ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟರೆ ಸಮಾಜದ ಬದಲಾವಣೆ ಸಾಧ್ಯ : ಶಾಸಕ ಜೆ. ಎನ್. ಗಣೇಶ ಅಭಿಮತ

ಬಳ್ಳಾರಿ / ಕಂಪ್ಲಿ : ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ಸಮಾಜ ನೇಕಾರ ಪದ್ಮಶಾಲಿ ಸಮಾಜವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ತಾಲೂಕಿನ ರಾಮಸಾಗರ ಗ್ರಾಮದ ನೇಕಾರ ಪದ್ಮಶಾಲಿ ಬಹೂತ್ತಮ ಸಮಾಜ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ನೂಲು ಹುಣ್ಣಿಮೆ ಪ್ರಯುಕ್ತ ಶ್ರೀ ಭಕ್ತ ಮಾರ್ಕಂಡೇಶ್ವರ ಅವರ 18ನೇ ವರ್ಷದ ಜಯಂತಿ ಹಾಗೂ ರಾಷ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜವು ಎಲ್ಲಾ ರಂಗದಲ್ಲಿ ಹಿಂದುಳಿದಿದ್ದು, ಸರ್ಕಾರ ಸೌಲಭ್ಯಗಳನ್ನು ಕೊಟ್ಟರೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ, ಕುರುಗೋಡಿನಲ್ಲಿ ಒಂದು ಕೋಟಿ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ. ಕಂಪ್ಲಿಯಲ್ಲಿ ಜಾಗ ನೀಡಿದರೆ ಸಮುದಾಯ ಭವನಕ್ಕೆ ಅನುದಾನ ನೀಡುವೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟರೆ ಸಮಾಜದ ಬದಲಾವಣೆಗೆ ಸಾಧ್ಯ. ಉನ್ನತ ಶಿಕ್ಷಣದೊಂದಿಗೆ ದೊಡ್ಡ ಮಟ್ಟಡ ಹುದ್ದೆಗಳನ್ನು ಹೊಂದಲಿದ್ದಾರೆ. ಸಮಾಜದ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಇತ್ಯಾರ್ಥಪಡಿಸಲಾಗುವುದು. ಮುಂದಿನ ದಿನದಲ್ಲಿ ಸಮುದಾಯ ಭವನ ಮತ್ತು ಇಲ್ಲಿನ ಮಾರ್ಕಂಡೇಶ್ವರ ದೇವಸ್ಥಾನದ ಕಾಂಪೌಂಡ್ ಗೋಡೆ ನಿರ್ಮಿಸಿಕೊಡುವ ಭರವಸೆ ನೀಡಿದರು.
ಇಲ್ಲಿನ ಪ್ರಮುಖ ಬೀದಿಗಳಲ್ಲಿ ಜಯಂತಿ ಅಂಗವಾಗಿ ಭಕ್ತ ಮಾರ್ಕಂಡೇಶ್ವರ ಭಾವಚಿತ್ರ ಭವ್ಯ ಮೆರವಣಿಗೆ ಜರುಗಿತು. ಈ ಮೆರವಣಿಗೆಯಲ್ಲಿ ಸುಮಂಗಲಿಯರ ಕಳಸ, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು.
ಈ ಸಂದರ್ಭದಲ್ಲಿ ಕಂಪ್ಲಿ ತಾಲೂಕು ನೇಕಾರ ಸಮುದಾಯ ಅಧ್ಯಕ್ಷ ಪಿ.ಬಹ್ಮಯ್ಯ, ಪ್ರಧಾನ ಕಾರ್ಯದರ್ಶಿ ಜಿ.ಸುಧಾಕರ, ಪದ್ಮಶಾಲಿ ಬಹೂತ್ತಮ ಸಮಾಜ ಅಧ್ಯಕ್ಷ ಎನ್.ಮಂಜುನಾಥ, ಮುಖಂಡರಾದ ಹೆಚ್.ಶಿವಶಂಕರಗೌಡ, ಜಗದೀಶಗೌಡ, ಬಿ.ನಾರಾಯಣಪ್ಪ, ಡಾ.ಸುಧಾಕರ, ಸಿ.ಆರ್.ಹನುಮಂತ, ಪಿ.ಪಾಡುರಂಗ ದರೋಜಿ, ಚಂದ್ರ, ಟಿ.ಮಂಜುನಾಥ, ಪಿ.ವೆಂಕಟೇಶ, ಕಾಯಿಗಡ್ಡೆ ಮಂಜಪ್ಪ, ಪಿ.ಕನಕರಾಯ, ಪಿ.ನಾಗಪ್ಪ, ರಂಗಪ್ಪ ಸೇರಿದಂತೆ ಅನೇಕರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!