ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜಾಲಿಹಾಳ ಗ್ರಾಮದ ಶ್ರೀರೇಣುಕಾ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ಪುರಾಣ ಸಂಭ್ರಮದಲ್ಲಿ ಶಾರದೆಯ ಆರಾಧನೆ ಮೂಲಕ ಗ್ರಾಮದ ಮಕ್ಕಳಿಗೆ ವಿದ್ಯಾರಂಭದ ಕಾರ್ಯವನ್ನು ರುದ್ರಯ್ಯ ಶಾಸ್ತ್ರಿಗಳ ಸಮೂಹದಲ್ಲಿ ಶಾರದೆಯನ್ನು ನೆನೆದು ಬಾಳೆ ಎಲೆಯಲ್ಲಿ ತೆಂಗಿನಕಾಯಿ ವೀಳ್ಯದೆಲೆ ಇಟ್ಟು ಅಕ್ಕಿಯಲ್ಲಿ ಓಂಕಾರ ಮತ್ತು ಅ ಆ ಇ ಈ ಅಕ್ಷರಗಳನ್ನು ಬರೆಸಿದರು.ಈ ಸಂದರ್ಭದಲ್ಲಿ ಅವರು ಮಾತನಾಡಿ ವಿದ್ಯಾರಂಭ ಎಂಬುದು ಒಂದು ಸಂಸ್ಕಾರ. ಈ ಸಂಸ್ಕಾರವು ಬಹಳ ಪೂರ್ವದಿಂದಲೂ ಚೂಡಾಕರ್ಮದೊಡನೆಯೇ ಮಾಡುತ್ತಿದ್ದರು. ವಾಲ್ಮೀಕಿ ಮಹರ್ಷಿಗಳು ಲವ-ಕುಶರಿಗೆ ಚೂಡಾಕರ್ಮವಾದ ಮೇಲೆ ವಿದ್ಯಾರಂಭ ಮಾಡಿಸುತ್ತಿದ್ದರು ಎಂದು ಹೇಳಿದರು.ಕಾರ್ಯಕ್ರಮದ ಸಾನಿಧ್ಯದಲ್ಲಿ ರುದ್ರಯ್ಯ ಸ್ವಾಮಿಯವರು ದೇವಿಯ ಪುರಾಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಶ್ರೀರೇಣುಕಾ ಯಲ್ಲಮ್ಮ ದೇವಿಯ ಪುರಾಣದಲ್ಲಿ ಕೆಟ್ಟ ಗುಣಗಳೆಂಬ ರಾಕ್ಷಸರನ್ನು ಅನೇಕ ಅವತಾರಗಳ ಮೂಲಕ ಸಂಹರಸಿ ಭಕ್ತರನ್ನು ಕಾಪಾಡಿದ್ದಾಳೆ.ಕಾಮ,ಕ್ರೋದ, ಮೋಹ, ಲೋಭ, ಮದ, ಮತ್ಸರ, ಎಂಬ ಕೆಟ್ಟ ಗುಣಗಳು ರಾಕ್ಷಸರಾಗಿ ನಮ್ಮನ್ನು ನಮ್ಮ ಬದುಕನ್ನು ನಾಶ ಮಾಡುತ್ತಿವೆ ಶ್ರೀ ರೇಣುಕ ಯಲ್ಲಮ್ಮ ಪುರಾಣ ಪ್ರವಚನದ ಆರಾಧನೆಯಿಂದ ಕೆಟ್ಟ ಗುಣಗಳು ನಾಶವಾಗಿ ನಮ್ಮ ಬದುಕು ಸ್ವಚ್ಛ ಮತ್ತು ಶುದ್ಧ ಮನಸ್ಸಿನಿಂದ ಸುಂದರವಾಗಿರುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಗ್ರಾಮದ ಅನೇಕ ಮಹಿಳೆಯರು ಮತ್ತು ಪುರುಷರು ಹಾಗೂ ಬೇರೆ ಬೇರೆ ಗ್ರಾಮದ ಜನರು ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಪ್ರವಚನ ಪುರಾಣ ಕೇಳಲು ಉಪಸ್ಥಿತಿಯಲ್ಲಿದ್ದರು.
ವರದಿ ವೆಂಕಟೇಶ. ಹೆಚ್. ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.