ಮುಳ್ಳೂರು ಹಾಗೂ ಹರಳೆ ಗ್ರಾ.ಪಂ ವ್ಯಾಪ್ತಿಗೆ ಸೇರಿದ ಗ್ರಾಮಗಳಲ್ಲಿ ಸುಮಾರು 83 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಚಾಲನೆ ನೀಡಿದರು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಬಾರ್ಡ್ ಯೋಜನೆಯಡಿ 17 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ, ನಾಯಕರ ಬೀದಿಯಲ್ಲಿ 18 ಲಕ್ಷ ವೆಚ್ಚದಲ್ಲಿ ರಸ್ತೆ, ಉಪ್ಪಾರ ಬೀದಿಯಲ್ಲಿ 10 ಲಕ್ಷ ವೆಚ್ಚದಲ್ಲಿ ರಸ್ತೆ , ಪರಿಶಿಷ್ಟ ಜಾತಿ ಬೀದಿಯಲ್ಲಿ 10 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ಮುಂದುವರೆದ ಕಾಮಗಾರಿ ಹಾಗೂ ಹೊಸ ಹಂಪಾಪುರ 6 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಹಾಗೂ ದಾಸನಪುರ 6 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಹಾಗೂ ಹರಳೆ ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ಮುಂದುವರೆದ ಕಾಮಗಾರಿ, ನಾಯಕರ ಬೀದಿಯಲ್ಲಿ 6 ವೆಚ್ಚದಲ್ಲಿ ಸಿ.ಸಿ ರಸ್ತೆ ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನಡೆಸಿದರು.
ಈ ಸಂಧರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ರಾಜೇಂದ್ರ, ಮುಳ್ಳೂರು ಗ್ರಾ.ಪಂ ಅಧ್ಯಕ್ಷರು ಕಮಲ, ಉಪಾಧ್ಯಕ್ಷರು ದೊರೆರಾಜು, ಹರಳೆ ಗ್ರಾ.ಪಂ ಅಧ್ಯಕ್ಷರು ನಾಗರಾಜು, ಪಿಡಿಒ ರಾಜಮ್ಮಣಿ, ತೋಟೇಶ್, ಪಿಎಸಿಸಿ ನಿರ್ದೇಶಕರು ಮುಳ್ಳೂರು ಮಂಜುನಾಥ್, ಚೇತನ್ ದೊರೆ, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಜಿ.ಪಂ ಉಪವಿಭಾಗ ಎಇಇ ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಪುರುಷೋತ್ತಮ್, ಸಿಡಿಪಿಒ ಅಂಬಿಕಾ, ಪಿಡಿಒ ಸವಿತಾ, ಕೆ.ಆರ್.ಐ.ಡಿ.ಎಲ್ ಎಇಇ ಚಿಕ್ಕಲಿಂಗಯ್ಯ, ನಿರ್ಮಿತಿ ಕೇಂದ್ರ ಇಂಜಿನಿಯರ್ ಪ್ರತಾಪ್ ಹಾಗೂ ಇತರರು ಇದ್ದರು.
ವರದಿ : ಉಸ್ಮಾನ್ ಖಾನ್




















