ವಿಜಯಪುರ/ಚಡಚಣದಲ್ಲಿ ಬುಧವಾರ ಆಯೋಜಿಸಲಾದ ನವ ನಾಗಠಾಣ ಸಮಾವೇಶದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ಮಾತನಾಡಿದರು
ಪಟ್ಟಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ನವ ನಾಗಠಾಣ ಸಮಾವೇಶ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಗಠಾಣ ಮತಕ್ಷೇತ್ರದ ಅಭ್ಯರ್ಥಿ ಶ್ರೀಕಾಂತ ಬಂಡಿ ಅವರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಬಸವೇಶ್ವರರು ಜನಿಸಿದ ಹಾಗೂ ಸಿದ್ಧೇಶ್ವರ ಸ್ವಾಮೀಜಿ ನಡೆದಾಡಿದ ಈ ಜಿಲ್ಲೆ ಅಭಿವೃದ್ಧಿ ವಂಚಿತವಾಗಿದೆ. ತಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದೇನೆ ಬಸವಣ್ಣನವರ ಜನ್ಮ ಸ್ಥಳ ಬಾಗೇವಾಡಿ,ಐಕ್ಯ ಸ್ಥಳ ಕೂಡಲಸಂಗಮದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಿದ್ದೇನೆ ಎಂದರು.
ನಮ್ಮ ಪಕ್ಷದ ಪ್ರಣಾಳಿಕೆ ಶೀಘ್ರದಲ್ಲಿ ಬಿಡುಗಡೆಗೊಳಿಸಲಾಗುತ್ತದೆ ನಾಗಠಾಣ ಕ್ಷೇತ್ರಕ್ಕೆ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಶ್ರೀಕಾಂತ ಬಂಡಿ ಅವರನ್ನು ಘೋಷಣೆ ಮಾಡುತ್ತಿದ್ದೇನೆ ಅವರಿಗೆ ನಿಮ್ಮ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಪ್ರಗತಿ ಪಕ್ಷದ ನಾಗಠಾಣ ಮತಕ್ಷೇತ್ರದ ಅಭ್ಯರ್ಥಿ ಶ್ರೀಕಾಂತ ಬಂಡಿ ಮಾತನಾಡಿ, ಸ್ವಾಂತಂತ್ರ್ಯ ಸಿಕ್ಕು 75 ವರ್ಷ ಗತಿಸಿದರೂ ಈ ಕ್ಷೇತ್ರ ಅಭೀವೃದ್ಧಿಯಾಗಿಲ್ಲ ಉತ್ತಮ ರಸ್ತೆಗಳಿಲ್ಲ, ಚರಂಡಿ, ಶೌಚಾಲಯಗಳು, ಶುದ್ಧ ಕುಡಯುವ ನೀರು ಪುರೈಕೆ ಮರಿಚಿಕೆಯಾಗಿವೆ. ಗ್ರಾಮೀಣ ಭಾಗದಲ್ಲಿ ಬಸ್ ವ್ಯವಸ್ಥೆ ಇಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸಿ ನವ ನಾಗಠಾಣ ಮತಕ್ಷೇತ್ರ ನಿರ್ಮಾಣಕ್ಕೆ ಒಂದು ಬಾರಿ ನನಗೆ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಕೆಕೆಆರ್‌ಪಿ ಪಕ್ಷದ ಮುಖಂಡರಾದ ಸಂತೋಷ ರಾಠೋಡ, ಅನೀಲ ಬಂಡಿವಡ್ಡರ, ಅಭಯ ರಾಠೋಡ, ರಾಮು ಅಂಕಲಗಿ, ಶ್ರೀಧರ ಎಲ್, ರಾಮ ಝಡ್ಪೇಕರ, ಮಲ್ಲು ಧೋತ್ರೆ, ಅರ್ಜುನ ಚವ್ಹಾಣ, ಅರುಣ ಕುರಾಡೆ, ಭೀಮು ಗಾಡಿ ವಡ್ಡರ, ಲಕ್ಷ್ಮಣ ಗಾಡಿವಡ್ಡರ, ಸುರೇಶ ಗಾಡಿವಡ್ಡರ, ವಿಠ್ಠಲ ಧೋತ್ರೆ, ಸಿದ್ಧಾರಾಮ ಗಾಡಿವಡ್ಡರ, ಗೋಪಾಲ ಗಾಡಿವಡ್ಡರ, ಗಂಗಾಧರ ಪಾವಲೆ, ದೇವೀಂದ್ರ ಪಾಟೀಲ ಇದ್ದರು.
ವರದಿ:ಶ್ರೀಶೈಲ ಬಬಲಾದಿ