ಶಿವಮೊಗ್ಗ: ಜಿಲ್ಲೆಯ ವಿದ್ಯಾವಂತರು ಹಾಗೂ ನಿರುದ್ಯೋಗಿಗಳು ಸಬಲರಾಗಬೇಕೆಂಬ ಉದ್ದೇಶದಿಂದ ಸ್ಥಾಪಿಸಲಾಗಿರುವ ಸಾಮಾಜಿಕ ಸೇವಾ ಸಂಸ್ಥೆಯಾಗಿರುವ ಜನಶಿಕ್ಷಣ ಸಂಸ್ಥೆಯಲ್ಲಿಯ ವಿವಿಧ ತರಬೇತಿಗಳನ್ನು ಸದುಪಯೋಗಿಸಿಕೊಂಡು ಇಂದಿನ ಯುವಕ-ಯುವತಿಯರು ಸಾಮಾಜಿಕ ಪ್ರಗತಿಯನ್ನು ಸಾಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕಾರ್ಯಕಾರಿ ಮಂಡಳಿ ಸದಸ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಕರೆ ನೀಡಿದರು.
ಜನ ಶಿಕ್ಷಣ ಸಂಸ್ಥೆಯ ಇತ್ತೀಚಿನ ಕಾರ್ಯಕ್ರಮದಲ್ಲಿ ಅವರು ಬಾಗವಹಿಸಿದ ಈ ಸಂದರ್ಭದಲ್ಲಿ ಬಿ.ಜೆ.ಪಿ. ರಾಜ್ಯ ಅದ್ಯಕ್ಷ ಶ್ರೀ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ, ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಬಿ.ವೈ. ಅರುಣಾ ದೇವಿ, ಶ್ರೀಮತಿ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್



















