ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಕ್ರಮ ಗಣಿ ಸಂಪತ್ತಿಗೆ KRS ಪಕ್ಷದ ಸವಾಲ್, ಕುಟುಂಬ ರಾಜಕಾರಣದ ಮುಕ್ತಿಯೇ ನಮ್ಮ ಧ್ಯೇಯ

ಬಳ್ಳಾರಿಯಲ್ಲಿ ನಡೆದ ಎದ್ದೇಳು ಕನ್ನಡಿಗ, ಕೆ ಆರ್ ಎಸ್ ಪಕ್ಷ ಸೇರು ಬಾ ಅಭಿಯಾನ ಯಶಸ್ವಿ.

ಬಳ್ಳಾರಿ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಬಳ್ಳಾರಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷ ಸೇರು ಬಾ ಅಭಿಯಾನ ಯಶಸ್ವಿಯಾಗಿ ನಡೆಯಿತು. ನಗರದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ರಾಯಲ್ ಸರ್ಕಲ್, ಬೆಂಗಳೂರು ರಸ್ತೆ ಮೂಲಕ ಮೀನಾಕ್ಷಿ ಸರ್ಕಲ್ ಮೂಲಕ ಪಾದಯಾತ್ರೆ ಮಾಡಿ ಅಭಿಯಾನದ ಕುರಿತು ಜನ ಜಾಗೃತಿ ಹಾಗೂ ಪಕ್ಷದ ಸದಸ್ಯತ್ವ ಮಾಡುವ ಮೂಲಕ ದೇಣಿಗೆ ಸಂಗ್ರಹಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಸೋಮಸುಂದರ ಅವರು ಇತ್ತೀಚಿನ ದಿನಗಳಲ್ಲಿ ಕನ್ನಡಿಗರು ಅನುಭವಿಸುತ್ತಿರುವ ನೋವುಗಳಿಗೆ, ಕಷ್ಟ ಕಾರ್ಪಣ್ಯಗಳಿಗೆ ನಮ್ಮನ್ನು ಆಳುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳು ನೇರವಾಗಿ ಕಾರಣ. ಅವರವರ ಸ್ವಾರ್ಥದ ಮತ್ತು ಕುಟುಂಬದ ರಾಜಕಾರಣದಲ್ಲಿ ರಾಜ್ಯದ ಮತದಾರರನ್ನು ಮೂರ್ಖರನ್ನಾಗಿ ಮಾಡಿ ಜನರನ್ನು ವಂಚಿಸುತ್ತಿದ್ದಾರೆ ಜನಪರವಾದ ಆಡಳಿತ ನಡೆಸಬೇಕಾದ ಪಕ್ಷಗಳು ಜಾತಿ ರಾಜಕಾರಣ, ಹಣಬಲದ ರಾಜಕಾರಣದಲ್ಲಿ ತೊಡಗಿಸಿಕೊಂಡಿವೆ ಹಾಗಾಗಿ ನಮ್ಮ ಪಕ್ಷವು ಕನ್ನಡ ನಾಡಿನ ನೆಲ,ಜಲ,ಗಡಿ ಭಾಷೆಯ ಉಳಿವಿಗಾಗಿ ಮತ್ತು ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡುವಿಕೆಗಾಗಿ ಒತ್ತಾಯಿಸಿ ಮುಂದಿನ ನವಂಬರ್ ತಿಂಗಳಲ್ಲಿ ಒಂದು ಬಹುದೊಡ್ಡ ಸಮಾವೇಶ ಆಯೋಜಿಸಲಾಗುತ್ತಿದ್ದು ಸಮಸ್ತ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದ ಅಧ್ಯಕ್ಷ ಶ್ರೀ ಜೋಗನಹಳ್ಳಿ ಗುರುಮೂರ್ತಿ ಅವರು ಮಾತನಾಡಿ ಲಂಚಮುಕ್ತ- ಭ್ರಷ್ಟಚಾರ ಮುಕ್ತ ಕರ್ನಾಟಕಕ್ಕಾಗಿ, ಕುಟುಂಬ ರಾಜಕಾರಣ ತೊಲಗಿಸಲು, ನಿರುದ್ಯೋಗ ನಿವಾರಣೆಗಾಗಿ, ರೈತರ ಜೀವನಮಟ್ಟ ಸುಧಾರಣೆಗಾಗಿ, ಜನಸ್ನೇಹಿ ವ್ಯವಸ್ಥೆ ಕಟ್ಟಲಿಕ್ಕಾಗಿ, ಸರ್ವ ಜನಾಂಗದ ಅಭಿವೃದ್ಧಿಗಾಗಿ, ಕನ್ನಡ,ಕರ್ನಾಟಕದ ಅಸ್ಮಿತೆಗಾಗಿ ಕನ್ನಡಿಗರನ್ನು ಜಾಗೃತಿ ಮೂಡಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದು ಇದಕ್ಕೆ ಕನ್ನಡಪರ, ರೈತಪರ, ಪ್ರಗತಿಪರ ಸಂಘಟನೆಗಳ ಮುಖಂಡರು, ನಾಯಕರು ಬೆಂಬಲಿಸಬೇಕೆಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ್, ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ, ಶಿವರಾಜ್ ಕಪಗಲ್, ಎಸ್ ಸಿ, ಎಸ್ ಟಿ ಘಟಕದ ರಾಜ್ಯ ಉಪಾಧ್ಯಕ್ಷ ಸಂತೋಷ್ ಕುಮಾರ್, ಶ್ರೀನಿವಾಸ ರೆಡ್ಡಿ, ಯುವ ಘಟಕದ ರಾಜ್ಯ ಕಾರ್ಯದರ್ಶಿ ಖಾದರಬ್ಬಾಷಾ ಜಿಲ್ಲಾಧ್ಯಕ್ಷ ಯುಗಂದರ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರೆಡ್ಡಿ, ಕಾರ್ಯದರ್ಶಿಗಳಾದ ಮಂಜುನಾಥ್,ಜಾನ್, ಅನೀಫ್, ಜನಾರ್ಧನ ರೆಡ್ಡಿ, ನಾಗರಾಜ್,ರವಿ ಗೋನಾಳ, ಶ್ರೀನಿವಾಸ ಗೋನಾಳ, ಖಾದರಬಾಷ, ಮಂಜುನಾಥ್ ಗೌಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!