ಯಾದಗಿರಿ: ಸುರಪುರ ತಾಲೂಕಿನ ಗೌಡಗೇರಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಮತ್ತು ಅಡಿಗಲ್ಲು ಸಮಾರಂಭ ಶಂಕುಸ್ಥಾಪನೆ. ಸನ್ಮಾನ್ಯ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಶಹಾಪುರ ಶಾಸಕರು ನೆರವೇರಿಸಿದರು. ಸರಕಾರಿ ಪ್ರೌಢ ಶಾಲೆ ಕಟ್ಟಡ ಸಿಸಿ ರಸ್ತೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಘನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಸಮಾರಂಭ. ಹಾಗೂ ದೇವಿಂದ್ರಪ್ಪ ಗೌಡ ಗೌಡಗೇರ ಫೌಂಡೇಶನ್ ವತಿಯಿಂದ ಸಗರನಾಡು ಗ್ರಂಥಾಲಯ ಮತ್ತು ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ದೇವಿಂದ್ರಪ್ಪ ಗೌಡ ಗೌಡಗೇರ ವಿದ್ಯಾರ್ಥಿಗಳ ಪರವಾಗಿ ಮಾತನಾಡಿ ನಮ್ಮ ಗೌಡಗೇರಾ ಗ್ರಾಮದ ಮುದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರೆ ನಮ್ಮ ಗ್ರಾಮದ ಹೆಸರು ಬರುವ ಹಾಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಐಎಎಸ್, ಕೆಎಸ್, ಕೆಪಿಎಸ್ಸಿ, ನಮ್ಮ ಗೌಡಗೇರಾ ಗ್ರಾಮದ ಒಳ್ಳೆ ಅಧಿಕಾರಿ ಆಗಬೇಕೆಂದು ಎಂದು ಹೇಳಿದರು.
ವಿದ್ಯಾರ್ಥಿಗಳು ಒಂದು ದಿನ ದೊಡ್ಡ ಸ್ಥಾನದಲ್ಲಿ ನಿಂತುಕೊಂಡರೆ ಸಾಕು ನಾನು ಕಂಡ ಕನಸು ನನಸಾದಂತೆ ಎಂದು ಹೇಳಿದರು. ವಿದ್ಯಾರ್ಥಿಗಳ ಪರವಾಗಿ ನಾನು ಏನು ಬೇಕಾದ್ರೂ ಮಾಡೋದು ದಕ್ಕೆ ರೆಡಿಯಾಗಿದ್ದೇನೆ. ಎಂದು ದೇವೇಂದ್ರಪ್ಪ ಗೌಡ ಗೌಡಗೇರ ಅವರು ಈ ಸಂದರ್ಭದಲ್ಲಿ ಮಾತನಾಡಿದರು. ಈ ವೇದಿಕೆ ಮೇಲೆ ಸನ್ಮಾನ್ಯ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಶಹಾಪುರ ಶಾಸಕರು ಮತ್ತು ದೇವಿಂದ್ರಪ್ಪ ಗೌಡ ಗೌಡಗೇರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಳಾದ ಮಹೇಶ ಪೂಜಾರಿ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ದೇವರಾಜ್ ಜೋಶಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯಲ್ಲಮ್ಮ ಪೊಲೀಸ್ ಬಿರಾದಾರ, ಗ್ರಾಮ ಪಂಚಾಯತಿ ಸದಸ್ಯರಾದ ನಾಗರೆಡ್ಡಿ ಮಾಲಿ ಬಿರಾದಾರ್, ಗ್ರಾಮ ಪಂಚಾಯತಿ ಸದಸ್ಯರು, ಮತ್ತು ಶಾಂತಗೌಡ ಮೇಟಿ ಗ್ರಾಮ ಪಂಚಾಯತ್ ಸದಸ್ಯರು, ನಿಂಗಾರೆಡ್ಡಿ ಕುಲಕರ್ಣಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಶರಣಗೌಡ ಹಚಡಗೌಡ ಕಾಂಗ್ರೆಸ್ ಮುಖಂಡರು, ಪರಶುರಾಮ್ ಬೇಟೆಗಾರ, ದೇವು ಮಡಿವಾಳ್ಕರ್, ಹಾಗೂ ಭೀಮಣ್ಣಗೌಡ ಅಚ್ಚಲ್ ಗೌಡ, ಮತ್ತು ಮಹಾತಗೌಡ ಪೋಲಿಸ್ ಬಿರಾದರ್, ಮಾಂತಗೌಡ ಮೇಟಿ, ಶಂಕ್ರಪ್ಪ ಹವಾಲ್ದಾರ್, ಎಂಕಪ್ಪ ಗುರಿಕಾರ, ಶರಣು ಗುರಿಕಾರ, ಮತ್ತು ಊರಿನ ಹಳೆ ವಿದ್ಯಾರ್ಥಿಗಳು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮತ್ತು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ