ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಪತ್ತು ನಿರ್ವಹಣೆಯಲ್ಲಿ ಅಗ್ನಿ ಶಾಮಕ ದಳದ ಪಾತ್ರ ಬಹು ಮುಖ್ಯ :ಸಂಗಣ್ಣ ಹವಾಲ್ದಾರ.

ಬಾಗಲಕೋಟೆ : ಬೆಂಕಿ, ಅಪಾಯಕಾರಿ ವಸ್ತುಗಳು, ಮತ್ತು ಇತರೆ ತುರ್ತು ಪರಿಸ್ಥಿಗಳಲ್ಲಿ ತಮ್ಮ ಜೀವನದ ಹಂಗು ತೊರೆದು ಕಾರ್ಯ ನಿರ್ವಹಿಸುವ ವೀರರನ್ನು ಹೊಂದಿರುವ ಸಂಸ್ಥೆ ಅಗ್ನಿಶಾಮಕದಳ ಸಂಸ್ಥೆಯಾಗಿದ್ದು ಇವರಿಂದ ಆಪತ್ಕಾಲದಲ್ಲಿ ಉಂಟಾಗುವ ಪ್ರಾಣಹಾನಿ,ಆಸ್ತಿ ಪಾಸ್ತಿ, ನಷ್ಟ ಕಡಿಮೆಯಾಗುತ್ತವೆ, ನಾವು ಕೂಡಾ ಇವರ ಸಲಹೆಗಳನ್ನು ತಿಳಿದುಕೊಂಡು ಆಗುವ ಅನಾಹುತಗಳನ್ನು ಆದಷ್ಟು ಪ್ರಯತ್ನಿಸಿ ತಪ್ಪಿಸಬೇಕು ಎಂದು ವಿಶ್ವ ಚೇತನ ಪಬ್ಲಿಕ್ ಸ್ಕೂಲ್ ಕಂದಗಲ್ಲನ ಸಂಸ್ಥೆಯ ಸಂಸ್ಥಾಪಕರು, ಈ ಸಾಲಿನ ತಾಲೂಕು ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತರಾದ ಸಂಗಣ್ಣ ಹವಲ್ದಾರ ಹೇಳಿದರು. ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ ಗ್ರಾಮದ “ಗುರುಮಹಾಂತ ರಂಗಮಂದಿರ ಮತ್ತು ಶಾಲೆಯ ಆವರಣದಲ್ಲಿ ” ಅಗ್ನಿ ಶಾಮಕ ಇಲಾಖೆಯಿಂದ ಅಗ್ನಿ ಅವಘಡದ ಮುಂಜಾಗ್ರತಾ ಕ್ರಮದ ಉಪನ್ಯಾಸ ಮತ್ತು ಅಣಕು ಪ್ರದರ್ಶನ ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಂಕಿ ಅವಘಡದ ಕುರಿತು ವಿಶೇಷ ಉಪನ್ಯಾಸವನ್ನು ಅಗ್ನಿ ಶಾಮಕದಳದ ಅಧಿಕಾರಿ ಜಗದೀಶ ಗಿರಡ್ಡಿ ಅವರು ಅಣುಕು ಪ್ರದರ್ಶನ ಮಾಡುವದರ ಮುಖಾಂತರ ನೀಡಿದರು. ಅಧಿಕಾರಿಗಳಾದ ಮಾರುತಿ ಜಾದವ್ , ಖಾಜೇಸಾಬ ಗುಂತಗುಳಿ, ಮಲ್ಲೇಶ ಡಂಬಳ, ದಯಾನಂದ ಹಡಪದ, ಉಪಸ್ಥಿತರಿದ್ದರು. ಗ್ರಾಮದ ನಿವೃತ್ತ ಶಿಕ್ಷಕ ಶೇಖರಪ್ಪ ಭೋವಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಗುರುಮಾತೆ ರೇಷ್ಮಾ ಗಾವಡಿ ಸೇರಿದಂತೆ ಗ್ರಾಮದ ವಿವಿಧ ಶಾಲೆಯ ಶಿಕ್ಷಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಗುರುಮಾತೆ ಕು.ಭವ್ಯಶ್ರೀ ಭಂಡಾರಿ, ಸ್ವಾಗತ ಭಾಷಣವನ್ನು ಗುರುಮಾತೆ ಶ್ವೇತಾ ತುಂಬದ, ವಂದನಾರ್ಪಣೆಯನ್ನುಕು ಪ್ರಸಾದ ನಾಯಕ ಮಾಡಿದರು. ಕಾರ್ಯಕ್ರಮದ ಕೇಂದ್ರ ಬಿಂದುವಾದ ಅಣಕು ಪ್ರದರ್ಶನವು ಆಕರ್ಷಣೀಯ ಮತ್ತು ಕುತೂಹಲಕಾರಿಯಾಗಿತ್ತು. ಶಾಲೆಯ ಎಲ್ಲಾ ಶಿಕ್ಷಕವೃಂದ, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು, ಪಾಲಕವೃಂದ, ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!