳಿಸಿದರು. ಹ್ಯಾಮ್ ಸ್ಟೇಷನ್ ನಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹ್ಯಾಮ್ ಲೆಸೆನ್ಸ್ ಹೊಂದಿರುವರ ಜೊತೆಗೆ ನಿರಂತರವಾಗಿ ಅಲ್ಲಿನ ವಾತಾವರಣ, ಸಂಸ್ಕೃತಿ, ವಿಜ್ಞಾನ -ತಂತ್ರಜ್ಞಾನ ಕುರಿತು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದಾಗಿದ್ದು ಇದರಿಂದ ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ್ಯವು ಅಭಿವೃದ್ಧಿ ಹೊಂದುತ್ತದೆ. ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಮೊಬೈಲ್ ಅಂತರ್ಜಾಲ ಸಂಪರ್ಕ ನಿಂತಾಗ ತುರ್ತು ಸಂದರ್ಭದಲ್ಲಿ ಹ್ಯಾಮ್ ರೇಡಿಯೋ ಮೂಲಕ ಸಂಹನ ಸಾಧಿಸಿ ನೆರವು ಪಡೆದು ಅಪಾಯಗಳಿಂದ ರಕ್ಷಿಸಿಕೊಳ್ಳಬಹುದು ಎಂದು ವಿಜ್ಞಾನ ಶಿಕ್ಷಕರಾದ ಅಂಜನೇಶ್ವರ ಉಪ್ಪಾರ ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಪಿ.ಎಸ್,
ನೋಡಲ್ ಅಧಿಕಾರಿ ಎಸ್. ಕೆ .ಮಹದೇವ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯಾಮ್ಸ್ ನಿರ್ದೇಶಕರಾದ ಡಾಕ್ಟರ್ ಎಸ್ ಸತ್ಯಪಾಲ್ ಮತ್ತು ಸಹಾಯಕ ನಿರ್ದೇಶಕರಾದ ವೆಂಕಟರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರು ಹಾಗೂ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ ಮನೋಜ್ ನಿಂಬಾಳ



















