ಹನೂರು:ನಮ್ಮ ದೇಶ ಕಂಡ ಅತ್ಯುತ್ತಮ ನಮ್ಮ ನಾಯಕ ಸನ್ಮಾನ್ಯ ಶ್ರೀನರೇಂದ್ರಮೋದಿ ಜಿ ಅವರಿಗೆ ಚಾಮರಾಜನಗರ ಜಿಲ್ಲೆಯ ವಿಶ್ವಕರ್ಮ ಸಮುದಾಯ ದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇವೆ.
ತಾವು ನೆನ್ನೆ 1/2/2023 ರಂದು ಬಜೆಟ್ ಮಂಡನೆಯಲ್ಲಿ ಮಂಡಿಸಿದ್ದ ನಮ್ಮ ವಿಶ್ವಕರ್ಮ ಸಮಾಜಕ್ಕೆ ಪ್ರತ್ಯೇಕ ಪ್ಯಾಕೇಜ್ ವಿಶ್ವಕರ್ಮ ಸಮ್ಮಾನ್ ಎಂಬ ಯೋಜನೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಿ ನಮ್ಮ ಸಮುದಾಯಕ್ಕೆ ಕೇಂದ್ರ ಸರ್ಕಾರ ಗುರುತಿಸಿ ಜಾರಿಗೆ ತಂದಿರುವುದಕ್ಕೆ ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮಾಜದ ಪರವಾಗಿ ಹೃದಯ ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇವೆ ಎಂದು
ಬಿ.ಕೆ.ಶ್ರೀನಿವಾಸ್ ಮೂರ್ತಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಾಮ ನಿರ್ದೇಶನ ಸದಸ್ಯರು ಚಾಮರಾಜನಗರ ಜಿಲ್ಲೆ (ಬಂಡಳ್ಳಿ )ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಉಸ್ಮಾನ್ ಖಾನ್
