ನನ್ನ ತಾಯಿಗೆ ವಂದನೆ
ನನ್ನ ತಂದೆಗೆ ವಂದನೆ
ಮನೆಯ ಸಂಸ್ಕಾರಕೆ ವಂದನೆ
ನನ್ನ ಮನೆಯ ಪಾಠಶಾಲೆಗೆ ವಂದನೆ
ವಂದನೆ ನನ್ನ ವಂದನೆ
ನನ್ನ ಗುರುದೇವ ವಂದನೆ
ನನ್ನ ಗುರು ಮಾತೇ ವಂದನೆ
ನನ್ನ ಗುರುಗಳಿಗೆ ವಂದನೆ
ವಿದ್ಯೆಯ ಕಲಿಸಿದ ಗುರುಗಳಿಗೆ ವಂದನೆ
ಬುದ್ಧಿಯ ಕಲಿಸಿದ ಗುರುಗಳಿಗೆ ವಂದನೆ
ಗುರುವಿನ ಸಾಧನೆ ಗುರುಗಳಿಗೆ ವಂದನೆ
ಮಕ್ಕಳಿಗೆ ಕಲಿಸಿಕೊಟ್ಟ ಸಾಧನೆಗೆ ವಂದನೆ
ನನ್ನ ಕನಸು ನೀಡಿರುವ ಗುರುವಿಗೆ ವಂದನೆ
ನನಗೆ ಬುದ್ಧಿ ಕಲಿಸಿದ ಗುರುವಿಗೆ ವಂದನೆ
ಸಾಧನೆಗೆ ಸ್ಪೂರ್ತಿಯಾದ ನನ್ನ ಗುರುವೇ ವಂದನೆ
ಗುರಿಯನ್ನು ನಾ ತಲುಪಲು ದಾರಿ ತೋರಿದ ಗುರುಗಳಿಗೆ ವಂದನೆ
- ಅಕ್ಕಮಹಾದೇವಿ ,ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಮಹಿಳಾ ಉಪಾಧ್ಯಕ್ಷರು.



















