ಬಾಗಲಕೋಟೆ : ಮುಧೋಳದಲ್ಲಿ ಧಮ೯ವೀರ ಪ್ರತಿಷ್ಠಾನವು ಶನಿವಾರ ದಿ 23 ರಂದು ಹಮ್ಮಿಕೊಂಡಿರುವ “ಧಮ೯ವಿರೋಧಿಗಳನ್ನು ಬಂಧಿಸಿ” ಜಾಥಾ ಕಾರ್ಯಕ್ರಮಕ್ಕೆ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಶರಣಬಸವಶಾಸ್ತ್ರಿಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿ ಮಾತನಾಡುತ್ತಾ ಕರ್ನಾಟಕ ರಾಜ್ಯದ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಧರ್ಮಸ್ಥಳ ಶ್ರೀ ಕ್ಷೇತ್ರವು ಕೋಟ್ಯಾಂತರ ಭಕ್ತರನ್ನ ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ.ಹಾಗೆ ಧರ್ಮಸ್ಥಳದ ಪೂಜ್ಯರಾದ ವೀರೇಂದ್ರ ಹೆಗ್ಗಡೆಯವರು ಒಬ್ಬ ದೇವತಾ ಮನುಷ್ಯ, ಅಂಥವರ ತೇಜೋವಧೆ ಮಾಡಲು ನೀಚ ಜನ ಇಲ್ಲ ಸಲ್ಲದ ಆರೋಪಗಳನ್ನ ಮಾಡುತ್ತಿರುವುದು ಖಂಡನೀಯ. ಇಂತಹ ಕೀಳುಮಟ್ಟದ ಅಭಿರುಚಿಗಳನ್ನು ಹೊಂದಿರುವ ಮತಾಂಧರನ್ನು ಮತೀಯವಾದಿಗಳನ್ನು ಸರ್ಕಾರ ಶೀಘ್ರವೇ ಬಂಧಿಸಬೇಕೆಂದು ಒತ್ತಾಯಿಸಿದ ಅವರು ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳ ಮುಖಂಡರು ಶನಿವಾರ ದಿ.23 ರಂದು ಮಧ್ಯಾಹ್ನ 12 ಗಂಟೆಗೆ ನಡೆಯುವ ಜಾಥಾದಲ್ಲಿ ಭಾಗವಹಿಸಲು ತಿಳಿಸಿದ್ದಾರೆ.
- ಕರುನಾಡ ಕಂದ



















