ಇಣುಕಿ ನೋಡಿದೆ
ನನ್ನವಳ ಹೃದಯದಲ್ಲಿ
ನನ್ನಲ್ಲಿರುವ ಪ್ರೀತಿ ಪ್ರೇಮವನ್ನು
ಇಣುಕಿ ನೋಡಿದೆ
ನನ್ನವಳ ಮುಖದಲ್ಲಿ
ನನ್ನಲ್ಲಿರುವ ತುಸು ನಾಚಿಕೆಯನ್ನು
ಇಣುಕಿ ನೋಡಿದೆ
ನನ್ನವಳ ನೋಟದಲ್ಲಿ
ನನ್ನನ್ನು ಕದ್ದುಕದ್ದು ನೋಡುವುದನ್ನು
ಇಣುಕಿ ನೋಡಿದೆ
ನನ್ನವಳ ನಗೆಯನ್ನು
ನಾನು ನಡೆದು ಎದುರಿಗೆ ಬರುವುದನ್ನು
- ಗಿರೀಶಚಾರ ಎಸ್. ಸಹಶಿಕ್ಷಕರು
SJM ಕನ್ನಡ ಮಾಧ್ಯಮ ಶಾಲೆ ಮುರುಘಾ ಮಠ ಚಿತ್ರದುರ್ಗ.




















