ಶಿಗ್ಗಾoವ: ಹುಟ್ಟು ಜೀವನ: 1972-73ರಲ್ಲಿ ತಂದೆಯವರ ವೃತ್ತಿ ಜೀವನವಾದ ವಕೀಲ ವೃತ್ತಿಯನ್ನು ಮಾಡುತ್ತಾ ಅಂದಿನ ಹುಬ್ಬಳ್ಳಿ ಗ್ರಾಮಕ್ಕೆ ಬಂದರು. ಮೂಲತಃ ಕುಂದಗೋಳ ತಾಲೂಕ ಕಮಡೊಳ್ಳಿ ಗ್ರಾಮದವರಾದ ಮಾಜಿ ಮುಖ್ಯಮಂತ್ರಿಗಳು ಎಸ್ ಆರ್ ಬೊಮ್ಮಾಯಿ ಹಾಗೂ ಪತ್ನಿ ಗಂಗಮ್ಮ ಎಸ್ ಬೊಮ್ಮಾಯಿಯವರ ೩ನೇ ಮಗನಾಗಿ ಶ್ರೀ ಬಸವರಾಜ ಎಸ್.ಬೊಮ್ಮಾಯಿಯವರು 1960 ಜನೇವರಿ 28ರಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನಲ್ಲಿ ಜನಿಸಿ ಶಿಕ್ಷಣವನ್ನು ಹುಬ್ಬಳ್ಳಿಯಲ್ಲಿಯೇ ಮುಗಿಸಿದ್ದು ಉನ್ನತ ಶಿಕ್ಷಣವಾದ ಬ್ಯಾಚ್ಯುಲರ ಆಫ್ ಇಂಜೀನಿಯರ ಶಿಕ್ಷಣವನ್ನು ಬಿ.ವ್ಹಿ ಭೂಮರೆಡ್ಡಿ ಕಾಲೇಜ್ ಹುಬ್ಬಳ್ಳಿಯಲ್ಲಿ ಮುಗಿಸಿದ್ದು ಮೆಕ್ಯಾನಿಕಲ್ ಇಂಜಿನೀಯರ್ ಪಧವಿದರರಾಗಿದ್ದಾರೆ. ಪುಣೆಯಲ್ಲಿ ಟಾಟಾ ಮೋಟಾರ್ಸ ಕಂಪನಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದು 1993ರಲ್ಲಿ ಚೆನ್ನಮ್ಮ ಅವರನ್ನು ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ವೃತ್ತಿಯಲ್ಲಿ ಕೃಷಿ ಹಾಗೂ ಕೈಗಾರಿಕೋದ್ಯಮಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ.
ರಾಜಕೀಯ ಜೀವನ: ಬೊಮ್ಮಾಯಿಯವರು ಧಾರವಾಡ ಸ್ಥಳೀಯ ಕ್ಷೇತ್ರದಿಂದ 1998 ರಿಂದ 2004ರ ವರೆಗೆ ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಹಾಗೂ ಮಾಜಿ ಮುಖ್ಯಮಂತ್ರಿಗಳು ದಿವಂಗತ ಜೆ.ಎಚ್.ಪಟೇಲ ಅವರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾ ಸಂಯುಕ್ತ ಜನತಾದಳ ಪಕ್ಷಕ್ಕೆ ಸೇರಿದರು ನಂತರ 2008 ಪೆಬ್ರುವರಿಯಲ್ಲಿ ಬಿಜೆಪಿಯ ಅಂದಿನ ರಾಜಕೀಯದ ಪ್ರಬಲ ಆಕಾಂಕ್ಷಿಯಾದ ಬಿ.ಎಸ್ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಬಿ.ಜೆ.ಪಿ ಪಕ್ಷಕ್ಕೆ ಪಕ್ಷಾಂತರಗೊಂಡು ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ ಕ್ಷೇತ್ರದಿಂದ ಸ್ಪರ್ದಿಸಿ ಬಹುಮತದಿಂದ ಆಯ್ಕೆಗೊಂಡು ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಜಗದೀಶ ಶೆಟ್ಟರ್ ಹಾಗೂ ಸದಾನಂದ ಗೌಡ ಇವರ ಅಡಿಯಲ್ಲಿ ಬೃಹತ್ ಮತ್ತು ಮಧ್ಯಮ ಜಲ ಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದರು. ನಂತರ 2013ರ ಚುನಾವಣೆಯಲ್ಲಿಯೂ ಸಹ ಈ ಕ್ಷೇತ್ರದಿಂದ ಆಯ್ಕೆಯಾಗಿ ಶಾಸಕರಾಗಿ ನಂತರ ೨೦೧೮ರ ಚುನಾವಣೆಯಲ್ಲಿ ಆಯ್ಕೆಯಾಗಿ ಬಿ.ಎಸ್ ಯಡಿಯೂರಪ್ಪನರ ಅಡಿಯಲ್ಲಿ 2019ರಲ್ಲಿ ಗೃಹ ಮಂತ್ರಿಗಳಾಗಿ ದಿನಾಂಕ:27 ಜುಲೈ 2021ರಂದು ಕ್ಷೇತ್ರದಿಂದ 2ನೇ ಮುಖ್ಯಮಂತ್ರಿಯಾಗಿ ಹಾಗೂ ಕರ್ನಾಟಕ ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ಹಾಗೂ ಸತತ 3 ಬಾರಿ ಒಂದೇ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಗೆಲುವನ್ನು ಕಂಡಿದ್ದು ಈ ಕ್ಷೇತ್ರದ ಜನರಿಗೆ ತುಂಬಾ ಸಂತಸ ತಂದಿದೆ ಮತ್ತು ಶಿಗ್ಗಾಂವ ಕ್ಷೇತ್ರಕ್ಕೆ ಅಪಾರ ಕೊಡುಗೆ ಹಾಗೂ ಅಭಿವೃದ್ದಿಗೆ ಶ್ರಮಿಸುತ್ತಿದ್ದು ಈ ಕ್ಷೇತ್ರದ ಜನರಿಗೆ ದುಡಿಯಲು ಅನುಕೂಲವಾಗುವಂತೆ ಇದೇ ಕ್ಷೇತ್ರದಲ್ಲಿ ಜವಳಿ ಪಾರ್ಕ, ಗಾರ್ಮೆಂಟ್ಸ, ಸಕ್ಕರೆ ಕಾರ್ಖಾನೆ ಹಾಗೂ ಇನ್ನೀತರ ಹಲವಾರು ಉದ್ಯೋಗಗಳನ್ನು ಸೃಜಿಸಿ ಸತತ ೩ಬಾರಿ ಹ್ಯಾಟ್ರಿಕ್ ಗೆಲುವನ್ನು ಬಾರಿಸಿ ಜಯಶಾಲಿಯಾಗಿ ಕರ್ನಾಟಕ ರಾಜ್ಯದ ಎಲ್ಲರ ಮನೋ ಹೃಯವನ್ನು ಗೆದ್ದಿದ್ದಾರೆ ಆದ ಕಾರಣ ಈ ಕ್ಷೇತ್ರದಲ್ಲಿ ಇವರ 63ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಜಾತ್ರೆಯ ರೂಪದಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದು ದಿನಾಂಕ:28-01-2023 ಶನಿವಾರ ಬೆಳಿಗ್ಗೆ 6ಗಂಟೆಗೆ ಶಿಗ್ಗಾಂವ ತಾಲೂಕ ನಾರಾಯಣಪೂರ ಗ್ರಾಮದ ಶ್ರೀ ದುಂಡೀಬಸವೇಶ್ವರ ದೇವಸ್ಥಾನದಲ್ಲಿ ಮಾಜಿ ಜಿ.ಪಂ ಸದಸ್ಯರಾದ ಶಶೀಧರ ಹೊನ್ನಣ್ಣವರ ಹಾಗೂ ಗ್ರಾ.ಪಂ ಅಧ್ಯಕ್ಷರಾದ ರಾಜೇಶ್ವರಿ ಬಡಿಗೇರ ಇವರ ಸಾರಥ್ಯದಲ್ಲಿ ವಿಶೇಷ ರುದ್ರಾಭಿಷೇಕ ನೆರವೇರಿಸುವುದರೊಂದಿಗೆ ನಾಡದೊರೆ ನಡೆದು ಬಂದ ದಾರಿ ಬಾಷಣ ಸ್ಪರ್ದೆಯನ್ನು ಶಿಗ್ಗಾಂವ ತಾಲೂಕ ಇಬ್ರಾಹಿಂಪೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು, ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಾಗೂ ಸಂಜೆ 5ಗಂಟೆಗೆ ಖ್ಯಾತ ಜೀ ಕನ್ನಡ ವಾಹಿನಿಯ ನಿರೂಪಕಿಯಾದ ಮಂಗಳೂರಿನ ಅನುಶ್ರೀ ಖ್ಯಾತ ಗಾಯಕರಾದ ಶ್ರೀ ವಿಜಯ ಪ್ರಕಾಶ ಮತ್ತು ಮೆಲೋಡಿ ಕಿಂಗ್ ರಾಜೇಶ ಕೃಷ್ಣನ್ ಹಾಗೂ ತಂಡದವರಿಂದ ಸಂಗೀತ ಹಾಗೂ ರಸಮಂಜರಿ ಕಾರ್ಯಕ್ರಮವನ್ನು ನೃತ್ಯದ ರೂಪದಲ್ಲಿ ನೀಡಿದರು. ಮತ್ತು ಎಸ್ ಎಸ್ ಎಲ್ ಸಿ ಹಾಗೂ ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ, ನೆಹರು ಓಲೇಕಾರ, ಬಸವರಾಜ ಹೊರಟ್ಟಿ ಇನ್ನೀತರ ಹಲವಾರು ಗಣ್ಯವ್ಯಕ್ತಿಗಳು ಪಾಲ್ಗೊಂಡಿದ್ದರು. ಮತ್ತು ಬಿಜೆಪಿಯ ತಾಲೂಕಾ ಅಧ್ಯಕ್ಷರಾದ ಶಿವಾನಂದ ಮ್ಯಾಗೇರಿ ಇವರು ಮುಖ್ಯ ಮಂತ್ರಿಗಳ ಮೇಲೆ ಕವನ ವಾಚನ ಮಾಡುವುದರ ಮೂಲಕ ಈ ಸಂಭ್ರಮಕ್ಕೆ ಇನ್ನೂ ಹೆಚ್ಚು ಆರ್ಷಣೆಯನ್ನು ಮಾಡಿದರು. ಶ್ರೀಕಾಂತ ದುಂಡಿಗೌಡ್ರ ಗುತ್ತಿಗೆದಾರರು ಶಿಗ್ಗಾಂವ ಹಾಗೂ ಬಸವರಾಜ ಎಸ್ ಬೊಮ್ಮಾಯಿ ಅಭಿಮಾನಿ ಬಳಗ ಶಿಗ್ಗಾಂವ-ಸವಣೂರ ಇವರ ಸಾರಥ್ಯದಲ್ಲಿ ಸುಮಾರು ೧ಲಕ್ಷಕ್ಕು ಅಧಿಕ ಜನರು ಈ ಒಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ವರದಿಗಾರರು: ಪ್ರವೀಣ ಎಸ್ ಬಡಿಗೇರ,ನಾರಾಯಣಪೂರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.