ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಗ್ರಾಮ ಪಂಚಾಯತ ಹೆಗಡಿಹಾಳ
ಇವರಿಂದ ನರೇಗಾ ದಿವಸ ಆಚರಣೆ ಯನ್ನು ದಿನಾಂಕ 02/02/2023ರಂದು ˌಹೆಗಡಿಹಾಳ ಗ್ರಾಮ ಪಂಚಾಯತ ರವರು ಜಿಲ್ಲಾ ಪಂಚಾಯತನ ಸಹಯೋಗದೊಂದಿಗೆ ˌಹೆಗಡಿಹಾಳ ಗ್ರಾಮದಲ್ಲಿಯ ಕೆರೆ ಹೂಳು ಎತ್ತುತಿದ್ದು ಕೆರೆಯ ದಡದಲ್ಲಿ ಮಾನ್ಶ ಕಾರ್ಯ ನಿರ್ವಾಹಕ ಅಧಿಕಾರಿಗಳಾದಂತ ಮಾನ್ಶ ಶ್ರೀ ರಾಹುಲ ಸಿಂಧೆ ಸಿಇಓ ಜಿˌಪಂ ವಿಜಯಪುರ ಇವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು ನರೇಗಾ ಸರಕಾರಿ ಕಾರ್ಯಕ್ರಮದ ಉದ್ದೇಶದ ಕುರಿತು ಸವಿಸ್ತಾರವಾಗಿ ವಿವರವಾಗಿ ಮಾತನಾಡಿ ಮೊದಲು ಜನ ಗುಳೆ ಹೊಗುವದನ್ನು ತಪ್ಪಿಸುವದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುವ ಹಾಗೂ ಜಾರಿಗೆ ತಂದ ದಿನವನ್ನು ನರೇಗಾ ದಿವಸ ಎಂದು ಆಚರಿಸಿ ಜನರಿಗೆ ಇನ್ನು ಹೆಚ್ಚಿನ ತಿಳುವಳಿಕೆ ಮೂಡಿಸಲು ನರೇಗಾ ದಿವಸ ಆಚರಣೆಗೆ ತರಲಾಗಿದೆ ಎಂದು
ಹಿತನುಡಿಗಳನ್ನಾಡಿದರುˌಕಾರ್ಯಕ್ರಮಕ್ಕೆ ಪ್ರಾರ್ಥನಾ ಗೀತೆ ಯನ್ನು ಹೆಗಡಿಹಾಳ ಶಾಲಾ ವಿಧ್ಶಾರ್ಥಿನಿಯರಾದ ಕು|ಸುದಿಪಾ ಕುಲಕರ್ಣಿ ಹಾಗೂ ಗ್ರಾಮ ಕಾಯಕ ಮಿತ್ರ ಕಾರ್ಯಕರ್ತರು ಹಾಡಿದರುˌಸ್ವಾಗತ ಭಾಷಣವನ್ನು ಶ್ರೀ ಜಾಫರ ಕಲಾದಗಿ ಪಿಡಿಓ ಗ್ರಾಮ ಪಂಚಾಯತ ಹೆಗಡಿಹಾಳ ಇವರು ನೆರವೇರಿಸಿದರುˌಸನ್ಮಾನ ಕಾರ್ಯಕ್ರಮವನ್ನು ಹೆಗಡಿಹಾಳ ಗ್ರಾಮ ಪಂಚಾಯತ ವತಿಯಿಂದ ˌಶ್ರೀ ರಾಹುಲ ಶಿಂಧೇ ಸಿಇಓ ಜಿಪಂ ವಿಜಯಪೂರ ಇವರಿಗೆˌ ಗ್ರಾಮ ಪಂಚಾಯತ ಅಧ್ಶಕ್ಷರಾದಂತ ಶ್ರೀ ರಾಮಸಿಂಗ ಪುರು ಲಮಾಣಿ ಇವರಿಂದ ಶಾಲು ಹೊದಿಸಿ ಮಾಲಾರ್ಪಣೆ ಮಾಡಿದರು ˌ ಶ್ರೀ ವಿಜಯಕುಮಾರ ಉಪಕಾರ್ಯದರ್ಶಿಗಳು ಜಿಪಂ ವಿಜಯಪುರ ಇವರಿಗೆ ಗ್ರಾಮ ಪಂಚಾಯತಿ ಸದಸ್ಶರಾದಂತ ಶ್ರೀ ಸಂಗಯ್ಶ ಸಂಗಮ ಸಾ|ಹೆಗಡಿಹಾಳ ಇವರು ಶಾಲು ಹೊದಿಸಿ ಮಾಲಾರ್ಪಣೆ ಮಾಡಿದರುˌಶ್ರೀ ಹೊಂಗಯ್ಶ ಕೆ ಮಾ ಮುಖ್ಶ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ವಿಜಯಪೂರ ಇವರಿಗೆ ಗ್ರಾಮ ಪಂಚಾಯತ ಸದಸ್ಶರಾದಂತ ಶ್ರೀ ಶ್ರೀಶೈಲ ಬಿರಾದರ ಸಾ| ಉಕುಮನಾಳ ಇವರು ಶಾಲು ಹೊದಿಸಿ ಮಾಲಾರ್ಪಣೆ ಮಾಡಿದರುˌಶ್ರೀ ಕಾಸಿಂಸಾಬ್ ಮಸಳಿ ಸಾಹಾಯಕ ನಿರ್ದೇಶಕರು ತಾಲುಕ ಪಂಚಾಯತ ವಿಜಯಪೂರ ಇವರಿಗೆ ಪ್ರಗತಿ ಪರ ರೈತರಾದ ಸಿದ್ದು ಚಲವಾದಿ ಇವರಿಂದ ಶಾಲು ಹೊದಿಸಿ ಮಾಲಾರ್ಪಣೇ ಮಾಡಿದರುˌ ಶ್ರೀ ಅರುಣ ಕುಮಾರ ದಳವಾಯಿ ಸಾಹಾಯಕ ಯೋಜನಾ ಅಧಿಕಾರಿ ಜಿಪಂ ವಿಜಯಪೂರ ಇವರಿಗೆ ಶ್ರೀ ತುಕ್ಕಪ್ಪ ಪುಜೇರಿ ಗ್ರಾಮ ಪಂಚಾಯತ ಸದಸ್ಶರು ಸಾ| ಹೆಗಡಿಹಾಳ ಇವರಿಂದ ಶಾಲು ಹೊದಿಸಿ ಮಾಲಾರ್ಪಣೆ ಮಾಡಿದರು ಹಾಗು ಇದೇ ಕಾರ್ಯಕ್ರಮದಲ್ಲಿ ಮಾನ್ಶ ಮುಖ್ಶ ಕಾರ್ಯನಿರ್ವಾಹಕ ಅಧಿಕಾರಿಗಳಾದಂತ ಶ್ರೀ ರಾಹುಲ ಸಿಂಧೇ ಯವರು ಅರ್ಹ ಫಲಾನುಭವಿಗಳಿಗೆ ಜಾಬ ಕಾರ್ಡ ವಿತರಿಸಿದರು ಹಾಗೂ ಕೆರೆ ದಂಡೆಯ ಮೇಲೆ ಕಾರ್ಯಕ್ರಮ ಆಯೋಜಿಸಿದ್ದರಿಂದ ಕೆರೆ ಹೂಳು ಏತ್ತುತ್ತಿರುವದನ್ನು ಕಣ್ಣಾರೇ ಕಂಡು ಹೆಗಡಿಹಾಳ ಗ್ರಾಮ ಪಂಚಾಯಿತಿ ಸದಸ್ಶರನ್ನು ಹಾಗೂ ಗ್ರಾಮಸ್ಥರ ಕಾರ್ಯಕ್ಕೆ ಅಭಿನಂದಿಸಿದರು.