ಚೇಳಾೖರು, ಮಂಗಳೂರು, ಜನವರಿ 28 : ಮುಲ್ಕಿ ಮೂಡಬಿದರೆ ಕ್ಷೇತ್ರದ ಘನವೆತ್ತಿದ ಶಾಸಕ ಶ್ರೀ. ಉಮಾನಾಥ ಕೋಟ್ಯಾನ್ ರವರು ಬೆಳಗ್ಗೆ ಗಂಟೆ ಒಂಬತ್ತರಿಂದ ಚೇಳಾೖರುಚಳರ ಗ್ರಾಮಕ್ಕೆ ಆಗಮಿಸಿ ಇಲ್ಲಿನ ದ.ಕ ಜಿ ಪ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿಕೊಟ್ಟು ಶಾಲಾ ಮಕ್ಕಳು , ಟೀಚರ್ಸ್ ಮತ್ತು ಟ್ರಸ್ಟ್ ನ ಸದಸ್ಯರನ್ನು ವಿಚಾರಿಸಿ ಶಾಲೆಗೆ ಆವಶ್ಯಕ ಸವಲತ್ತುಗಳ ಬಗ್ಗೆ ವಿಚಾರಿಸಿ ತನ್ನ ವ್ಯಾಪ್ತಿಯಲ್ಲಿ ಸಾದ್ಯವಾದ ಸಹಕಾರ ಕೊಡುವುದಾಗಿ ಭರವಸೆಯಿತ್ತರು. 9:30 ಕ್ಕೆ ಶಾಲೆಯ ಮುಂಭಾಗದ ರಸ್ತೆಯ ಕಾಂಕ್ರಿಟೀಕರದ ಕಾಮಗಾರಿಯ ಭೂಮಿಪೂಜೆ ನೆರವೇರಿಸಿದರು. ನಂತರ ಉತ್ಸಾಹಿ ತರುಣ ವೃಂದ ಮುಂಭಾಗದ ರಸ್ತೆಯ ಕಾಮಗಾರಿಯ ಕಾಂಕ್ರೇಟೀಕರಣದ ಕಾಮಗಾರಿಯ ವೀಕ್ಷಣೆ ಗೈದು ಗ್ರಾಮಸ್ಥರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿದರು. ತದನಂತರ ನೂತನ ವಾಗಿ ನಿರ್ಮಾಣ ಗೊಂಡ ಘನ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕದ ಉದ್ಘಾಟನೆ ಗೈದರು. ಪಂಚಾಯತಿ ಸಮೀಪ ದುರಸ್ತಿಗೊಂಡ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿದರು. ನಂತರ ಪಂಚಾಯತಿ ಸಭಾಂಗಣದಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ತನ್ನ ಶಾಸಕ ಅವಧಿಯಲ್ಲಿ ಅತಿಹೆಚ್ಚು ಅನುದಾನವನ್ನು ತಂದು ಮತದಾರರ ಋಣ ತೀರಿಸುವ ಪ್ರಯತ್ನ ಮಾಡಿದ್ದೇನೆ ಎಂದು ತಮ್ಮ ಮನದಾಳದ ಇಂಗಿತವನ್ನು ಸಭೆಯಲ್ಲಿ ವ್ಯಕ್ತಪಡಿಸಿದರು. ಉದಾರ ದನಿ ಶ್ರೀ ಕರುಣಾಕರ ಶೆಟ್ಟಿ ಯವರು ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಪ್ರಶಂಶಿಸಿ ಮುಂದೆಯೂ ಗ್ರಾಮಸ್ಥರು ಇವರನ್ನು ಬೆಂಬಲಿಸಬೇಕಾಗಿ ವಿನಂತಿಸಿದರು. ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ಯಶೋದಾ ರವರು ತಮ್ಮ ಅವಧಿಯ್ಲಲಿ ಶಾಸಕರ ಬೆಂಬಲದಿಂದಾಗಿ ಅನೇಕ ಅಭಿವೃದ್ಧಿ ಕಾರ್ಯಗಳು ಅನುಷ್ಠಾನ ವಾದುದಕ್ಕೆ ಕೃತಜ್ಞತೆ ಸಲ್ಲಿಸಿದರು. ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಸಹಕರಿಸಿದ ಶ್ರೀ ಅಬ್ದುಲ್, ಶ್ರೀ ವೆಂಕಟೇಶ್ ಶೆಟ್ಟಿ, ಶ್ರೀ ಪುಷ್ಪರಾಜ್ ಶೆಟ್ಟಿ, ಶ್ರೀಮತಿ ಪಾರ್ವತಿ ಯವರನ್ನು ಸನ್ಮಾನಿಸಲಾಯಿತು. ವಿವಿಧ ಫಲಾನುಭವಿಗಳಿಗೆ ಸರಕಾರದ ಸಹಾಯಧನವನ್ನು ಶಾಸಕರು ವಿತರಿಸಿದರು. ವೇದಿಕೆಯಮೇಲೆ ಉಪಾಧ್ಯಕ್ಷ ಶ್ರೀ ಬಾಲಕೃಷ್ಣ ಶೆಟ್ಟಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಡಾ. ಜ್ಯೋತಿ ಮತ್ತು ಎಲ್ಲಾ ಸದಸ್ಯರು ಆಸೀನ ರಾಗಿದ್ದರು. ಸಭೆಯ ಮುಂಭಾಗದಲ್ಲಿ ಗ್ರಾಮಸ್ಥರಲ್ಲಿ ಮುಖಂಡರಾದ ಶ್ರೀ. ದಿವಾಕರ ಸಾಮಾನಿ, ಶ್ರೀ ರಮೇಶ ಪೂಜಾರಿ, ಶ್ರೀಮತಿ ವಜ್ರಾಕ್ಷಿ ಶೆಟ್ಟಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು ಮತ್ತು ಅನೇಕ ಗ್ರಾಮಸ್ಥರು ಹಾಗು ಪಂಚಾಯತ್ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಹಾಗು ಮುಡಾ ಸದಸ್ಯ ಶ್ರೀ . ಜಯಾನಂದ ಕಾರ್ಯಕ್ರಮ ನಿವಹಿಸಿದರು, ಪಿ. ಡಿ .ಓ ಶ್ರೀ ನಿತ್ಯಾನಂದ ವಂದನಾರ್ಪಣೆ ಗೈದರು.
-ಚಂದ್ರಶೇಖರ ಹೆಬ್ಬಾರ್ ಕೊಲ್ಯ