ಸರ್ಕಾರಿ ವಿದ್ಯಾರ್ಥಿ ನಿಲಯ
ಹಸಿರಿನಿಂದ ಕಂಗೊಳಿಸುತ್ತಿರುವ ಕೈತೋಟ
ನುಲಿಯುತ್ತಿರುವ ನಿಂಬೆಹಣ್ಣುಗಳು
ಬಾಗಿ ಬಳುಕುತ್ತಿರುವ ಬಾಳೆಗೊನೆ
ಎಳ್ಳಿಕಾಯಿ,ನಲ್ಲಿಕಾಯಿ,ನುಗ್ಗೆಕಾಯಿ,ಹುಣಸೆಹಣ್ಣು ತೆಂಗಿನಕಾಯಿ ಬೆಳೆದು ಕಾದಿದೆ ದಾಸೋಹಕೆ
ಸುಸಜ್ಜಿತವಾದ ಆಫೀಸಿನ ಕೊಠಡಿ
ಸುತ್ತಮುತ್ತಲಿನ ಪರಿಸರಕ್ಕೆ ಕ್ಯಾಮರಗಳ ಕಣ್ಗಾವಲು
ವಿದ್ಯಾರ್ಥಿಗಳು ಕುಳಿತು ಒದಲು
ಸ್ವಚ್ವವಾದ ಮೇಜು
ಮಲಗಲು ಮೆತ್ತನೆಯ ಹಾಸಿಗೆ
ಮಕ್ಕಳಿಗೆಲ್ಲಾ ಬೆಚ್ಚಗಿನ ನವ ನವೀನ ಹೊದಿಕೆ
ಉತ್ತಮವಾದ ಸೊಳ್ಳೆ ಪರದೆಗಳು
ನವನವೀನ ರೀತಿಯ ಹದಿಮೂರು ಗಣಕಯಂತ್ರ
ಅರವತ್ತೈದು ವಿದ್ಯಾರ್ಥಿಗಳಿಗೂ ಒಂದೇ ರೂಲ್
ಸುಣ್ಣ ಬಣ್ಣ ಲೇಪಿತ ಸುಂದರ ಕೊಠಡಿ
ಇಲ್ಲಿನ ವಿದ್ಯಾರ್ಥಿ ನಿಲಯವಾಗಿದೆ ಸುಸಂಸ್ಕೃತಿಯ ದೇವಾಲಯ
ಬಗೆ ಬಗೆಯಾದ ಹಣ್ಣುಗಳಾದ ಪಪ್ಪಾಯಿ,ಸಪೋಟ,ಮಾವು,ಹಲಸು,ಸೀತಾಫಲ,ನೇರಳೆ,ಅಂಜೂರ,ಸೀಬೆ
ಹಣ್ಣುಗಳ ತೋಟ
ಘಮ ಘಮುಸುವ ದುಂಡುಮಲ್ಲಿಗೆ ಹೂವು
ಚೆಂಡು,ದಾಸವಾಳ,ಸೇವಂತಿ,ಸಂಪಿಗೆ, ಬಿಂದಿಗೆ,ಕಾಕಡ ಮಳ್ಳೆ ಕನಕಾಂಬರ
ಹೂವಿನಿಂದ ಅಲಂಕೃತವಾದ ವಿದ್ಯಾರ್ಥಿ ನಿಲಯದ ಆವರಣ
ಹದಿನೈದು ಸಾವಿರ ಲೀಟರ್
ನೀರಿಡಿಯುವ ನೀರಿನ ಟ್ಯಾಂಕ್
ಬಿಸಿ ನೀರಿಗೆ ನಾಲ್ಕ ಸೋಲಾರ್ ಸೆಟ್
ಮಳೆ ನೀರಿಗಾಗಿ ಹಿಂಗು ಗುಂಡಿ
ನೀರಿಗಾಗಿ ಇದೆ ಕೊಳವೆ ಬಾವಿ
ಇದೆಲ್ಲಾ ಇರುವುದು
ಹಣಬೆ ಸರ್ಕಾರಿ ಬಾಲಕರವಿದ್ಯಾರ್ಥಿ ನಿಲಯದಲ್ಲಿ
ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯವೆಂದರೆ
ಮೂಗು ಮುರಿಯುವರು ನಮ್ಮ ಜನ
ನೋಡಬೇಕು ಅಂತಹವರು
ನಮ್ಮ ಬಾಲಕರ ವಿದ್ಯಾರ್ಥಿ ನಿಲಯ ಒಂದು ದಿನ
ಕನ್ನಡ ಬಾಷೆ ಉಳಿಸಿ
ಸರ್ಕಾರಿ ಶಾಲೆ ಬೆಳಸಿ
ಇದಕ್ಕೆಲ್ಲಾ ಸೂತ್ರದಾರರು ನಮ್ಮ
ಅಣ್ಣಯ್ಯ,ಎಂ,ಎ
ಜೂನಿಯರ್ ವಾರ್ಡನ್ ಸಾರ್
-ವಿ.ಶ್ರೀನಿವಾಸ,ವಾಣಿಗರಹಳ್ಳಿ,
ದೊಡ್ಡಬಳ್ಳಾಪುರ (ತಾ)