ಹನೂರು:ಪ್ರತಿಯೊಬ್ಬ ಮನುಷ್ಯನಿಗೂ ಕಣ್ಣು ಮಹತ್ವವಾದುದ್ದು ಅಂತಹ ಕಣ್ಣಿನ ತಪಾಸಣೆ ನಮ್ಮ ಗಡಿ ಕಾಡಂಚಿನ ಗ್ರಾಮಗಳಲ್ಲಿ ಮಾಡುತ್ತಿರುವುದು ಎಲ್ಲಾ ಜನಾಂಗಕ್ಕೂ ಉಪಯೋಗವಾಗುವಂತ ಕೆಲಸವಾಗಿದೆ ಎಂದು ಪೊನ್ನಾಚಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶಿವಬಸಪ್ಪ ತಿಳಿಸಿದರು.
ಸಮೀಪದ ಪೊನ್ನಾಚಿ ಗ್ರಾಮದಲ್ಲಿ ಐಸಿಐಸಿಐ ಫೌಂಡೇಷನ್ ವತಿಯಿಂದ ಉಚಿತ ಕಣ್ಣಿನ ತಪಷಣಾ ಶಿಬಿರ ಹಮ್ಮಿಕೊಂಡಿದ್ದ ಸಮಯದಲ್ಲಿ ಮಾತನಾಡಿದ ಅವರು ಇಂತಹ ಒಳ್ಳೆಯ ಕಾರ್ಯಕ್ಕೆ ಶ್ರಮಿಸಿದ ಶಾಲಾ ಶಿಕ್ಷಕರಾದಿಯಾಗಿ ಎಲ್ಲಾ ಮುಖಂಡರು ಹಾಗೂ ಫೌಂಡೇಶನ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಮತಿ ಸುಷ್ಮಾ ಆರಾದ್ಯ ಸೇರಿದಂತೆ ಎಲ್ಲಾರಿಗೂ ಧನ್ಯವಾದ ತಿಳಿಸಿದರು ಇದೇ ಸಂದರ್ಭದಲ್ಲಿ ಮುಖಂಡರಾದ ಶಿವಣ್ಣ ಹಾಗೂ ಇನ್ನಿತರರು ಹಾಜರಿದ್ದರು.
