ಬಾಗಲಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಬಿಲಾಲ ಮೊಹಲ್ಲಾ ಬಡಾವಣೆಯ 2022 – 23ನೇ ಸಾಲಿನ ವಿವೇಕ್ ಶಾಲಾ ಬೋಧನಾ ಕೊಠಡಿಗಳ ನಿರ್ಮಾಣದ ಯೋಜನೆಯ ಅಡಿಯಲ್ಲಿ , ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 2 ಗೆ ಒಂದು ಕೊಠಡಿ ಮಂಜುರಾಗಿದ್ದು , ಈ ಕೊಠಡಿಯ ನಿರ್ಮಾಣದ ಅಂದಾಜು ವೆಚ್ಚ ರೂಪಾಯಿ 13.90 ಲಕ್ಷ ರೂಪಾಯಿಗಳಲ್ಲಿ ನಿರ್ಮಾಣವಾಗಲಿದೆ , ಈ ಭೂಮಿ ಪೂಜಾ ಕಾರ್ಯಕ್ರಮವನ್ನು ತೇರದಾಳ ಮತ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಸಿದ್ದು ಸವದಿ ಅವರು ಗುದ್ದಲಿ ಪೂಜೆ ಮೂಲಕ ಕಾರ್ಯಕ್ರಮವನ್ನು ನೆರವೇರಿಸಿದರು .
ಈ ಭೂಮಿ ಗುದ್ದಲಿ ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ ,
ರಬಕವಿ ಬನಹಟ್ಟಿ ನಗರಸಭೆಯ ಸದಸ್ಯರಾದ ಮಿಸ್ಸಸ್ ಮುರಾದ್ ಮೊಮಿನ್,
ಸಿದ್ರಾಮಣ್ಣ ಸೌದತ್ತಿ ,ನಗರಸಭೆ ಹಲೋ ಸ್ಥಾಯಿ ಸಮಿತಿ ಚೆರ್ಮನ ಸದಾಶಿವ ಪರಿಟ್ , ಅಶೋಕ್ ರಾವಲ್ ಶಿವಾನಂದ್ ಕಾಗಿ , ಜಾಕಿರ್ ಹುಸೇನ್ ಬಾರಿಗಡ್ಡಿ ,ಶಿವಾನಂದ ಬುದ್ನಿ , ದುರ್ಗವ್ವ ಹರಿಜನ್ ಭರ್ಮಪ್ಪ ಮೂಲಿಮನ, ಭಾರತೀಯ ಜನತಾ ಪಕ್ಷ ರಬಕವಿ ಬನಹಟ್ಟಿ ನಗರ ಘಟಕದ ಅಲ್ಪಸಂಖ್ಯಾತರ ಅಧ್ಯಕ್ಷ ಮಲ್ಲಿಕ್ ಬಾರಿಗಡ್ಡಿ, ಶಾಲೆಯ ಮುಖ್ಯ ಗುರುಗಳಾದ, ಇಂಡಿಕರ್ ಸರ್, ರಬಕವಿ ಬನಹಟ್ಟಿ ಉರ್ದು ಸಿಆರ್ಪಿ ಆಯೆಜಾಜ್ ಅಹ್ಮದ್ ಬಾಗೇವಾಡಿ, ಸಿರಾಜ್ ಮೊಮಿನ್ ,ಬುಡನ್ ಗೋರಿ, ಬಂದೆನವಾಜ್ ಮೊಮಿನ್, ಹಾರೂನ್ ಮೊಮಿನ್ ,ಶಬೀರ್ ಮೊಮಿನ್ ,ಮುರಾದ್ ಬಾರಿಗಡ್ಡಿ ,ಇಮ್ತಿಯಾಜ್ ಅತ್ತಾರ, ಝುಬೆರ್ ಮೊಮಿನ್ , ಹಿದಾಯತ್ ಮಾಲ್ದಾರ್ ,ಇನ್ನು ಅನೇಕ ಹಿರಿಯರು ಮತ್ತು ಯುಕರು ಈ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು .
ವರದಿ ಮಹೆಬೂಬ ಬಾರಿಗಡ್ಡಿ