ವಿಜಯಪುರ:ಝಳಕಿ ಗ್ರಾಮಸ್ಥರಿಂದ ದಿನಾಂಕ 1-2-2023 ರಂದು ಮಡಿವಾಳ ಮಾಚಿದೇವ ಜಯಂತಿಯನ್ನು ಆಚರಿಸಲಾಯಿತು. ಗ್ರಾಂ. ಪ.ಅಧ್ಯಕ್ಷರಾದ ಸಣ್ಣಪ್ಪ ತಳವಾರ ಹಾಗೂ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ರಾಘವೇಂದ್ರ ಕಾಪಸೆ ಹಾಜರಾಗಿದ್ದರು.ಅಖಿಲ ಕರ್ನಾಟಕ ಸೇವಾ ಸಮಿತಿಯ ಅಧ್ಯಕ್ಷರಾದ ಮಹೇಶ್ ಅಗಸರ ಮಾತನಾಡಿ ನಮ್ಮ ಮನಸ್ಸಿನ ಮೈಲಿಗೆಯನ್ನು ತೊಳೆದು ಶುದ್ಧಿಗೊಳಿಸಿದ ಶ್ರೇಷ್ಠ ಶರಣರಾದ ಮಡಿವಾಳ ಮಾಚಿದೇವರ ಜಯಂತಿಯನ್ನು ನಮ್ಮ ಮನಸ್ಸಿನಲ್ಲಿ ಪೂಜಿಸಿ ಮನೆ ಮನೆಯಲ್ಲಿ ಹಬ್ಬವಾಗಿ ಆಚರಣೆ ಮಾಡೋಣ ಎಂದು ತಿಳಿಸಿದರು.
