ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ರಾಜ್ಯ ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕರು ಆಗಮಿಸಿ, ವೇತನ ಹೆಚ್ಚಳ ಹಾಗೂ ತಮ್ಮ ಸ್ಥಾನ ಖಾಯಂ ಗೊಳಿಸುವ ಕುರಿತು ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ

ಹನೂರು ಪಟ್ಟಣದ ಆರ್ ಎಸ್ ದೊಡ್ಡಿ ಗ್ರಾಮದಲ್ಲಿ ಜನ ಧ್ವನಿ ಬೀ.ವೆಂಕಟೇಶ್ ಕಚೇರಿಗೆ ರಾಜ್ಯ ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕರು ಆಗಮಿಸಿ, ವೇತನ ಹೆಚ್ಚಳ ಹಾಗೂ ತಮ್ಮ ಸ್ಥಾನ ಖಾಯಂ ಗೊಳಿಸುವ ಕುರಿತು ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಸಲ್ಲಿಸಿದರು.

ಅವರ ಮನವಿಗೆ (ಬೀ.ವೆಂಕಟೇಶ್ ಬಿಜೆಪಿ ಓಬಿಸಿ ರಾಜ್ಯ ಕಾರ್ಯಕಾರಣಿ ಸದಸ್ಯರು )ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇದಕ್ಕೆ ಸಂಬಂಧಿಸಿದವರ ಜೊತೆ ಚರ್ಚಿಸಿ, ನನ್ನ ಕೈಲಾದಷ್ಟು ಪ್ರಯತ್ನ ಮಾಡಿ, ನಿಮಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದರು.
ನಂತರ ಮಾತನಾಡಿದ ಶಿವಣ್ಣ ಶಿಕ್ಷಕರು ಕರ್ನಾಟಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 116 ಆಶ್ರಮ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 350ಕ್ಕೂ ಹೆಚ್ಚು ಶಿಕ್ಷಕರು ಕಳೆದ 15- 20 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ . ಇವರುಗಳಿಗೆ ಕೊಡುವ ವೇತನ ಅತ್ಯಂತ ನಿಕೃಷ್ಟವಾಗಿದ್ದು, 2250 ರೂ ಗಳಿಂದ ಪ್ರಸ್ತುತ 8500 ರೂಗಳನ್ನು ಪಡೆಯುತ್ತಿದ್ದಾರೆ. ಇವರು ದಟ್ಟ ಕಾಡುಗಳ ನಡುವೆ ಇರುವ ಬುಡಕಟ್ಟು ಮಕ್ಕಳಿಗೆ ವಿಧ್ಯಾಭ್ಯಾಸ ನೀಡುತ್ತಿದ್ದು, ಇವರು ಎಲ್ಲಾ ರೀತಿಯ ತರಬೇತಿ ಪಡೆದ ಶಿಕ್ಷಕರಾಗಿದ್ದು ಕಾಡುಗಳ ನಡುವೆ ಇರುವ ಶಾಲೆಗಳಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಶಿಕ್ಷಕರು ವೇತನ ಹೆಚ್ಚಳ ಹಾಗೂ ಖಾಯಂಮಾತಿಗೆ ಸಂಭಂದಿಸಿದಂತೆ ಅನೇಕ ಭಾರಿ ಸರ್ಕಾರಕ್ಕೆ ಮನವಿ ಮಾಡಿದ್ದರು ಸರ್ಕಾರದ ಕಡೆಯಿಂದ ಇವರ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿರುವುದಿಲ್ಲ. ಈ ಶಿಕ್ಷಕರು ಕರ್ನಾಟಕ ಆಡಳಿತ ಮಂಡಳಿಗೆ ಮೊರೆ ಹೋದ ಸಂದರ್ಭದಲ್ಲಿ ಕರ್ನಾಟಕ ಆಡಳಿತ ಮಂಡಳಿಯು ಸಹ ಈ ಶಿಕ್ಷಕರ ಮನವಿ ಪುರಸ್ಕಾರ ಮಾಡಬೇಕೆಂದು ಹೇಳಿರುತ್ತದೆ. ಆದರೂ ಸಹ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿರುವುದಿಲ್ಲ. ಮುಂದುವರೆದು ಸರ್ಕಾರದ ಅರ್ಜಿ ಸಮಿತಿಯಲ್ಲಿ ಅನೇಕ ಭಾರಿ ಚರ್ಚೆಗಳಾಗಿ ಸಂಭಂದ ಪಟ್ಟ ಎಲ್ಲಾ ಇಲಾಖೆಗಳು ಸಮಿತಿ ಅಧ್ಯಕ್ಷರು ಸದಸ್ಯರು ಎಲ್ಲಾ ಒಮ್ಮತದಿಂದ ಒಳ್ಳೆಯದಾಗುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು ಸಹ ನಮ್ಮ ಕೆಲಸದ ಕಡತ ಮುಂದುವರಿಯುವ ಹಾಗೆ ಕೆಲಸ ಮಾಡದೆ ಇರುವುದು ಈ ಶಿಕ್ಷಕರಿಗೆ ಮಾನಸಿಕವಾಗಿ ನೋವುಂಟು ಮಾಡಿರುತ್ತದೆ. ಇದುವರೆವಿಗೂ ಅತ್ಯಂತ ಕಡಿಮೆ ವೇತನಕ್ಕೆ ದುದಿಸಿಕೊಳ್ಳುತ್ತಿದ್ದು ಈಗಾಗಲೇ ಈ 350 ಕ್ಕೂ ಹೆಚ್ಚು ಶಿಕ್ಷಕರಲ್ಲಿ ಕೆಲವರು ಮರಣ ಹೊಂದಿದ್ದು ,ಕೆಲವರು ನಿವೃತ್ತಿ ಹೊಂದಿದ್ದು, ಕೆಲವರು ನಿವೃತ್ತಿ ಅಂಚಿನಲ್ಲಿದ್ದಾರೆ. ಮತ್ತು ಈ ಕೆಲಸವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಉಳಿದ ಶಿಕ್ಷಕರ ಜೀವನ ನಿರ್ವಹಣೆಯು ತುಂಬಾ ವ್ಯಥೆ ಇಂದ ಕೂಡಿರುತ್ತದೆ. ನಮ್ಮ ಕೆಲಸದ ವಿಚಾರದಲ್ಲಿ ಹೀಗೆಯೇ ವಿಳಂಬ ಧೋರಣೆ ಮುಂದುವರೆದಿದ್ದೇ ಆದರೆ ನಾವು ಹಾಗೂ ನಮ್ಮನ್ನು ನಂಬಿರುವ ಕುಟುಂಬಗಳು ಬೀದಿಪಾಲು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ… ಹಾಗಾಗಿ ಮಾನ್ಯ ಮುಖ್ಯ ಮಂತ್ರಿಗಳು ಸಂಬಂಧ ಪಟ್ಟ ಇಲಾಖೆ ಮಂತ್ರಿಗಳು ನಮ್ಮ ಕಷ್ಟವನ್ನು ನೋಡಿ ಕರುಣೆಯಿಂದ ನಮ್ಮ ಮನವಿಯನ್ನು ಪುರಸ್ಕರಿಸಿ , ನ್ಯಾಯ ಒದಗಿಸಿಕೊಡಬೇಕು ಎಂದು, ನಮ್ಮ ಬಾಳಿಗೆ ಬೆಳಕಾಗಬೇಕೆಂದು ಈ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತೇವೆ…ಎಂದು ಕೇಳಿಕೊಂಡರು..
ವರದಿ ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ