ಜಗದ್ಗುರು ಶ್ರೀ ತಿಂಥಣಿ ಮೌನೇಶ್ವರ ಜಾತ್ರೆಯ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಕಾರಟಗಿ ತಾಲೂಕಿನ ನಾಗನಕಲ್ಲು ಗ್ರಾಮದ ಶ್ರೀ ಜೀವಣ್ಣ ಕಾಳಪ್ಪ ಬಡಿಗೇರ ಇವರು ನಾಗನಕಲ್ಲು ಗ್ರಾಮದಿಂದ ಸತತವಾಗಿ ನಡೆದುಕೊಂಡು 28ನೇ ವರ್ಷದ ಪಾದಯಾತ್ರೆಯನ್ನು ಕೈಗೊಂಡಿದ್ದು ಬುಧವಾರ 3ನೇ ದಿನದ ಪಾದಯಾತ್ರೆ ಆರಂಭಿಸಿದ್ದಾರೆ.ಈ ಪಾದಯಾತ್ರೆ ಸುಮಾರು 125 ಕಿಲೋಮೀಟರ್ ರವರೆಗೆ ನಡೆಯಲಿದ್ದು,ಕಾರಟಗಿ, ಸಿಂಧನೂರು ನಗರದ ಭಕ್ತರು ಕೂಡ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.ಈ 3ನೇ ದಿನದ ಪಾದಯಾತ್ರೆಯು ಲಿಂಗಸೂರಿನ ಗುರುಗುಂಟಾ ಗ್ರಾಮದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ವಾಸ್ತವ್ಯ ಮಾಡಲಾಗಿತ್ತು ಇದೇ ಮಾರ್ಗದಲ್ಲಿನ ಪ್ರವಾಸಿ ತಾಣವಾದ ಗೊಲ್ಲಪಲ್ಲಿ (ನೀರು ಹರಿಯುವ ತಾಣ)ದಲ್ಲಿ ಸ್ನಾನ ಮಾಡಲು ತೆರಳಿದಾಗ ಅಲ್ಲಿ ಪ್ರವಾಸಿಗರು ಬಂದು ಹೋಗಿ ತಮ್ಮ ಬಟ್ಟೆಗಳನ್ನು, ತ್ಯಾಜ್ಯ ವಸ್ತುಗಳನ್ನು, ಪ್ಲಾಸ್ಟಿಕ್ ವಸ್ತುಗಳನ್ನು ಅಲ್ಲಿ ಬಿಟ್ಟು ಹೋಗಿರುವುದನ್ನು ಕಂಡ ಮೌನೇಶ್ವರರ ಕೃಪೆಯಿಂದ, ಮಾರ್ಗದರ್ಶನದಿಂದ ಮೌನೇಶ್ವರ ದೇವಸ್ಥಾನಕ್ಕೆ ತೆರಳುವ ಈ ಭಕ್ತರು ಈ ಒಂದು ಪ್ರವಾಸಿ ತಾಣವನ್ನು ಸ್ವಚ್ಛಗೊಳಿಸಲು ಮುಂದಾದರು. ಹೊಳೆಯ ಹತ್ತಿರ ಬಿದ್ದಿರುವ ಎಲ್ಲಾ ತ್ಯಾಜ್ಯ ವಸ್ತುಗಳನ್ನು ಒಂದಡೆ ಹಾಕಿ ಸ್ವಚ್ಛಗೊಳಿಸಿ ಮುಂದೆನೂ ಬರುವ ಪ್ರವಾಸಿಗರಿಗೆ ಅನುಕೂಲ ಮಾಡಿದರು.ನಂತರ ಸ್ನಾನ ಮಾಡಿದರು.ದೇವರನ್ನು ಕಾಣಲು ಹೊರಟ ಭಕ್ತರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದ ಮೌನೇಶ್ವರರಿಗೆ ಜೈ ಘೋಷಣೆ ಕೂಗುತ್ತಾ ಪಾದಯಾತ್ರೆ ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾದಯಾತ್ರೆ ಭಕ್ತರಾದ ಗಣೇಶ ಸುಕಲಪೇಟೆ ಅವರು ಸರ್ಕಾರ ಇಂತಹ ಪ್ರವಾಸಿ ತಾಣಗಳನ್ನು ಗುರುತಿಸಿ ಸ್ವಚ್ಛಗೊಳಿಸಬೇಕು ಮತ್ತು ಬರುವ ಪ್ರವಾಸಿಗರಿಗೆ ಸ್ನಾನಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕೆಂದರು ಮತ್ತು ಶ್ರೀ ಜಗದ್ಗುರು ತಿಂಥಣಿಯ ಮೌನೇಶ್ವರ ದೇವಸ್ಥಾನದ ಹತ್ತಿರ ಕೂಡ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ಈ ಪಾದಯಾತ್ರೆಯಲ್ಲಿ ವೀರೇಶ ಪತ್ತಾರ ಕಾರಟಗಿ,ಗಣೇಶ ಪತ್ತಾರ ಸುಕಲಪೇಟೆ, ಜೀವಣ್ಣ ನಾಗನಲ್ಲು ಇನ್ನೂ ಹಲವಾರು ಜನರು ಪಾಲ್ಗೊಂಡು ಗೊಲ್ಲಪಲ್ಲಿ ಪ್ರವಾಸ ತಾಣವನ್ನು ಸ್ವಚ್ಛಗೊಳಿದ ಎಲ್ಲ ಯಾತ್ರಿಕರಿಗೆ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಶುಭ ಕೋರಲಾಯಿತು.