ಜೇವರ್ಗಿ:
:
74ನೇ ಗಣರಾಜ್ಯೋತ್ಸವವನ್ನು ಜೇವರ್ಗಿಯ ದತ್ತ ನಗರ ಬಡಾವಣೆಯಲ್ಲಿರುವ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಮತ್ತು ನಂತರ ರಾಷ್ಟ್ರಭಕ್ತರ ಭಾವಚಿತ್ರಕ್ಕೆ ಶಾಲಾ ಸಿಬ್ಬಂದಿ ವರ್ಗದ ವರು ಪೂಜೆ ಕಾರ್ಯಕ್ರಮವನ್ನು ನೆರೆವೇರಿಸಿದ ನಂತರ ಸಂಸ್ಥೆಯ ಅಧ್ಯಕ್ಷರಾದ ಹಣಮಂತ್ರಾಯಗೌಡ ಪಾಟೀಲ್ ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರೆವೇರಿಸಿದರು. ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಂಸ್ಕೃತಿಕ ಕಾರ್ಯಕ್ರಮಗಳಾದ ಹಾಡು,ನೃತ್ಯ, ಭಾಷಣ ಕಲೆಗಳು ಮುಂತಾದವುಗಳನ್ನ ಎಲ್ಲಾ ವಿದ್ಯಾರ್ಥಿಗಳಿಂದ ಅದ್ಭುತವಾಗಿ ಮೂಡಿಬಂದವು. 2022-23ನೇ ಸಾಲಿನಲ್ಲಿ ಪ್ರತಿಭಾ ಕಾರಂಜಿಯಲ್ಲಿ ವಲಯ ಮಟ್ಟದಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ್ ಪಾಟೀಲ್ ರವರು ಪ್ರಶಸ್ತಿ ಪತ್ರ ನೀಡಿ ಮೇಡಲ್ ಕೊಟ್ಟು ಮಕ್ಕಳ ಸಾಧನೆಯ ಬಗ್ಗೆ ಮತ್ತು ಸಂವಿಧಾನದ ಬಗ್ಗೆ, ಗಣರಾಜ್ಯೋತ್ಸವದ ಬಗ್ಗೆ ,ಗಣರಾಜ್ಯೋತ್ಸವದ ಹಿನ್ನೆಲೆ ಬಗ್ಗೆ ಸಹವಿವರವಾಗಿ ನೀಡಿದರು ತದನಂತರ ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಗೌರಮ್ಮ ಪಾಟೀಲ್ ರವರು ಕೂಡ ಸವಿಧಾನ ಎಂದರೇನು? ಸಂವಿಧಾನದ ಹಿನ್ನೆಲೆ ಏನು? ಈ ಸಂವಿಧಾನ ಅಥವಾ ಗಣರಾಜ್ಯೋತ್ಸವದ ವಿವರಣೆಯನ್ನು ಒಂದು ಅರ್ಥಪೂರ್ಣ ಕಥೆಯ ಮೂಲಕ ಮಕ್ಕಳ ಮನಸ್ಸನ್ನು ಆಕರ್ಷಣೆ ಮಾಡಿಕೊಂಡು ಸ್ವಾತಂತ್ರ್ಯದಿಂದ ಗಣರಾಜ್ಯೋತ್ಸವದ ವರೆಗೆ ಸವಿವರವಾಗಿ ಗಣರಾಜ್ಯೋತ್ಸವದ ಬಗ್ಗೆ ಅದ್ಭುತವಾಗಿ ಮಕ್ಕಳಿಗೆ ಸರಳ ಭಾಷೆಯ ಮುಖಾಂತರ ಅದ್ಭುತವಾಗಿ ಭಾಷಣವನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಪಾಲಕ/ಪೋಷಕ ಬಂಧುಗಳು,ವಿದ್ಯಾರ್ಥಿಗಳು,ಸಹ ಶಿಕ್ಷಕರು ಹಾಜರಿದ್ದರು.