ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಗ್ರಾಮೀಣ ಯೋಜನೆ ಅಡಿ ಗ್ರಾಮದ ದೊಡ್ಡ ಕೆರೆಯಲ್ಲಿ ಕೂಲಿಕಾರ್ಮಿಕರಿಂದ ಕೆಲಸ ಮಾಡಲು ಪೂಜೆ ಮಾಡುವ ಮೂಲಕ ಪ್ರಾರಂಭಿಸಲಾಯಿತು ಕೆಲಸದ ಪ್ರಾರಂಭದ ವೇಳೆ ಕೂಲಿ ಕಾರ್ಮಿಕರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ರಾಮಚಂದ್ರ ಓಲೆಕಾರ,ಉಪಾಧ್ಯಕ್ಷರಾದ ಶ್ರೀಬಸನಗೌಡ ಪಾಟೀಲ, ಸದಸ್ಯರುಗಳಾದ ಶ್ರೀಶಿವಾಜಿ ಸಾಳಂಕಿ ಮತ್ತು ಹನುಮಂತಪ್ಪ ಮಾಲಾಪುರ ಗ್ರಾಮದ ಪ್ರಮುಖರಾದ ಬಸವರಾಜ ಚಲ್ಲಾಳ,ಶೇಖಪ್ಪ ವಡ್ಡರ,ಶಿವಾನಂದ ಬಿಂಗಾಪುರ,ಶಿವಪ್ಪ ವಾಲೀಕಾರ,ನಾಗರಾಜ ವಡ್ಡರ, ಎಲ್ಲಪ್ಪ ಹರಿಜನ,ಪರಶುರಾಮ ಅಜ್ಜಳ್ಳಿ ತಾಲೂಕ ಪಂ. ಸಿಬ್ಬಂದಿ ಬಿ ಎಫ್ ಟಿ ಯವರು ಉಪಸ್ಥಿತರಿದ್ದರು ಗ್ರಾಮ ಪಂಚಾಯತ್ ಪಿ ಡಿ ಓ ಎಂ ಜಿ ಹಿರೇಮಠ ಎಂ ಜಿ ಎನ್ ಆರ್ ಜಿ ಎ ಕೆಲಸದ ಬಗ್ಗೆ ನಿಯಮಾವಳಿಗಳನ್ನು ಕೂಲಿ ಕಾರ್ಮಿಕರಿಗೆ ತಿಳಿಸಿ ಹೇಳಿದರು ನಂತರ ಕಾರ್ಮಿಕರು ಕೆಲಸವನ್ನು ಪ್ರಾರಂಭಿಸಿದರು.
ವರದಿಗಾರರು:ರವಿ ಕೃಷ್ಣಪ್ಪ ಓಲೆಕಾರ