ದಿನಾಂಕ 04-02-2023. ರಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ರಾಜ್ಯ ಅದ್ಯಕ್ಷರಾದ ಶ್ರೀ ಯುತ ನಿಂಗರಾಜ್ ಗೌಡ್ರು ಮತ್ತು ಮಹಿಳಾ ಅದ್ಯಕ್ಷರಾದ ಶ್ರೀ ಮತಿ ಎನ್ ಎಸ್ ಸುವರ್ಣಮ್ಮ ಇವರ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಲಸಬಾಳು ಗ್ರಾಮದಲ್ಲಿ. ಮಹಿಳಾ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮ ಮಾಡಲಾಯಿತು. ಈ ಕಾರ್ಯಕ್ರಮದ ಅದ್ಯಕ್ಷರಗಿರುವಂತ ಸುವರ್ಣಮ್ಮ ರವರು ಮಹಿಳೆಯರ ಪರವಾಗಿ ನೊಂದ ಶೋಷಣೆಗೆ ಒಳಗಾಗಿರುವ ,ಮಹಿಳೆಯರು, ಕಾರ್ಮಿಕರು,ರೈತರ,ಪರವಾಗಿ ಅಪ್ರಾಪ್ತ ಬಾಲಕಿಯರ ಮೇಲೆ ಆತ್ಯಚಾರವನು ತಡೆಗಟ್ಟುವ ವಿಚಾರವಾಗಿ ಮಹಿಳೆಯರ ಮೇಲೆ ದೌರ್ಜನ್ಯದ ಹೋರಾಟದ ಪರವಾಗಿ ಮಹಿಳೆಯರಿಗೆ ಸಂಘಟನೆಯ ಸಿದ್ಧಾಂತವನ್ನು ತಿಳಿಸಿದ್ದರು. ಈ ಕಾರ್ಯಕ್ರಮದ ಅದ್ಯಕ್ಷ ತೆಯನು ವಹಿಸಿರುವ ಶ್ರೀ ಮತಿ ಕವಿತ ಪರಮೇಶ್ವರಯ್ಯ ಇವರು ಮಾತನಾಡಿ ಕಾನೂನಾತ್ಮಕ ಮತ್ತು ನೊಂದ ಮಹಿಳೆಯರ ಪರವಾಗಿ ಹೋರಾಡುತ್ತೆವೆ ನ್ಯಾಯ ಕೊಡಿಸಲು ಜೊತೆಯಾಗಿ ಇರುತ್ತೆವೆ . ಒಬ್ಬ ಮಹಿಳೆ ಬರೀ ಅಡುಗೆ ಮನೆಗೆ ಸೀಮಿತವಲ್ಲ ಅವರು ಕೂಡ ಈ ಸಂಘಟನೆಯಲ್ಲಿ ನಿಲ್ಲಬೇಕು ಎಂಬ ಭರವಸೆಯನ್ನು ಪ್ರತಿಯೊಬ್ಬ ಮಹಿಳೆಯರಲ್ಲಿ ಮೂಡಿಸೋಣ ಎಂಬ ನಾಲ್ಕು ಮಾತನ್ನು ಹೇಳಿದರು ಇವರ ಅದ್ಯಕ್ಷತೆಯಲ್ಲಿ ನಾರಾರು ಮಹಿಳೆಯರು ಈ ಸಂಘಟನೆಯಲ್ಲಿ ಸೇರ್ಪಡೆಮಾಡಿಕೊಳ್ಳಯಲಾಯಿತು ಬಡವರ ಗುಡಿಸಲಿನಲಿ ಬೆಳಗಿದ ಕರ್ವೆಸ್ವಾಭಿಮಾನಿ ಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಹೆಸರುಗಳು ಕವಿತ, ರೇಖಾ, ಯಶೋಧ , ಅನ್ನಪೂರ್ಣ ,ಗೀತಾ, ರೇಣುಕಾ , ಪಾರಮ, ಪುಷ್ಪ ಸಿ, ನಾಗಮ್ಮ ಎ,ನೀಲಾಬಾಯಿ, ರೂಪ, ಪ್ರೇಮಕ್ಕ ,ಗಂಗಮ್ಮ ,ಮಮತ,ಬಸ ಮ ,ಕಾಮಾಕ್ಷಮ್ಮ,ಪವಿತ್ರ ಮುಂತಾದವರು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.