ಕೋಲಾರ/ ಬಂಗಾರಪೇಟೆ: ಹೂವಿನ ಬೆಲೆ ಏಕಾಏಕಿ ಕುಸಿದ ಕಾರಣ ಸೋಮವಾರ ಮಾರುಕಟ್ಟೆಗೆ ತಂದಿದ್ದ ಹೂವುಗಳನ್ನು ಬೆಳೆಗಾರರು ರಸ್ತೆ ಬದಿ ಚೆಲ್ಲಿ ಹೋದರು.
ಸಾಲು, ಸಾಲು ಹಬ್ಬಗಳು ಮುಗಿಯುತ್ತಿದ್ದಂತೆ ಹೂವುಗಳನ್ನು ಕೇಳುವವರೇ ಇಲ್ಲದಂತಾಗಿದೆ. ಹೂವು ಕೀಳುವ ಕೂಲಿ ವೆಚ್ಚ, ಸಾಗಾಟ ಭರಿಸಲಾಗದ ಸ್ಥಿತಿ ಬಂದಿದೆ. ಹೂವು ಬೆಳೆಯಲು ಮಾಡಿದ ಖರ್ಚು ಕೂಡ ಕೈಗೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೂವು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು.
ಬಹುತೇಕ ಎಲ್ಲಾ ಹೂವುಗಳ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕೆ.ಜಿ ಚೆಂಡು ಹೂವು ಬೆಲೆ ₹10, ಸೇವಂತಿಗೆ ₹10–₹20 ಮತ್ತು ಗುಲಾಬಿ ₹30ಕ್ಕೆ ಕುಸಿತ ಕಂಡಿವೆ. ಕೆಲವು ಹೂವು ₹3 ರಿಂದ ₹5ಗೆ ಸಹ ಕೇಳುವವರಿಲ್ಲದಂತಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್



















