
ಬೀದರ್ /ಬಸವಕಲ್ಯಾಣ: ಪವಿತ್ರ ಶ್ರಾವಣ ಮಾಸ ಅಂಗವಾಗಿ ನಗರದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ 7ನೇ ವಿಶೇಷ ಉಪನ್ಯಾಸಮಾಲೆ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಅನ್ಯಾಯದಿಂದ ಸಂಪಾದಿತವಾದ ಹಣವು ಕೆಲವು ವರ್ಷಗಳವರೆಗೆ ಮಾತ್ರ ಇದ್ದು ಕೊನೆಗೆ ಸರ್ವವೆಲ್ಲವೂ ನಷ್ಟವಾಗಿ ಹೋಗುತ್ತದೆ ಧರ್ಮ ಅಧರ್ಮಗಳ ಮಾರ್ಗಗಳಿಂದ ಬಂದ ದ್ರವ್ಯವು ದೂದ್ ಕಾ ದೂದ್ ಪಾನಿಕಾ ಪಾನಿ ಎಂಬ ಯುಕ್ತಿಗನುಸಾರವಾಗಿ ಧರ್ಮ ಮತ್ತು ಅಧರ್ಮ ಮಾರ್ಗಗಳೆರಡರಲ್ಲಿಯೂ ಅದು ವ್ಯಯವಾಗುತ್ತದೆ ಎಂದು ಆಶೀರ್ವಚನ ನೀಡಿದರು. ಇದೆ ಸಂದರ್ಭದಲ್ಲಿ ವಿಶೇಷ ಸನ್ಮಾನ ಕಲ್ಯಾಣ ಕರ್ನಾಟಕ ಬಾಗದ ಖ್ಯಾತ ಕಲಾವಿದರು ಆದ ಶ್ರೀ ಸೂರ್ಯಕಾಂತ ಬಿರಾದಾರ ಖಾನಾಪುರ ಅವರಿಗೆ ವಿಶೇಷ ಸನ್ಮಾನ ಮಾಡಿ ಆಶೀರ್ವದಿಸಲಾಯಿತು.
ಮುಖ್ಯ ಅತಿಥಿ ಸ್ಥಾನ ವಹಿಸಿದ ಲಕ್ಷ್ಮಿಪುತ್ರ ನಿಂಬಾಳ್ಕರ್ ಅವರು ಮಾತನಾಡುತ್ತಾ ಪೂಜ್ಯರು ಯಾವುದೇ ಒಂದು ಕಾರ್ಯಕ್ಕೆ ನಾವು ಸಿದ್ಧರಿದ್ದೇವೆ ಪೂಜ್ಯರು ಗವಿಮಠದಲ್ಲಿ ಜ್ಞಾನಾಮೃತ ಉಣಿಸುವಂತಹ ಹತ್ತು ಹಲವಾರು ಕಾರ್ಯಕ್ರಮ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ನಾವು ಕೂಡಾ ಪೂಜ್ಯರ ಜೊತೆ ಇದ್ದೇವೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ನಾಡು ಗ್ರಾಮೀಣ ಜನಪದ ಕಲಾ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ವೀರಶೆಟ್ಟಿ ಮಲ್ಲಶೆಟ್ಟಿ ಅವರು ಮಾತನಾಡುತ್ತಾ ಘಟದಿಂದ ಮಠವಾಗಿ ಮಾಡಿರುವಂತಹ ಕೀರ್ತಿ ಅಭಿನವ ಪೂಜ್ಯರಿಗೆ ಸಲ್ಲುತ್ತದೆ. ಈ ಗವಿಮಠದಲ್ಲಿ ನಿರಂತರ ಭಜನೆ,ಪ್ರವಚನ, ಸತ್ಸಂಗ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವಂತಹ ಸಾಧಕರಿಗೆ ಸನ್ಮಾನ ಹಾಗೆ ಧಾರ್ಮಿಕ,ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಮತ್ತು ನಮ್ಮ ಕಲಾ ತಂಡದವರಿಗೆ ಶ್ರೀಮಠ ತವರು ಮನೆ ಆಗಿದೆ ಎಂದು ಸಂತಸದಿಂದ ನುಡಿದರು.
ಅತಿಥಿಯಾಗಿ ಆಗಮಿಸಿದ ಜಗನ್ನಾಥ ಪಾಟೀಲ ಚಿಕನಾಗಾಂವ್ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಲ್ಯಾಣ ನಾಡು ಜಾನಪದ ಕಲಾಸಂಘದ ಅಧ್ಯಕ್ಷರಾದ ಶ್ರೀ ದಿಲೀಪ್ ದೇಸಾಯಿ ಅವರು ಹಾಗೂ ಬಸವರಾಜ ಶಾಸ್ತ್ರಿ ಕಣಜೆ, ವಿಠ್ಠಲ ದೋಮೆ, ಶ್ಯಾಮ ಸುಂದರ ಗುಂಡುರೆ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶರಣಬಸಪ್ಪ ಅಲಗುಡೆ ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕ ಮಲ್ಲಿಕಾರ್ಜುನ ಅಲಗುಡೆ ಸಂಚಾಲನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ರಾಕೇಶ ಪುರವಂತ, ರಾಜು ರೆಡ್ಡಿ, ಬಸವಂತಪ್ಪ ಲವಾರೆ, ವಿಠ್ಠಲ ರಾಯಪ್ಪನೋರ, ಸಾಗರ ಮಾಲಗರ, ವೀರಶೇಟ್ಟಿ ಪಾಟೀಲ, ಶಿವಕುಮಾರ ಮುನ್ನೋಳಿ ಇನ್ನಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಲ್ಯಾಣ ನಾಡು ಜನಪದ ಕಲಾ ವೃಂದ ಸಂಘದ ಸಂಯುಕ್ತ ಆಶ್ರಯದಲ್ಲಿ ಹರ ಘರ್ ತಿರಂಗಾ ಅಭಿಯಾನದ ಮೂಲಕ ತಿರಂಗಾ ಮೇಳ ಮೇರವಣಿಗೆಗೆ ಪೂಜ್ಯ ಶ್ರೀ ಷ.ಬ್ರ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹಾಗೂ ನಗರಸಭೆಯ ಪೌರಾಯುಕ್ತರಾದ ರಾಜು ಡಿ.ಬಣಕಾರ ಅವರು ಚಾಲನೆ ನೀಡಿದರು.
ಬಸವಕಲ್ಯಾಣ ಕೋಟೆಯಿಂದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಮುಖ್ಯ ರಸ್ತೆಯ ಮಾರ್ಗವಾಗಿ ಗವಿಮಠದವರೆಗೆ ದೇಶದ ಧ್ವಜವನ್ನು ಹಿಡಿದು ಜೈಘೋಶ ದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ತದನಂತರ ಗವಿಮಠದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಜನಪದ ಕಲಾ ತಂಡದವರಿಂದ ರಾಷ್ಟ್ರಗೀತೆಯೊಂದಿಗೆ ಸಂಗೀತೋತ್ಸವ ಕಾರ್ಯಕ್ರಮ ಜರುಗಿತು.
ವರದಿ: ಶ್ರೀನಿವಾಸ ಬಿರಾದಾರ



















