
ಚಿಂಚೋಳಿ ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನೂರಾರು ಎಕರೆಯಲ್ಲಿರುವ ಸಿದ್ಧ ಸಿರಿ ಎಥಿನಾಲ್ , ಪವರ್ ಘಟಕ ಪೂಜೆ ಮಾಡಿ ಕಬ್ಬು ನುರಿಸಲಾಯಿತು. ಸಿದ್ಧಸಿರಿ ಸೌಹಾರ್ದ ಸಹಕಾರಿ ನಿ. ಅಧ್ಯಕ್ಷರಾದ ಮಾನ್ಯ ಬಸನಗೌಡ ಪಾಟೀಲ ಯತ್ನಾಳಜಿ ಅವರು ನಿನ್ನೆ ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ಸಿದ್ಧಸಿರಿ ಎಥನಾಲ್ ಮತ್ತು ಪವರ್ ಘಟಕದ 2025-26ನೇ ಸಾಲಿನ ಕಬ್ಬು ನುರಿಸುವ ಕಾರ್ಯಾರಂಭ ಶುಕ್ರವಾರ ಕ್ರೇನ್ ಪೂಜೆಯು ತಾಲೂಕಿನ ಮಠಾಧೀಶ್ವರರ ಹಸ್ತದಿಂದ ನೆರವೇರಿತು. ಹರ ಗುರು ಚರ ಮೂರ್ತಿಗಳಾದ
ಶ್ರೀ ಪರಮಪೂಜ್ಯ ಶ್ರೀ ಷ ಪ್ರ ವಿಜಯ ಮಹಾಂತೇಶ್ವರ ಶಿವಾಚಾರ್ಯರು ಸಿದರಾಮೇಶ್ವರ ಸಂಸ್ಥಾನ ಹಿರೇಮಠ, ಚಿಮ್ಮಇದಲಾಯಿ.
ಶ್ರೀ.ಮ.ನಿ.ಪ್ರ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ವಿರಕ್ತ ಮಠ, ಭರತನೂರ.
ಶ್ರೀ ಷ. ಬ್ರ. ಕರಣೇಶ್ವರ ಶಿವಾಚಾರ್ಯರು, ನಿರಡಗುಂದ.
ಶ್ರೀ ಶ್ರೀ ಶ್ರೀ ಪೂಜ್ಯ ಬಾಲಯೋಗಿ ದತ್ತ ದಿಗಂಬರ ಶರಣ ಶಂಕರಲಿಂಗ ಮಹಾರಾಜರು, ಸ್ವಂತ, ಕಲಮೂಡ.
ಶ್ರೀ ಷ.ಬ್ರ.ಶ್ರೀ ಡಾ/ಶಾಂತಸೋಮನಾಥ ಶಿವಚಾರ್ಯರು, ಮಂಗಲಗಿ ಹಾಗೂ ಟೆಂಗಳ.
ಶ್ರೀ ಷ.ಬ್ರ.ಶ್ರೀ ಡಾ/ ಚನ್ನರುದ್ರಮನಿ ಶಿವಚಾರ್ಯರು, ಸೂಗೂರು.
ಶ್ರೀ ಷ.ಬ್ರ.ರೇವಣಸಿದ್ದ ಶಿವಚಾರ್ಯರು ರೇವಣಸಿದ್ದಶ್ವರ ಹಿರೆಮಠ, ರಟಕಲ್.
ಶ್ರೀ ಷ.ಬ್ರ.ಶ್ರೀ ಸಿದ್ದಲಿಂಗ ಶಿವಚಾರ್ಯರು, ಹೊಸಳ್ಳಿ.
ಶ್ರೀ.ಷ.ಬ್ರ ಶ್ರೀ ರಾಚೋಟೇಶ್ವರ ಶಿವಚಾರ್ಯರು ಚಂದನಕೇರ.
ಶ್ರೀ.ಷ.ಬ್ರ. ಶ್ರೀ ಬಸವಲಿಂಗ ಶಿವಚಾರ್ಯರು, ಕೂಡ್ಲಿ.
ಶ್ರೀ ಪೂಜ್ಯಶ್ರೀ ಪಂಪಾಪತಿ ದೇವರು ಮಹಾಂತೇಶ್ವರ ಮಠ, ಸುಲೇಪೇಟ
ಶ್ರೀ.ಷ.ಬ್ರ. ಶ್ರೀ ಉಪಮಾನ್ಯ ಶಿವಚಾರ್ಯರು, ಐನಾಪೂರ ಮತ್ತು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸನಗೌಡ ಪಾಟೀಲ್ ಮಾತನಾಡಿ ಈಗಾಗಲೇ ಸಿದ್ಧಸಿರಿ ಕಾರ್ಖಾನೆಯಲ್ಲಿ 870 ಜನ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವರ್ಷ 18 ಲಕ್ಷ ಟನ್ ಕಬ್ಬು ನಿರೀಕ್ಷೆಯಲ್ಲಿದ್ದೇವೆ, ಪ್ರತಿದಿನ 3,650 ಟನ್ ನುರಿಸುವ ಸಾಮರ್ಥ್ಯ ಇದ್ದು ದಿನಾಲೂ 6,000 ಟನ್ ಕಬ್ಬು ಖರೀದಿ ಮಾಡಲಾಗುತ್ತದೆ. ಈ ಕಾರ್ಖಾನೆಯ ಕೆಳಗೆ 320 ಹೆಚ್ಚು ಹಳ್ಳಿಗಳಿವೆ. ಶಾಲೆಯಲ್ಲಿ ಈಗಾಗಲೇ 1600 ಮಕ್ಕಳಿದ್ದಾರೆ ಎಂದರು.
ಯತ್ನಾಳ, ಶಾಸಕರು ಬಿಜಾಪುರ ಹಾಗೂ ಮಾಜಿ ಸಂಸದ ಡಾ. ಉಮೇಶ ಜಿ. ಜಾಧವ, ರೈತ ಮುಖಂಡ ಜಗದೀಶ ಛತ್ರಿ, ವೀರಣ್ಣ ಗಂಗಾಣಿ, ಆರ್ ಆರ್ ಪಾಟೀಲ್, ಶಿವರಾಜ ಪಾಟೀಲ್, ರೇವಣಸಿದ್ಧ ಬಡಾ, ಮಲ್ಲಿಕಾರ್ಜುನ ರದನೂರು, ವೀರೇಶ್ ಎಂಪಳ್ಳಿ, ಶರಣು ಬೈರಪ್, ಕೆ ಎಂ ಬಾರಿ, ಚಂದ್ರು ದೇಗಲಮಡಿ, ಸಿದ್ದಯ್ಯ ಸ್ವಾಮಿ, ವೀರಭದ್ರಪ್ಪ ಚಂದನಕೇರ, ರಮೇಶ ಹೆಬ್ಬಾಳ, ಚೇತನ ಸುಲೇಪೇಟ, ಮಲ್ಲು ಹೂಗಾರ, ವಿಶ್ವನಾಥ ಐನೂಲಿ ಮತ್ತು ಚಿಂಚೋಳಿ ತಾಲೂಕಿನ ಮಾಧ್ಯಮ ಮಿತ್ರರಾದ ಜಗನ್ನಾಥ ಸೇರಿಕಾರ, ರಾಮರಾವ ಮಹಾರಾಜ, ಶಿವರಾಜ ವಾಲಿ, ಶಾಮರಾವ ಚಿಂಚೋಳಿ, ಮೂವೀಜ್ ಪಟೇಲ್, ಚಾಂದಶಾ ಅಣವರ, ರಾಜೇಂದ್ರ ಪ್ರಸಾದ, ಸುನಿಲ ಸಲಗರ, ಹರ್ಷ ಚಿಂಚೋಳಿ, ವೆಂಕಟೇಶ ಚಿಂಚೋಳಿ, ಚಾಂದಪಾಶ, ಸುಮಂತ ಸಂಗಡೆ ~ನೂರಾರು ರೈತರು, ಅನೇಕ ಗಣ್ಯವ್ಯಕ್ತಿಗಳು ಸೇರಿದಂತೆ ಕಾರ್ಖಾನೆಯ ಸಿಬ್ಬಂದಿ ಇದ್ದರು.
ವರದಿ ಎಸ್ ವಿ ಗಂಗಾಣಿ.



















