ಇಂದು ಜಯ ಕರ್ನಾಟಕ ಜನಪರ ವೇದಿಕೆಯಿಂದ ಧಾರವಾಡದ ಹೊಸ ಬಸ್ ನಿಲ್ದಾಣದ ಎದುರುಗಡೆ ಬಡ ಜನರು ತಮ್ಮ ಹೊಟ್ಟೆ ಪಾಡಿಗಾಗಿ ರಸ್ತೆಯ ಪಕ್ಕ ಡಬ್ಬಾ ಅಂಗಡಿಯನ್ನು ಇಟ್ಟುಕೊಂಡು ಸುಮಾರು ವರ್ಷಗಳಿಂದ ವ್ಯಾಪಾರ ಮಾಡಿ ಜೀವನವನ್ನು ಸಾಗುತ್ತಿದ್ದರು ಆದರೆ ಇತ್ತೀಚಿಗೆ ಪಾಲಿಕೆ ಅಧಿಕಾರಿಗಳು ಡಬ್ಬಾ ಅಂಗಡಿಗಳನ್ನು ತೆರುವುಗೊಳಿಸಿದ್ದಕ್ಕೆ ಈಗ ಅವರ ಕುಟುಂಬಗಳು ಬೀದಿಗೆ ಬಂದಂತಾಗಿದೆ ಆದಕಾರಣ ಆ ಬಡ ಕುಟುಂಬಗಳಿಗೆ ವ್ಯಾಪಾರ ಮಾಡಲು ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ
ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿ 3 ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು,ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಜಗದೀಶ ಜಾಧವ್,ಸೋಮು ಬೈಲವಾಡ,ಮಲ್ಲಿಕಾರ್ಜುನ್ ಅಸುಂಡಿ,ಮಂಜುನಾಥ್ ಅಂಗಡಿ,ರಾಜು ಸವದತ್ತಿ, ರವಿ ಪಾಟೀಲ್, ಕಿರಣ್ ಹೊಸ್ಮನಿ, ರಾಜು ಪಾಟೀಲ್, ಮಾಂತೇಶ್ ನವಲಗುಂದ್, ಎಲ್ಲಪ್ಪ ತಳವಾರ್ , ಮಂಜು ಪೂಜಾರ್, ಮುಂತಾದವುರು ಉಪಸ್ಥಿದರು.
ವರದಿ – ಸದಾಶಿವ ಭೀ ಮುಡೆಮ್ಮನವರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ