ಯಾದಗಿರಿ: ಶಹಾಪುರ ತಾಲೂಕಿನ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ನಡೆಯಿತು.
ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡಲಾಯಿತು. ಸಮಾರಂಭಕ್ಕೆ ಉದ್ಘಾಟಕರಾಗಿ ಆಗಮಿಸಿದ ಡಾ|| ಸರೋಜಾ ಪಾಟೀಲ್ ಖ್ಯಾತ ಸ್ತ್ರೀರೋಗ ತಜ್ಞರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಶಹಾಪುರ ಇವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ. ಕಡು ಬಡತನದಿಂದ ಬಂದ ಮಕ್ಕಳು ಉನ್ನತ ವ್ಯಾಸಂಗಕ್ಕೆ ಅಡಿಪಾಯ ಹಾಕಿದ ಈ ವಸತಿ ಶಾಲೆಗಳು ಹಲವಾರು ಮಕ್ಕಳಿಗೆ ಸೌಲಭ್ಯಗಳನ್ನು ಕೊಟ್ಟಿವೆ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು. ಸಮಾಜಕ್ಕೆ ಶ್ರೇಷ್ಠವಾದ ಕೊಡುಗೆಯನ್ನು ಕೊಡಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಸುರಯ್ಯ ಬೇಗಮ್ ಜಿಲ್ಲಾ ಸಮನ್ವಯ ಅಧಿಕಾರಿಗಳು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಯಾದಗಿರಿ ಇವರು ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ ಅವುಗಳನ್ನ ಚಾಚು ತಪ್ಪದೇ ಬಳಕೆ ಮಾಡಿಕೊಂಡು. ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿ ಎಂದು ಹೇಳಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಶರಣು ಕಸನ್ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಉಸ್ತುವಾರಿ ಇವರು ಹಿಂದಿನ ವರ್ಷ ಅತಿ ಹೆಚ್ಚು ಅಂಕಗಳ ಗಳಿಸಿದ ನಮ್ಮ ಶಾಲೆ ವಿದ್ಯಾರ್ಥಿಯಾದ ರಾಜು ಅವರಿಗೆ 10,000 ಪ್ರೋತ್ಸಾಹ ಧನವನ್ನು ನೀಡಿ ಅಂಬೇಡ್ಕರ್ ಆಶಯದಂತೆ ಶಿಕ್ಷಣಕ್ಕೆ ಮೊದಲ ಪ್ರೇರಣ ಕೊಡುತ್ತಾ ಪ್ರೇರೇಪಿಸ್ತಾ ಬಂದಿದ್ದಾರೆ.
ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ. ಪ್ರಾಂಶುಪಾಲರಾಗಿ ನೇಮಕವಾದ ಶ್ರೀ ಶ್ರೀಶೈಲ್ ತಳವಾರ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ವರ್ಗಾವಣೆಗೊಂಡಿರುವ ಶ್ರೀಮತಿ ಜಗದೇವಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಾಗಿ ಪ್ರಸ್ತುತ ಕೆಎಎಸ್ ಅಧಿಕಾರಿಯಾಗಿರುವ ನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಶೋಕ ಕೋಟಗೇರಾ
ಅವರನ್ನು ಹಾಗೂ
ಕರುನಾಡ ಕಂದ ಪತ್ರಿಕೆಯ ಸಂಪಾದಕರಾದ ಶ್ರೀ ಬಸವರಾಜ ಬಳಗಾರ ಅವರಿಗೆ ಕೂಡಾ ಸನ್ಮಾನಿಸಿದರು ಮತ್ತು ವೇದಿಕೆ ಮೇಲೆ ಶ್ರೀ ಶರಣು ಟಿ ಬೀರನೂರ್, ಶ್ರೀ ಶರಣಪ್ಪ ಹೊಸಳ್ಳಿ, ಹಾಗೂ ಶಿವರಾಜ್ ಬೀರನೂರ, ಮತ್ತು ಪ್ರಭಾರ ಪ್ರಾಂಶುಪಾಲರಾದ ಶ್ರೀ ಸಾಧಿಕ್ ಮಿಯ ಅವರ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಾಲೇಜಿನ ಎಲ್ಲಾ ಶಿಕ್ಷಕರು, ಶಿಕ್ಷಕಿಯರು ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಶ್ರೀ ಗೋವಿಂದರಾಜ್ ಶಿಕ್ಷಕರು ಅವರು ನಿರೂಪಿಸಿದರು. ಕುಮಾರ್ ಮುಬಾರಕ್ ಶಿಕ್ಷಕರು ಸ್ವಾಗತಿಸಿ ಶ್ರೀ ದೇವೇಂದ್ರಪ್ಪ ಮದ್ರಿಕಿ ಶಿಕ್ಷಕರು ವಂದಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ