ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದು, ಹಿಂದುಳಿದವರ ಮೇಲಿನ ಹಲ್ಲೆ ಖಂಡಿನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕರೆದ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತಾನಾಡಿದ ಅವರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತ,ಶಾಸಕ ಯಶವಂತರಾಯಗೌಡ ಪಾಟೀಲರ ಆಪ್ತ ಸಾಲೋಟಗಿ ಗ್ರಾಮದ ವಿಠ್ಠಲ್ ಯಲಗೊಂಡ ಗೌರ (ಪೂಜಾರಿ) ಮೇಲೆ 27/01/2023 ರಂದು ರಾತ್ರಿ 11 ಗಂಟೆಗೆ ಮಾರಣಾಂತಿಕ ಹಲ್ಲೆ ಮಾಡಿದ್ದವರನ್ನ ಜೊತೆಗೆ ಶಾಮೀಲು ಆದವರನ್ನ ಕೂಡಲೇ ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಒಂದು ವೇಳೆ ಬಂಧಿಸಿದಿದ್ದರೆ ೨,೩ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತೆದೆ.
ಈ ರೀತಿಯಾಗಿ ಹಲ್ಲೆಗೈದು ವಾತಾವರಣ ಕೆಡಿಸುವ ಪ್ರಯತ್ನ ಮಾಡುತ್ತಿದ್ದು ಸೋಲಿನ ಭಯ ಭೀತಿಯ ಹತಾಶೆಯಿಂದ ಮಾಡುವ ಕೃತ್ಯವಾಗಿದೆ.
ಇನ್ನೂ ಜೀವ ಬೆದರಿಕೆ ಕೂಡಾ ಹಾಕುತ್ತಿದ್ದಾರೆ.
ಈ ಬಾರಿಯೂ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂಬ ಆತಂಕದಿಂದ ತಾಲ್ಲೂಕಿನಲ್ಲಿ ಭಯ ಹುಟ್ಟಿಸುವ ಕಾರ್ಯ ನಡೆಯುತ್ತಿದೆ ಆದರೆ ಕಾರ್ಯಕರ್ತರು ಯಾರೂ ಹೆದರುವ ಅವಶ್ಯಕತೆ ಇಲ್ಲ.
ಪ್ರತಿಯೊಬ್ಬ ಕಾರ್ಯಕರ್ತರ ಜೊತೆ ನಮ್ಮ ಪಕ್ಷ, ಮುಖಂಡರು,ಶಾಸಕರು ಇರುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಭೀಮಣ್ಣ ಕೌಲಗಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಕಾಳೆ,ಯೂತ್ ಕಾಂಗ್ರೆಸ್ ಅಧ್ಯಕ್ಷ ಅವಿನಾಶ್ ಬಗಲಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ್ ಕುಡಿಗನೂರ, ಯಮುನಾಜಿ ಸಾಳುಂಕೆ,ಪುರಸಭೆ ಹಾಲಿ ಸದಸ್ಯ ಅಯೂಬ್ ಬಾಗವಾನ,ಸತೀಶ್ ಕುಂಬಾರ,ಹುಚ್ಚಪ್ಪ ತಳವಾರ,ನ್ಯಾಯವಾದಿ ಎಸ್.ಜೆ.ವಾಲಿಕಾರ, ರಮಜಾನ ವಾಲಿಕಾರ ಹಾಗೂ ಕಾರ್ಯಕರ್ತರು ಇದ್ದರು.
ವರದಿ-ಅರವಿಂದ್ ಕಾಂಬಳೆ