
ಚಾಮರಾಜನಗರ : ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ, ಅಂಚಿಪಾಳ್ಯ ಗ್ರಾಮದಲ್ಲಿ ಇರುವ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ದುರ್ವ್ಯವಸ್ಥೆ ಹಾಗೂ ಶಾಲೆಯ ಸುತ್ತಮುತ್ತ ಗೋಡೆಗಳು ಬಿರುಕು ಬಿಟ್ಟಿದೆ, ಮತ್ತು ಸೀಲಿಂಗ್ ಅಲ್ಲಿ ಗೋಡೆಗಳು ಚುರುಕಿ ಬಿದ್ದು ಹಾಳಾಗಿದೆ ಮಳೆ ಬಂದರೆ ನೀರು ಸುರಿಯುವಿಕೆ ಆಗುತ್ತಿದೆ, ಮತ್ತೆ ಕೂತ್ಕೊಳ್ಳಲು ಚೇರು ಮತ್ತೆ ಟೇಬಲ್ ಗಳ ವ್ಯವಸ್ಥೆ ಇಲ್ಲ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯಗಳ ವ್ಯವಸ್ಥೆ ಇಲ್ಲ ಆದ್ದರಿಂದ ಶಾಲಾ ಮಕ್ಕಳು ರಸ್ತೆ ಬದಿ ಕಡೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡಾ ಇತ್ತ ಸರ್ಕಾರಿ ಶಾಲೆಗೆ ಭೇಟಿ ಕೊಡದ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ವಿದ್ಯಾರ್ಥಿನಿಯರಿಗೆ, ಆಟವಾಡಲು ಸ್ಥಳವಿಲ್ಲ ಆದುದರಿಂದ ರಸ್ತೆ ಬದಿಯಲ್ಲಿ ಆಟವಾಡುತ್ತಿರುವ ಶಾಲಾ ಮಕ್ಕಳು ಇದನ್ನು ನೋಡಿ ಬೇಸತ್ತು ಹೋದ ಗ್ರಾಮಸ್ಥರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಶಾಲಾ ಮಕ್ಕಳಿಗೆ ಅನುಕೂಲವಾಗುವ ಹಾಗೆ ಕಟ್ಟಡ ನಿರ್ಮಾಣ ಆಟದ ಮೈದಾನ ಶೌಚಾಲಯ ನಿರ್ಮಿಸಿ ಕೊಡುತ್ತಾರೆ ಕಾದು ನೋಡಬೇಕಾಗಿದೆ.
ವರದಿ ಉಸ್ಮಾನ್ ಖಾನ್



















