ಬಳ್ಳಾರಿ / ಕಂಪ್ಲಿ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಮನೆ ಮನೆ ಸಮೀಕ್ಷೆಯು ಸೆ.22ರಿಂದ ಅ.7ರ ವರೆಗೆ ರಾಜ್ಯಾದ್ಯಂತ ನಡೆಯಲಿದ್ದು, ಈ ಸಮೀಕ್ಷೆಯಲ್ಲಿ ಜಾತಿ ಕಾಲಂ ಕ್ರಮ ಸಂಖ್ಯೆ 9ರಲ್ಲಿ ಜಾತಿ ಉಪ್ಪಾರ ಕೋಡ್ ಸಂಖ್ಯೆ ಎ-1465 ಎಂದೇ ಬರೆಯಿಸಿ ಎಂದು ಕಂಪ್ಲಿ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಉಪ್ಪಾರ ನಾಗರಾಜ ತಿಳಿಸಿದರು.
ಅವರು ಪಟ್ಟಣದಲ್ಲಿ ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯ ಕುರಿತು ಮಾಹಿತಿ ಪಡೆದುಕೊಳ್ಳುವ ಸಮೀಕ್ಷೆ ವೇಳೆಯಲ್ಲಿ ನೈಜ ಜಾತಿಯನ್ನು ಪ್ರತಿಯೊಬ್ಬರು ನಮೂದಿಸಬೇಕು. ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಧಾರ ಕಾರ್ಡಿಗೆ ಕಡ್ಡಾಯವಾಗಿ ನಮೂದಿಸಿ ಜಾತಿ ಸಮೀಕ್ಷೆಯಲ್ಲಿ ಸರಿಯಾದ ಮಾಹಿತಿ ನೀಡುವುದರಿಂದ ಮಾತ್ರ ಸಮುದಾಯಕ್ಕೆ ಬರುವ ಹಕ್ಕುಗಳನ್ನು ಪಡೆಯಲು ಸಾಧ್ಯ. ಸಮಸ್ತರು ಧರ್ಮದ ಕಾಲಂನಲ್ಲಿ 8ರಲ್ಲಿ ಹಿಂದೂ. ಉಪ ಜಾತಿ ಕಾಲಂ 10ರಲ್ಲಿ ಉಪ್ಪಾರ ಎಂದು ನಮೂದಿಸಬೇಕು ಎಂದು ಉಪ್ಪಾರ ಸಮಾಜದವರಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಗೋವಿಂದಪ್ಪ, ಉಪಾಧ್ಯಕ್ಷ ವೆಂಕಟೇಶ ಉಪ್ಪಾರ, ಗೌರವಾಧ್ಯಕ್ಷ ರಾಮದಾಸ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















