ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಮ್ಮೂರ ಜಾತ್ರೆ

ಜಾತ್ರೆಯ ಹರುಷ ಪ್ರತಿ ವರುಷ ಮರಳಿ ಮರಳಿ ಬರುವುದು ನಮ್ಮಯ ತನುಮನ ಪುಳಿಕಿತ ಗೊಳಿಸುತ ನವ ಚೈತನ್ಯವ ತುಂಬುವುದು

ಪಟಾಕಿ ಮದ್ದಿನ ಬಿರುಸಿನ ಸದ್ದು ಭಕ್ತರು ಕೇಳಿ ನಲಿಯುವರು ಬಾನಿಗೆ ಹಾರುವ ಬಣ್ಣಿನನ ಬಾಣವ ನೋಡಿ ಎಲ್ಲರೂ ಕುಣಿಯವರು

ಸುತ್ತುವ ಜೇಕಲಿ ಮಕ್ಕಳು ಕುಳಿತು ಕೇಕೆ ಹಾಕಿ ಹಾಡುವರು ಬಾನಲಿ ತೇಲುವ ತೊಟ್ಟಿಲಲ್ಲಿ ಕುಳಿತು ಕೊಂಡು ನಲಿಯುವರು

ಹಲವು ಬಗೆಯ ಆಟಿಕೆ ವಸ್ತು ರಂಗು ರಂಗಿನ ಬಳೆಗಳ ಸಂತೆ ನೋಡಲು ಕೊಳ್ಳಲು ಬರುವರು ಜನರು ಮರೆತು ತಮ್ಮಯ ನಿತ್ಯದ ಚಿಂತೆ

ಕಂಠಮಾಲೆಯು ರಥಕ್ಕೆ ಕಟ್ಟುತ ಹಾಲಾಗಿ ಜೇನಾಗಿ ಎಲ್ಲರೂ ಬೆರೆತು ಪೂಜೆಗೆ ತರುವರು ಕರ್ಪೂರ ಕಾಯಿ ಹಿಂದು ಮುಸ್ಲಿಮ್ ಭೇದವ ಮರೆತು

ರಥದಲ್ಲಿ ಕಾಡ ಸಿದ್ಧನ ಮೂರ್ತಿ ಅದೆಷ್ಟು ಸುಂದರ ಕಾಣುವುದು ಮನದಲ್ಲಿ ಪೂಜ್ಯ ಭಾವನೆ ಬೆಳೆಸಿ ಆತ್ಮಾನಂದವ ನೀಡುವುದು

ರುಚಿಕರ ನಮ್ಮ ಅವಲಕ್ಕಿ ಚೂಡಾ ಬೆಲ್ಲಶ್ ಬರ್ಫಿ ಪೇಡೆ ಕುಂದಾ ಬನಹಟ್ಟಿ ಜಾತ್ರೆಯ ಸೊಬಗನು ಸಾರುತ “ತಮ್ಮ”ನು ರಚಿಸಿದ ಈ ಕವನಂದಾ

ರಚನೆ: ಶಮಶೋದ್ದಿನ್ ಶಮ್‌ನಿಯಾಜಿ (ಝಾರೆ ಸರ್) ಶಾಂತಿ ನಗರ ಬನಹಟ್ಟಿ-587 311
ಮೊ: 7259863787

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!