ಇಂಡಿ: ಯಾವ ಕಾಲಕ್ಕೂ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವ ವಿಚಾರವಿಲ್ಲ, ಈ ಹಿಂದೆಯೂ ಹೇಳಿದ್ದೇನೆ ಇಂದು ಸಹ ಅದನ್ನೆ ಪ್ರತಿಪಾದನೆ ಮಾಡುತ್ತೇನೆ. ರಾಜಕಾರಣ ಬರುತ್ತದೆ ಹೋಗುತ್ತದೆ ಅಧಿಕಾರಕ್ಕಾಗಿ ಹಪ ಹಪಿಸುವ ಜಾಯಮಾನ ನನ್ನದಲ್ಲ,ಪಕ್ಷದ ಸಿದ್ಧಾಂತ ಮಾತೃಪಕ್ಷಕ್ಕೆ ಮೋಸ ಮಾಡುವುದಿಲ್ಲ, ಫೆ.11 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂಡಿ ಪಟ್ಟಣಕ್ಕೆ ಆಗಮಿಸಲಿದ್ದಾರೆ ಹಾಗಾದರೆ ನಾನು ಬಿಜೆಪಿಗೆ ಹೋಗುವುದು ಯಾವ ನ್ಯಾಯ ನಾನು ದೆಹಲಿಗೆ ಹೋದರೆ ಇದಕ್ಕಾಗಿಯೇ ಹೋಗುವುದಿಲ್ಲ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಕೆಲಸ ಕಾರ್ಯಗಳು ಇರುವುದರಿಂದ ಹಾಗೂ ಕೇಂದ್ರ ಮಟ್ಟದಲ್ಲಿ ಕೂಡಾ ಬೇರೆ ಬೇರೆ ಪಕ್ಷಗಳ ವರಿಷ್ಠರು, ಹಿತೈಸಿಗಳು, ನನ್ನ ಸ್ನೇಹಿತರು ಇದ್ದಾರೆ ಮತಕ್ಷೇತ್ರದ ಕೆಲಸ ಕಾರ್ಯಗಳಿಗೆ ಪಕ್ಷ ಭೇದ ಮರೇತು ಸಹಾಯ ಕೇಳುವದರಲ್ಲಿ ತಪ್ಪೇನಿದೆ. ನಾನು ಮಾತ್ರ ಜೀವನದ ಕೊನೆ ಉಸಿರು ಇರುವವರೆಗೂ ಕಾಂಗ್ರೇಸಿನಲ್ಲಿಯೇ ಇರುತ್ತೇನೆ. ಬಿಜೆಪಿಗೆ ಹೋಗುವುದಿಲ್ಲ ನನ್ನ ಸಿದ್ಧಾಂತ ಬಿಟ್ಟುಕೊಡವುದಿಲ್ಲ ನನ್ನ ಕಾರ್ಯಕರ್ತರಿಗೆ
ನಂಬಿದವರಿಗೆ ಕಿಂಚಿತ್ತು ದ್ರೋಹ ಬಗೆಯಲಾರೆ ಬೇರೆ ಪಕ್ಷದವರು ಯಾರೂ ಆತಂಕಪಡುವ ಅಗತ್ಯವಿಲ್ಲ ನಿಮ್ಮ ನಿಮ್ಮ ಪಕ್ಷದಲ್ಲಿ ಇದ್ದವರಿಗೆ ಟಿಕೇಟ ನೀಡಲಿ ಜನರ ಆರ್ಶೀವಾದ, ಭಗವಂತನ ಕೃಪೆ ಹೃದಯವಂತ ಜನರು ತೀರ್ಮಾನಿಸುತ್ತಾರೆ.
ಶಾಸಕ ಯಶವಂತರಾಯಗೌಡ ಪಾಟೀಲ
ವರದಿ. ಅರವಿಂದ್ ಕಾಂಬಳೆ