ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇದೇ 19ರಂದು ವಿಕಲಚೇತನರಿಗಾಗಿ ಉಚಿತ UDID ಶಿಬಿರ

ಗುರುಮಠಕಲ್: ತಾಲೂಕಿನ ವಿಕಲಚೇತನರು UDID (Unique Disability ID) ಕಾರ್ಡ್ ಪಡೆಯಲು ಜಿಲ್ಲಾ ಆಸ್ಪತ್ರೆ ಯಾದಗಿರಿಗೆ ತೆರಳುವ ಅಗತ್ಯವಿಲ್ಲ. ಇದೇ ಸೆಪ್ಟೆಂಬರ್ ತಿಂಗಳ ಮೂರನೇ ಶುಕ್ರವಾರ 19ನೇ ತಾರೀಕಿನಂದು ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲೇ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಹಾಜರಾಗಲಿದೆ.

UDID ಕಾರ್ಡ್‌ನ ಮುಖ್ಯ ಪ್ರಯೋಜನಗಳು.

  • ಒಂದು ಕಾರ್ಡಿನಲ್ಲಿ ಎಲ್ಲಾ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿರುವುದರಿಂದ ದಿವ್ಯಾಂಗ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ದಾಖಲೆಗಳನ್ನು ಇರಿಸುವ ಅವಶ್ಯಕತೆ ಇರದು.
  • UDID ಕಾರ್ಡನ್ನು ದೇಶದಾದ್ಯಂತ ಗುರುತಿನ ದಾಖಲೆ ಏಕೈಕ ದಾಖಲೆವೆಂದು ಪರಿಗಣಿಸಲಾಗುತ್ತದೆ, ಇದರಿಂದ ಎಲ್ಲೆಡೆ ಇದು ಮಾನ್ಯವಾಗುತ್ತದೆ.
  • ಈ ಕಾರ್ಡ್ ಬಳಸಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ವಿವಿಧ ರೀತಿಯ ಸೌಲಭ್ಯಗಳು, ಸಧ್ಯಯೋಜನೆಗಳು ಮತ್ತು ಸವಲತ್ತುಗಳನ್ನು ಪಡೆಯಲು ಅವಕಾಶ ಇದೆ.
  • UDID ಕಾರ್ಡ್‌ನ ಸರ್ಕಾರಿ ಸವಲತ್ತುಗಳು ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ,ತೆರಿಗೆ ದಂಡನೆಯ ರಿಯಾಯಿತಿ, ರೈಲು ಮತ್ತು ರಾಜ್ಯ ಸಾರಿಗೆಯಲ್ಲಿ ಪ್ರಯಾಣಕ್ಕೆ ರಿಯಾಯಿತಿ.
  • ಸರ್ಕಾರಿ ಉದ್ಯೋಗಗಳಲ್ಲಿ ಮೀಸಲು ಹಾಗೂ ಉದ್ಯೋಗ ಅರ್ಜಿಸಿದಾಗ ಬಳಕೆ.
  • ಹೊಸ ವ್ಯವಹಾರ ಆರಂಭಿಸಲು ಸಾಲ ಸೌಲಭ್ಯ.
  • ಸಾಧನೆಯ ಉಚಿತ ಉಪಕರಣಗಳು (wheelchair, hearing aid, prosthesis) ರೂ. ಕಡಿಮೆ ದರದಲ್ಲಿ ಸಿಗುತ್ತದೆ.
  • ಸರ್ಕಾರಿ ಉದ್ಯೋಗಿಗಳಿಗೆ ಗುಂಪು ವಿಮೆ ವ್ಯವಸ್ಥೆ ಹಾಗೂ ನಿರುದ್ಯೋಗ ಭತ್ತ.

ಹೀಗೆ ಹತ್ತು ಹಲವು ಪ್ರಯೋಜನೆ ಇರುವ UDID ಕಾರ್ಡ್ ಇನ್ನೂ ಪಡೆಯದ ವಿಕಲಚೇತನರು ಈ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ಭಾಗವಹಿಸಬೇಕು ಎಂದು ಎಪಿಡಿ ಗುರುಮಠಕಲ್ ತಾಲ್ಲೂಕು ಸಂಯೋಜಕರಾದ ವಿರುಪಾಕ್ಷ ಮಾಲಿಪಾಟೀಲ ತಿಳಿಸಿದ್ದಾರೆ.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!