ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಜೃಂಭಣೆಯಿಂದ ಜರುಗಿದ ಮುಂಜಿ ಬಸವೇಶ್ವರ ಗಂಗೆಸ್ಥಳ ಮೆರವಣಿಗೆ

ಬಳ್ಳಾರಿ / ಕಂಪ್ಲಿ : ತಾಲೂಕಿನ ನಂ.10 ಮುದ್ದಾಪುರ ಗ್ರಾ. ಪಂ. ವ್ಯಾಪ್ತಿಯಲ್ಲಿ ಬರುವ ಬೆಳಗೋಡಹಾಳ್ ಗ್ರಾಮದಲ್ಲಿ ಆರಾಧ್ಯ ದೈವ ಮುಂಜಿ ಬಸವೇಶ್ವರ ಗಂಗೆಸ್ಥಳ ಮೆರವಣಿಗೆ ಶ್ರದ್ದಾಭಕ್ತಿ ಹಾಗೂ ಸಡಗರದಿಂದ ಸೋಮವಾರ ಜರುಗಿತು.
ತುಂಗಭದ್ರ ನದಿ ತಟದಲ್ಲಿ ಗಂಗೆಪೂಜೆ ನೆರವೇರಿಸಿದ ನಂತರ ಮೆರವಣಿಗೆ ಪ್ರಾರಂಭಿಸಿ, ತದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮುಂಜಿ ಬಸವೇಶ್ವರ ದೇವಸ್ಥಾನ ಬಳಿಯಲ್ಲಿ ಸಮಾವೇಶಗೊಂಡಿತು. ವೀರಗಾಸೆ, ಕುಂಭ, ಕಳಸ, ನಂದಿಕೋಲು, ತಾಷಾರಾಂಡೋಲ್ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ದೇವಸ್ಥಾನದಲ್ಲಿ ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಜನರು ಕಾಯಿ, ಕರ್ಪೂರ ನೀಡಿ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಗ್ರಾ‌. ಪಂ. ಸದಸ್ಯ ಎಸ್.ಚಂದ್ರಶೇಖರಗೌಡ, ಮುಖಂಡರಾದ ಕೆ.ದೊಡ್ಡಪ್ಪ, ಎಸ್.ವಿರುಪಾಕ್ಷಿ, ಓಂಕಾರಿಗೌಡ, ಜೀರ್ ಅಯ್ಯಪ್ಪ, ಎಂ.ಮೂರ್ತಿಸ್ವಾಮಿ, ಕೆ.ರಾಜಶೇಖರ, ವೈ.ಮಲ್ಲಿಕಾರ್ಜುನಗೌಡ, ಜಿ.ರಾಜಶೇಖರ, ಕಲ್ಯಾಣಿ ಗಂಗಾಧರ, ಜಿ.ತಿಪ್ಪೇರುದ್ರ, ಮಡಿವಾಳ ಅಂಬರೇಶ, ಕಲ್ಯಾಣಿ ಚನ್ನಬಸುವ ಹಾಗೂ ಗ್ರಾಮದ ಸದ್ಭಕ್ತರು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!